Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ ರಾಜ್ಯೋತ್ಸವಕ್ಕೆ ರೇಡಿಯೋ ಶಿವಮೊಗ್ಗದಿಂದ ಭರ್ಜರಿ ಸಿದ್ಧತೆ : 24 ಗಂಟೆಗಳ ನಿರಂತರ ನೇರಪ್ರಸಾರ!

---Advertisement---

 

ಸುದ್ದಿಒನ್, ಶಿವಮೊಗ್ಗ, ಅಕ್ಟೋಬರ್. 29 : ರೇಡಿಯೋ ಶಿವಮೊಗ್ಗ 90.8ಎಫ್.ಎಂ ವತಿಯಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದ್ದು ಕನ್ನಡ ಮಾಧ್ಯಮಲೋಕದಲ್ಲಿ ಪ್ರಪ್ರಥಮ ಬಾರಿಗೆ ದಿನದ 24 ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಕನ್ನಡ ನಾಡು, ನುಡಿ, ಕಲೆ-ವಾಸ್ತುಶಿಲ್ಪ, ಸಾಹಿತ್ಯ ಹೀಗೆ ಕನ್ನಡದ ವಿಚಾರಗಳ ಬಗ್ಗೆ ನಿಲಯದ ಆರ್.ಜೆ ಗಳು ಮಾತನಾಡಲಿದ್ದಾರೆ. ನವಂಬರ್ 1 ರ ಬೆಳಗ್ಗೆ 6.00 ರಿಂದ ಮರುದಿನ ಬೆಳಗ್ಗೆ 6.00 ರ ವರೆಗೆ ನಿರಂತರ ನೇರಪ್ರಸಾರ ನಡೆಯಲಿದೆ. ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಿಂದಲೂ ಈ ಕಾರ್ಯಕ್ರಮಕ್ಕೆ ಕೇಳುಗರು ಕಾಲ್ ಮಾಡಿ ರಾಜ್ಯೋತ್ಸವದ ಕುರಿತು ಮಾತನಾಡಬಹುದು.

24 ಗಂಟೆಗಳ ಕಾಲ ಸಿ.ಚೇತನ್ ಕುಮಾರ್ ಇವರು ನೇರಪ್ರಸಾರದಲ್ಲಿ ಇರಲಿದ್ದಾರೆ. ಇವರು ಚಿತ್ರದುರ್ಗದ ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೊತೆಗೆ ನಿಲಯದ ಆರ್.ಜೆ ಗಳಾದ ಶ್ವೇತಾ, ಮಹಾಲಕ್ಷ್ಮಿ, ಪವಿತ್ರದಿನೇಶ್, ಅರ್ಪಿತ, ರಕ್ಷಿತಾ, ಶ್ರೀಧರ್ ಇವರೆಲ್ಲರೂ ಕನ್ನಡ ರಾಜಮನೆತನಗಳ ಬಗ್ಗೆ, ಭಾಷೆ ಬೆಳೆದು ಬಂದ ಬಗೆ, ಕನ್ನಡ ಸಾಹಿತ್ಯ, ಕವಿಗಳು, ಕನ್ನಡ ನಾಡಿನ ಪರಿಸರ, ಪ್ರೇಕ್ಷಣೀಯ ಸ್ಥಳಗಳು, ಕ್ರೀಡೆ, ರಂಗಭೂಮಿ, ಸಿನಿಮಾ, ಕಲೆ-ವಾಸ್ತುಶಿಲ್ಪ, ಸಮೂಹ ಮಾಧ್ಯಮ, ಕನ್ನಡದ ಸಾಧಕರು ಹೀಗೆ ಕನ್ನಡದ ಬಗೆಗೆ, ಕನ್ನಡಿಗರ ಬಗ್ಗೆ ಮಾತನಾಡಲಿದ್ದಾರೆ.

ಕನ್ನಡದ ಬಗೆಗೆ ಪ್ರತೀ 1 ಗಂಟೆಗೆ ಕೇಳುವ ಪ್ರಶ್ನೆಗೆ ಉತ್ತರ ನೀಡಿ ಬಹುಮಾನ ಗೆಲ್ಲಬಹುದು. ದಿನದ ಎಲ್ಲಾ ಪ್ರಶ್ನೆಗಳಿಗೂ ಹೆಚ್ಚು ಉತ್ತರ ನೀಡುವವರಿಗೆ ವಿಶೇಷ ಬಹುಮಾನ ಸಿಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಲು 9686096279 ಗೆ ಕರೆ ಮಾಡಬಹುದು. ಸಾಮಾನ್ಯ ಎಫ್.ಎಂ ಜೊತೆಗೆ ಗೂಗಲ್‌ ಪ್ಲೇಸ್ಟೋರ್‌ ನಲ್ಲಿ ಸಿಗುವ ರೇಡಿಯೋ ಶಿವಮೊಗ್ಗ 90.8 ಎಫ್.ಎಂ ಆಪ್‌ ಮೂಲಕವೂ ಕಾರ್ಯಕ್ರಮ ಆಲಿಸಬಹುದು.

ಈ ಎಲ್ಲಾ ಕಾರ್ಯಕ್ರಮಗಳಿಗೂ ನಿಲಯದ ನಿರ್ದೇಶಕರಾದ ಜನಾರ್ಧನ್.ಜಿ.ಎಲ್, ರಾಜ್ಯ ಸಮುದಾಯ ಬಾನುಲಿಗಳ ಸಂಘದ ರಾಜ್ಯಾಧ್ಯಕ್ಷ ಗುರುಪ್ರಸಾದ್, ನಿಲಯದ ಕಾರ್ಯಕ್ರಮ ಅಧಿಕಾರಿ ಮಂಜುನಾಥ್, ಪತ್ರಕರ್ತ ಹಾಲಸ್ವಾಮಿ.ಆರ್.ಎಸ್ ಇವರ ಮಾರ್ಗದರ್ಶನದಲ್ಲಿ ಮೂಡಿಬರಲಿದೆ. ಎಂದು ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now