in

ಬಲವಂತದ, ಆಮಿಷದ, ಒತ್ತಡದ ಮತಾಂತರಕ್ಕೆ ಸರ್ಕಾರದಿಂದ ಬಂತು ಕಾನೂನು ಅಸ್ತ್ರ..!

suddione whatsapp group join

ಬೆಂಗಳೂರು: ಈ ಹಿಂದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಇಂದು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ಸಂಪುಟ ಸಭೆ ಅಸ್ತು ಎಂದಿದೆ. ಈ ಮೂಲಕ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಗೆ ಕಾನೂನಿ ಅಸ್ತ್ರ ತಂದಿದೆ.

ಬಲವಂತದ, ಆಮಿಷ ಒಡ್ಡುವ, ಒತ್ತಡದ ಮತಾಂತರಕ್ಕೆ ಸರ್ಕಾರ ಕಾನೂನಿನಡಿಯಲ್ಲಿ ಶಿಕ್ಷೆ ನೀಡಲಿದೆ. ಮತಾಂತರ ಇನ್ಮುಂದೆ ಅಪರಾಧವಾಗಲಿದೆ. ಈ ಸುಗ್ರಿವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ ಬಳಿಕ ಜಾರಿಯಾಗಲಿದೆ.

ಮತಾಂತರ ಮಾಡಿದವರ ವಿರುದ್ಧ ಜಾಮೀನು ರಹಿತ ಅಪರಾಧ ದಾಖಲಾಗಲಿದೆ. ಉಡುಗೊರೆ, ಉಚಿತ ಶಿಕ್ಷಣ, ಮದುವೆ ಇತ್ಯಾದಿ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವಂಗಿಲ್ಲ. ಆಮಿಷದಿಂದ ಮತಾಂತರಗೊಂಡು ಮದಯವೆಯಾಗಿದ್ದರು ಆ ಮದುವೆ ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಇನ್ನು ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದ ಅನುದಾನವನ್ನು ಸ್ಥಗಿತಗೊಳಿಸಲಾಗುತ್ತದೆ. ಧರ್ಮ ಬದಲಿಸುವ 60 ದಿನದ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಸಚಿವ ಸ್ಥಾನ ಸಿಕ್ಕರೂ ಕುರ್ಚಿ ಬಿಸಿ ಮಾಡಬೇಕು ಅಷ್ಟೇ : ಎಂ ಪಿ ಕುಮಾರಸ್ವಾಮಿ

ಡಿಕೆಶಿ ಬಗ್ಗೆ ಟ್ವೀಟ್ ಮಾಡಿದ ರಮ್ಯಾ : ತಿರುಗಿಬಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್..!