ಬೆಂಗಳೂರು: ಸದನದಲ್ಲಿ ಈ ಬಾರಿ ವಿಪಕ್ಷ ನಾಯಕರು ರಾಜ್ಯದ ಗೃಹಲಕ್ಷ್ಮೀಯರ ಪರವಾಗಿ ಧ್ವನಿ ಎತ್ತಿದ್ದರು. ಎರಡು ತಿಂಗಳು ಗೃಹಲಕ್ಷ್ಮೀಯರ ಹಣ ಸಂದಾಯವೇ ಆಗಿಲ್ಲ. ಗೃಹಲಕ್ಷ್ಮೀ ಯೋಜನೆಗೆಂದು ಇಟ್ಟಿದ್ದ ಐದು ಸಾವಿರ ಕೋಟಿ ಹಣ ಎಲ್ಲಿ ಹೋಯ್ತು ಎಂದು ಜೋರು ಧ್ವನಿಯಲ್ಲಿಯೇ ಕೇಳಿದ್ದರು. ಅಷ್ಟೇ ಅಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ ಸುಳ್ಳನ್ನ ಸಾಕ್ಷಿ ಸಮೇತ ಪ್ರೂವ್ ಮಾಡಿದರು. ಸಚಿವೆ ಇದಕ್ಕೆ ಕ್ಷಮೆ ಕೇಳಲೇಬೇಕೆಂದು ಒತ್ತಾಯ ಕೂಡ ಹೇರಿದರು. ಇದೊಇಗ ಗೃಹಲಕ್ಷ್ಮೀ ಹಣದ ಸಂಬಂಧ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
2024ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಹಾಕಿಲ್ಲ. ಅದು ನಿಜ ನನಗೆ ಗೊತ್ತಿದೆ. ಆದ್ರೆ ಮಾಹಿತಿ ಕೊರತೆಯಿಂದ ಕಣ್ತಪ್ಪಿನಿಂದ ಸಚಿವರು ಕೊಟ್ಬಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಅದನ್ನ ಸಚಿವರು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸೌಜನ್ಯಯುತವಾಗಿ ಒಪ್ಪಿಕೊಂಡೊದ್ದಾರೆ. ಅದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಇದೇ ವೇಳೆ ಹಾಗಾದ್ರೆ ಆರ್ಥಿಕ ವರ್ಷ ಮುಗಿದಿದೆಯಲ್ಲ ಮತ್ತೆ ಆ ಹಣವನ್ನ ಗೃಹಲಕ್ಷ್ಮೀಯರ ಖಾತೆಗೆ ಹಾಕುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ. ಇದನ್ನು ಗಮನಿಸಿದರೆ ಏನು ಹಣ ಬಂದಿಲ್ಲ ಆ ಎರಡು ತಿಂಗಳ ಹಣ ಇನ್ಮುಂದೆ ಬರುವುದು ಅನುಮಾನದಂತೆ ಕಾಡುತ್ತಿದೆ. ಎಷ್ಟೋ ಹೆಣ್ಣು ಮಕ್ಕಳು ಈ ಗೃಹಲಕ್ಷ್ಮೀ ಹಣದಿಂದಾನೆ ಒಂದಿಷ್ಟಾದರೂ ನೆಮ್ಮದಿಯ ಬದುಕನ್ನ ಕಟ್ಟಿಕೊಳ್ಳುತ್ತಿದ್ದರು. ಆದರೆ ಸರಿಯಾಗಿ ಹಣ ಸಂದಾಯವಾಗದೆ ಮತ್ತೆ ಪರದಾಟ ಶುರುವಾದಂತೆ ಆಗಿದೆ.





