ನವದೆಹಲಿ: ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ ನೀಡಲಾಗಿದೆ. ರಾಗಿ ಬೆಳೆಗಾರರು, ತೊಗರಿ ಬೆಳೆಗಾರರಿಗೆ, ಜೋಳ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ನೀಡಲಾಗಿದೆ. ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. ಖಾರೀಫ್ ಹಂಗಾಮಿ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳವಾಗಲಿದೆ.
ಖಾರೀಫ್ ಹಂಗಾಮಿನ ಸುಮಾರು 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲು ಕ್ಯಾಬಿನೆಟ್ ತೀರ್ಮಾನ ಮಾಡಲಾಗಿದೆ. ಇಕ ಮೂಲಕ ರೈತರ ಬೆಳೆಯ ಖರ್ಚಿನ ಮೇಲೆ ಶೇಕಡ 50 ರಷ್ಟು ಲಾಭ ಬರುವಂತೆ ಎಂಎಸ್ಪಿ ನಿಗದಿ ಮಾಡಿದ್ದು, 2.07 ಲಕ್ಷ ಕೋಟಿ ರೂಪಾಯಿ ರೈತರ ಬೆಳೆಗಳನ್ನು ಖರೀದಿ ಮಾಡಲಾಗುತ್ತಿದೆ. ಖಾರೀಫ್ ಬೆಳೆಗಳು ಭಾರತದಲ್ಲಿ ಮಾನ್ಸೂನ್ ಬೆಳೆಗಳಾಗಿವೆ. ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್, ಅಕ್ಟೋಬರ್ ಮಳೆಗಾಲದಲ್ಲಿ ಬೆಳೆಯುವ ಬೆಳೆಗಳಿಗೆ ಖಾರೀಫ್ ಎನ್ನಲಾಗುತ್ತದೆ.
ಹಾಗಾದ್ರೆ ಯಾವ ಬೆಳೆಗೆ ಎಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋದಾದ್ರೆ, ಭತ್ತ MSP ಕ್ವಿಂಟಾಲ್ ಗೆ 2,369 ರೂಪಾಯಿ ಏರಿಕೆಯಾಗಿದೆ. ರಾಗಿ ಕ್ವಿಂಟಾಲ್ವಗೆ 4,886 ರೂಪಾಯಿಗೆ ಏರಿಕೆ, ಜೋಳ ಕ್ವಿಂಟಾಲ್ ಗೆ 2,400 ರೂಪಾಯಿ ಏರಿಕೆ, ತೊಗರಿಬೇಳೆ ಕ್ವಿಂಟಾಲ್ ಗೆ 8,000 ಏರಿಕೆ, ಮೀಡಿಯಂ ಹತ್ತಿ ಕ್ವಿಂಟಾಲ್ ಗೆ 7,710 ರೂಪಾಯಿ ಏರಿಕೆ, ಲಾಂಗ್ ಹತ್ತಿ ಕ್ವಿಂಟಾಲ್ ಗೆ 8110 ರೂಪಾಯಿ ಏರಿಕೆ. ಹೆಸರು ಬೇಳೆ – MSP ಕ್ವಿಂಟಾಲ್‌ಗೆ 7,800 ರೂ.ಗೆ ಏರಿಕೆ. ಹೆಸರು ಕಾಳು – MSP ಕ್ವಿಂಟಾಲ್‌ಗೆ 8,768 ರೂ.ಗೆ ಏರಿಕೆಯಾಗಿದೆ.
