ಇನ್ನು ಮುಂದೆ ಸೇನೆಯಲ್ಲಿ ಹೆಚ್ಚು ಅವಕಾಶ : ಅಗ್ನಿಪಥ್ ಯೋಜನೆಗೆ ಚಾಲನೆ

suddionenews
1 Min Read

ನವದೆಹಲಿ: ಸೇನೆಗೆ ಸೇರಬೇಕು, ದೇಶದ ಸೇವೆ ಮಾಡಬೇಕು ಎಂಬುದು ಸಾಕಷ್ಟು ಯುವಕರ ಕನಸು. ಆದರೆ ಕೆಲವು ನಿಯಮಗಳಿಂದ ಸಾಕಷ್ಟು ಯುವಕರು ಅವಕಾಶ ವಂಚಿತರಾಗುತ್ತಾರೆ. ಆದ್ರೆ ಇದೀಗ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಚಾಲನೆ ನೀಡಿದೆ.

ಅಗ್ನಿಪಥ್ ನೇಮಕಾತಿ ಯೋಜನೆಗೆ ಇಂದು ರಾಜನಾಥ್ ಸಿಂಗ್ ಚಾಲನೆ ನೀಡಿ ಮಾತನಾಡಿದ್ದು, ಭಾರತೀಯ ಸೇನೆಯನ್ನು ವಿಶ್ವದಲ್ಲಿಯೇ ಅತ್ಯುತ್ತಮ ಸೇನೆಯನ್ನಾಗಿ ಮಾಡುವ ಉದ್ದೇಶದಿಂದ ಅಗ್ನಿಪಥ್ ಯೋಜನೆಯನ್ನು ತರಲಾಗುತ್ತಿದೆ. ದೇಶದ ಭದ್ರತೆಯನ್ನು ಬಲಪಡಿಸಲು ಅಗ್ನಿವೀರ ಬರುತ್ತಾನೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಅಗ್ನಿವೀರ್ ಗೆ ಉತ್ತಮ ವೇತನದ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ನಾಲ್ಕು ವರ್ಷಗಳ ಕಾಲ ಸೇನೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಹಾಗೆ ಸೈನಿಕರು ಹೊಸ ಹೊಸ ಟೆಕ್ನಾಲಜಿಗಳ ಮಾಹಿತಿಯನ್ನು ಪಡೆಯುತ್ತಿರುತ್ತಾರೆ. ಇದರಿಂದ ಉದ್ಯೋಗ ಕೂಡ ಸೃಷ್ಟಿಯಾಗಲಿದೆ.‌ ಕೊವಿಡ್ ನಿಂದಾಗಿ ಮಿಲಿಟರಿ ನೇಮಕಾತಿಯಲ್ಲಿನ ಪ್ರಮಾಣ ಕಡಿಮೆಯಾಗಿದೆ. 1.25 ಲಕ್ಷಕ್ಕೂ ಹೆಚ್ಚು ಸೀಟುಗಳು ಖಾಲಿ ಇದೆ.‌ ಇನ್ನು ಮುಂದೆ ಅಗ್ನಿಪಥ್ ಯೋಜನೆ ಮೂಲಕ ಸೇನೆಗೆ ಸೇರಿಕೊಳ್ಳುವವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *