Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಅರ್ಚಕರ ವೇತನ ವಾಪಾಸ್ ಕೇಳಿದ ಸರ್ಕಾರ :4,74,000 ನೀಡುವಂತೆ ಅರ್ಚಕ ಕಣ್ಣನ್ ಗೆ ನೋಟೀಸ್

---Advertisement---

 

ಚಿಕ್ಕಮಗಳೂರು: ರಾಜ್ಯ ಸರ್ಕಾರ ಅರ್ಚಕರಿಗೆ ಶಾಕ್ ನೀಡಿದೆ. ಅರ್ಚಕರಿಗೆ ನೀಡಿದ ವೇತನವನ್ನು ವಾಪಾಸ್ ಕೇಳುವ ಮೂಲಕ ಶಾಕ್ ನೀಡಿದೆ. ಚಿಕ್ಕಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನವನ್ನು ವಾಪಾಸ್ ಕೇಳಿದೆ. ಕನ್ನಡ ಪಂಡಿತ, ಕನ್ನಡ ಪೂಜಾರಿ ಎಂದೇ ಖ್ಯಾತರಾಗಿದ್ದಾರೆ ಕಣ್ಣನ್. ಕನ್ನಡದಲ್ಲಿಯೇ ರಾಮಾರ್ಚನೆ ಕೂಡ ಮಾಡುತ್ತಿದ್ದರು. ಇದೀಗ ಅವರಿಗೇನೆ ರಾಜ್ಯ ಸರ್ಕಾರ ಶಾಕ್ ನೀಡಿದೆ.

ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಕಲ್ಯಾಣ ಕೋದಂಡ ರಾಮ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ತಿಂಗಳು 7500 ರೂಪಾಯಿ ವೇತನ ನೀಡುತ್ತಿತ್ತು. ಬಳಿಕ ದೇವಾಲಯದ ಆದಾಯ ಕಡಿಮೆ ಇದೆ ಎಂಬ ಕಾರಣಕ್ಕೆ 4,500 ರೂಪಾಯಿ ನೀಡುತ್ತಿತ್ತು. ಇದೀಗ 10 ವರ್ಷದ 4,74,000 ರೂಪಾಯಿ ಹಣವನ್ನು ಸರ್ಕಾರ ವಾಪಾಸ್ ನೀಡುವಂತೆ ಕೇಳಿದೆ.

ಈ ತಿಂಗಳ ವೇತನವನ್ನು ಸರ್ಕಾರ ತಡೆಹಿಡಿದಿದೆ. ಡಿಸೆಂಬರ್ 2ರಂದು ತಹಶಿಲ್ದಾರ್ ಸುಮಂತ್ ನೋಟೀಸ್ ನೀಡಿದ್ದಾರೆ. ಅರ್ಚಕ ಕಣ್ಣನ್ ಅವರು ಪೂಜೆ ಮಾಡುವ ದೇವಾಲಯದಲ್ಲಿ ಪ್ರತಿದಿನವೂ ಕನ್ನಡದಲ್ಲಿಯೇ ಸೀತಾ-ರಾಮನಿಗೆ ಮಂತ್ರಘೋಷ ಮಾಡುತ್ತಾರೆ. ಈ ದೇವಾಲಯಕ್ಕೆ ರಾಜ್ಯ – ಹೊರ ರಾಜ್ಯದಿಂದಾನೂ ಭಕ್ತರು ಬರುತ್ತಾರೆ. ಪೂಜೆಗಳನ್ನು ಮಾಡಿಸುತ್ತಾರೆ. ಸೀತಾ-ರಾಮನ ದೇಗುಲದಲ್ಲಿ ಇದೊಂದು ವಿಶೇಷತೆಯನ್ನೇ ಹೊಂದಿದೆ. ಸಂಪೂರ್ಣವಾಗಿ ಕನ್ನಡದಲ್ಲಿಯೇ ಮಂತ್ರಘೋಷಣೆ ಮಾಡಲಿದ್ದಾರೆ. ಪ್ರತಿ ದಿನ ಕಿವಿಗೆ ಇಂಪಾಗಿ ಕೇಳುವಂತೆ ಕನ್ನಡದ ಮಂತ್ರ ಇರುತ್ತದೆ. ಇದೀಗ ಕನ್ನಡದ ಪಂಡಿತರಿಗೆ ರಾಜ್ಯ ಸರ್ಕಾರ ನೋಟೀಸ್ ನೀಡಿದ್ದು, ಭಕ್ತರಿಗೆ ಶಾಕ್ ಎನಿಸಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment