ಬೆಂಗಳೂರು: ಈ ಹಿಂದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಇಂದು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ಸಂಪುಟ ಸಭೆ ಅಸ್ತು ಎಂದಿದೆ. ಈ ಮೂಲಕ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಗೆ ಕಾನೂನಿ ಅಸ್ತ್ರ ತಂದಿದೆ.
ಬಲವಂತದ, ಆಮಿಷ ಒಡ್ಡುವ, ಒತ್ತಡದ ಮತಾಂತರಕ್ಕೆ ಸರ್ಕಾರ ಕಾನೂನಿನಡಿಯಲ್ಲಿ ಶಿಕ್ಷೆ ನೀಡಲಿದೆ. ಮತಾಂತರ ಇನ್ಮುಂದೆ ಅಪರಾಧವಾಗಲಿದೆ. ಈ ಸುಗ್ರಿವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ ಬಳಿಕ ಜಾರಿಯಾಗಲಿದೆ.
ಮತಾಂತರ ಮಾಡಿದವರ ವಿರುದ್ಧ ಜಾಮೀನು ರಹಿತ ಅಪರಾಧ ದಾಖಲಾಗಲಿದೆ. ಉಡುಗೊರೆ, ಉಚಿತ ಶಿಕ್ಷಣ, ಮದುವೆ ಇತ್ಯಾದಿ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವಂಗಿಲ್ಲ. ಆಮಿಷದಿಂದ ಮತಾಂತರಗೊಂಡು ಮದಯವೆಯಾಗಿದ್ದರು ಆ ಮದುವೆ ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಇನ್ನು ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದ ಅನುದಾನವನ್ನು ಸ್ಥಗಿತಗೊಳಿಸಲಾಗುತ್ತದೆ. ಧರ್ಮ ಬದಲಿಸುವ 60 ದಿನದ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.