Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯ ಮಟ್ಟದ ಕಾಯಕರತ್ನ ಪ್ರಶಸ್ತಿಗೆ ಚಿತ್ರದುರ್ಗದ ಜಿ.ಎಸ್.ಶಾಂತ ಕುಮಾರ್‌ ಆಯ್ಕೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಜೂ.22) :  ರಾಜ್ಯ ಮಟ್ಟದ ಕಾಯಕರತ್ನ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯಿಂದ ಜಿ.ಎಸ್.ಶಾಂತ ಕುಮಾರ್‌ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಮ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಪ್ರತಿ ವರ್ಷ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಮಾಜದಲ್ಲಿ ಉತ್ತಮವಾದ ಸೇವೆಯನ್ನು ಮಾಡಿದವರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಉತ್ತಮವಾದವರನ್ನು ಆಯ್ಕೆ ಮಾಡಿ ರಾಜ್ಯ ಮಟ್ಟದಲ್ಲಿ ಕಾಯಕರತ್ನ ಪ್ರಶಸ್ತಿನ್ನು ನೀಡುತ್ತಿದೆ.

ಈ ಬಾರಿ ಚಿತ್ರದುರ್ಗ ಜಿಲ್ಲೆಯಿಂದ ಕೆ.ಎಸ್.ಆರ್.ಟಿ.ಸಿ ಚಿತ್ರದುರ್ಗ ಘಟಕದಲ್ಲಿ ನಿರಂತರ ಸೇವೆ ಮಾಡುತ್ತಿರುವ ಹಾಗೂ ತನ್ನ ಸೇವಾ ಅವಧಿಯಲ್ಲಿ ಅಪಘಾತ  ರಹಿತ ಸೇವೆ ಸಲ್ಲಿಸುತ್ತಿರುವ ವಾಹನ ಚಾಲಕರಾದ ಜಿ.ಎಸ್.ಶಾಂತಕುಮಾರ್ ರವರನ್ನು ಈ ಪ್ರಶಸ್ತಿಗೆ ಬಾಜನಾಗಿರುತ್ತಾರೆ.

ಜಿ.ಎಸ್.ಶಾಂತಕುಮಾರ್ ರವರು ಜಗಳೂರು ತಾಲ್ಲೂಕಿನ ಗೌರಮ್ಮನಹಳ್ಳಿಯಲ್ಲಿ ಜನಿಸಿದ್ದು, 2002ರಲ್ಲಿ ಪ್ರಥಮವಾಗಿ ಬಿಜಾಪುರ ಜಿಲ್ಲೆಯಲ್ಲಿನ ಚಿಕ್ಕೋಡಿ ಡಿಪೋನಲ್ಲಿ ನೇಮಕಾತಿ ಹೊಂದಿದ್ದು, ಇವರು ದಾವಣಗೆರೆ, ಶಿವಮೊಗ್ಗ, ಭದ್ರಾವತಿ ಕೆಲಸ ನಿರ್ವಹಿಸಿ ಈಗ ಹಾಲಿ ಚಿತ್ರದುರ್ಗದಲ್ಲಿ 2009ರಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರು ವಾಹನ ಚಾಲನೆ ಸೇವೆಯಲ್ಲಿ ತೃಪ್ತಿಕರವಾಗಿರುತ್ತದೆ ಎಂದು ತಿಳಿಸಿರುತ್ತಾರೆ ಅಲ್ಲದೆ ಒಂದು ಬೆಳ್ಳಿ ಒಂದು ಬಂಗಾರ 2 ಪ್ರಶಸ್ತಿಪತ್ರಗಳು ಲಭಿಸಿವೆ. ಇವರಿಗೆ ಇವರ ಕುಟುಂಬವು ಪತ್ನಿ ಹಾಗೂ ಒಂದು ಗಂಡು ಒಂದು ಹೆಣ್ಣು ಇದ್ದು, ಇವರು ಪಿಯುಸಿ, ಐಟಿಐ ವಿದ್ಯಾಭ್ಯಾಸ ಮುಗಿಸಿ ವಾಹನ ಚಾಲನೆ ಪರವಾನಗಿ ಪಡೆದಿರುತ್ತಾರೆ. ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿರುವುದಕ್ಕೆ ಅತ್ಯಂತ ಸಂತೋಷವಾಗಿದೆಯೆಂದು ತಿಳಿಸಿರುತ್ತಾರೆ.

ರಾಜ್ಯಮಟ್ಟದ “ಕಾಯಕರತ್ನ” ಪ್ರಶಸ್ತಿಯ ಕಾರ್ಯಕ್ರಮವು ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರದ ಕೆ.ಎಂ.ಹೆಚ್.ಕಲ್ಯಾಣ ಮಂಟಪದಲ್ಲಿ ಜೂನ್ 25 ರೆಂದು  ಭಾನುವಾರ ಬೆಳಿಗ್ಗೆ 10:30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ರಾಷ್ಟ್ರಧ್ಯಕ್ಷರಾದ ಡಾ|| ಹುಲಿಕಲ್ ನಟರಾಜ್, ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾ ಸ್ವಾಮೀಜಿ ವಿಶ್ರಾಂತ ನ್ಯಾಯಮೂರ್ತಿಗಳಾದ  ಪಿ.ಗೋಪಾಲಗೌಡ, ಸಚಿವರಾದ ಕೆ.ಹೆಚ್.ಮುನಿಯಪ್ಪ, ಇಸ್ರೋ ವಿಜ್ಞಾನಿ ಡಾ. ಎ.ಎಸ್.ಕಿರಣ್‍ಕುಮಾರ್ ಮತ್ತು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ಹಾಗೂ ಇತತರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಒಟ್ಟು 43 ಸಾಧಕರಿಗೆ ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ತಪ್ಪದೇ ಭಾಗವಹಿಸಬೇಕೆಂದು ಜಿಲ್ಲಾ ರಾಜ್ಯಧ್ಯಕ್ಷರಾದ ನಾಗರಾಜ್ ಸಂಗಮ್ ಮತ್ತು ಕಾರ್ಯದರ್ಶಿ.ಪಿ.ಲೋಕೆಶ್ ಕೋರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ  8747825425 / 9448664710 ಸಂಪರ್ಕಿಸಲು ಕೋರಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!