ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರವಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಭರ್ಜರಿ ಉಡುಗೊರೆ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನಯ ಹೆಚ್ಚಳ ಮಾಡಿದೆ. ಯುಗಾದಿಗೂ ಮುನ್ನವೇ ಸರ್ಕಾರಿ ನೌಕರರಿಗೆ ಸಿಹಿಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಈ ನಿರ್ಧಾರದಿಂದ ಫುಲ್ ಖುಷಿಯಾಗಿದ್ದಾರೆ.
ರಾಜ್ಯ ಸರ್ಕಾರ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿದ್ದು, ನೌಕರರ ಭತ್ಯೆಯನ್ನು ಶೇಕಡಾ 3.75ರಷ್ಟು ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ನಿರ್ಧಾರ ಮಾಡಿದೆ. ಕೇಂದ್ರ ಸರ್ಕಾರದ ವೇತನ ನೀತಿಯನಂತೆ ಸಂಬಳ ಪಡೆಯುವ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇಕಡ 4 ರಷ್ಟು ಹೆಚ್ಚಳ ಮಾಡಲಾಗಿದೆ. ಸರ್ಕಾರಿ ನೌಕರರಿಗೇನೋ ಖುಷಿಯ ವಿಚಾರ. ಆದರೆ ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಹೆಚ್ಚಿನ ಹೊರೆಯಾಗಲಿದೆ.
ಈ ತುಟ್ಟಿ ಭತ್ಯೆ ಏರಿಕೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷವೂ 1,792 ಕೋಟಿ ರೂಪಾಯಿ ಹೆಚ್ಚುವರಿಯಾವಿ ಬೇಕಾಗಲಿದೆ. 2024ರ ಜನವರಿ 1ರಿಂದ ಪೂರ್ವಾನ್ವಯ ಆಗುವಂತೆ ತುಟ್ಟಿ ಭತ್ಯೆ ಏರಿಕೆ ಆಗುತ್ತದೆ. ಶೇ. 38.75 ರಿಂದ ಶೇ 42.5ಕ್ಕರ ಇದು ಹೆಚ್ಚಳವಾಗಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಒಟ್ನಲ್ಲಿ TA-DA ಗಾಗಿ ಕಾಯ್ತಿದ್ದ ನೌಕರರಿಗೆ ಸದ್ಯಕ್ಕೆ ಬಂಪರ್ ಬಹುಮಾನ ಅಂತಾನೇ ಹೇಳಬಹುದು.