Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ನವೆಂಬರ್ 2 ರಂದು ಪಿಂಚಣಿದಾರರಿಗೆ ಉಚಿತ ಜೀವನ ಪ್ರಮಾಣ ಪತ್ರ ಅಭಿಯಾನ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಅ. 30 : ಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ನಿವೃತ್ತ ನೌಕರರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಹೊಳಲ್ಕೆರೆ ರಸ್ತೆಯಲ್ಲಿನ ಚಿತ್ರದುರ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ದಿನಾಂಕ 2/11/2026 ರ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಕೇಂದ್ರ, ರಾಜ್ಯ ಹಾಗೂ ಸಾರ್ವಜನಿಕ ಕ್ಷೇತ್ರದ ನಿವೃತ್ತ ನೌಕರರಿಗೆ ಮತ್ತು ಕುಟುಂಬ ಪಿಂಚಿಣಿದಾರರಿಗೆ ಉಚಿತವಾಗಿ ಜೀವನ ಪ್ರಮಾಣ ಪತ್ರ ಅಭಿಯಾನ (ಆigiಣಚಿಟ ಟiಜಿe ಛಿeಡಿಣiಜಿiಛಿಚಿಣe ಛಿಚಿmಠಿಚಿigಟಿ ) ಏರ್ಪಡಿಸಲಾಗಿದೆ.

ಜೀವನ ಪ್ರಮಾಣ ಪತ್ರದ ಅಭಿಯಾನಕ್ಕೆ ಬರುವ ನಿವೃತ್ತ ನೌಕರರು ತಮ್ಮ ಇಲಾಖಾ ಪಿಂಚಣಿ ಪುಸ್ತಕ, ಪಿಂಚಣಿ ಜಮಾ ಆಗುತ್ತಿರುವ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಉಳಿತಾಯ ಖಾತೆ ಪಾಸ್‍ಬುಕ್, ನಿಮ್ಮ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡಿಗೆ ಜೋಡಣೆಯಾಗಿರುವ ನಿಮ್ಮ ಮೊಬೈಲ್ ಈÀ ದಾಖಲೆಗಳನ್ನು ಕಡ್ಡಾಯವಾಗಿ ತರತಕ್ಕದ್ದು.

ಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ನಿವೃತ್ತ ನೌಕರರ ಸಂಘ ಬೆಂಗಳೂರು. ಅಭಿಯಾನದ ವಿವರಗಳಿಗೆ ಪಿ.ಎಂ.ಕೊಟ್ರಬಸಪ್ಪ 9448754141, ಮಹೇಶ್.ಟಿ. 7892422323, ಮಂಜುನಾಥ್. ಎನ್. 9449774307 ಇವರನ್ನು ಸಂಪರ್ಕಿಸಬಹುದಾಗಿದೆ.

ಚಿತ್ರದುರ್ಗದಲ್ಲಿನ ಎಲ್ಲಾ ಕೇಂದ್ರ ಸರ್ಕಾರದ ನಿವೃತ್ತ ನೌಕರರು ರಾಜ್ಯ ಸರ್ಕಾರದ ನಿವೃತ್ತ ನೌಕರರು ಹಾಗೂ ಕೇಂದ್ರ ಸಾರ್ವಜನಿಕ ಸಂಸ್ಥೆಯ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಿಣಿದಾರರು ಅಭಿಯಾನದ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿಕೊಳ್ಳಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now