ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸರ್ಕಾರ ಮತ್ತೊಮ್ಮೆ ಮಹತ್ವದ ಅವಕಾಶ ಕಲ್ಪಿಸಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಟ್ರಾಫಿಕ್ ದಂಡಗಳನ್ನು ಕಡಿಮೆ ಮೊತ್ತದಲ್ಲಿ ಪಾವತಿಸಲು ಅವಕಾಶ ನೀಡಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಮೇಲಿನ ದಂಡಕ್ಕೆ ಶೇ.50 ರಷ್ಟು ರಿಯಾಯಿತಿ ನೀಡುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ವಿಶೇಷ ರಿಯಾಯಿತಿ ಯೋಜನೆ ನಿರ್ದಿಷ್ಟ ಅವಧಿಗೆ ಮಾತ್ರ ಅನ್ವಯವಾಗಲಿದೆ. ಜೂನ್ 21ರಿಂದ ಜುಲೈ 10ರವರೆಗೆ ವಾಹನ ಸವಾರರು ತಮ್ಮ ಬಾಕಿ ಇರುವ ಟ್ರಾಫಿಕ್ ದಂಡವನ್ನು ಅರ್ಧ ಮೊತ್ತ ಪಾವತಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
2026ರ ಮೇ ತಿಂಗಳಿಗಿಂತ ಮುಂಚಿತವಾಗಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್ ಪ್ರಕರಣಗಳ ಬಾಕಿ ದಂಡಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. 1991ರಿಂದ 2022ರ ಅವಧಿಯಲ್ಲಿ ದಾಖಲಾಗಿ ಇನ್ನೂ ಪಾವತಿಯಾಗದೇ ಉಳಿದಿರುವ ಸಾರಿಗೆ ಇಲಾಖೆಯ ಪ್ರಕರಣಗಳಿಗೂ 50% ದಂಡ ರಿಯಾಯಿತಿ ದೊರೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಟ್ರಾಫಿಕ್ ಫೈನ್ ಪಾವತಿಸುವುದು ಹೇಗೆ?
ವಾಹನ ಸವಾರರು ದಂಡ ಪಾವತಿಸಲು ಕಚೇರಿಗಳಿಗೆ ಸುತ್ತಾಡಬೇಕಾಗಿಲ್ಲ. ಆನ್ಲೈನ್ ಹಾಗೂ ಆಫ್ಲೈನ್ ಎರಡೂ ವಿಧಾನಗಳಲ್ಲಿ ಸುಲಭವಾಗಿ ಹಣ ಪಾವತಿಸಬಹುದು.ರಾಜ್ಯದ ಯಾವುದೇ ಸಂಚಾರ ಪೊಲೀಸ್ ಠಾಣೆ ಅಥವಾ ಬೆಂಗಳೂರು ನಗರ ಸಂಚಾರ ನಿರ್ವಹಣಾ ಕೇಂದ್ರ (TMC) ಗೆ ಭೇಟಿ ನೀಡಿ ಬಾಕಿ ದಂಡವನ್ನು ಪಾವತಿಸಬಹುದು.ಮನೆಯಲ್ಲೇ ಕುಳಿತು ಕರ್ನಾಟಕ ಒನ್ ವೆಬ್ಸೈಟ್, ಅಸ್ತ್ರಂ (Astram) ಆ್ಯಪ್ ಹಾಗೂ ಕೆಎಸ್ಪಿಎಸ್ (KSPS) ಆ್ಯಪ್ ಮೂಲಕ ಟ್ರಾಫಿಕ್ ದಂಡವನ್ನು ಸುಲಭವಾಗಿ ಪಾವತಿಸಬಹುದು.ಬಾಕಿ ಉಳಿದಿರುವ ಟ್ರಾಫಿಕ್ ಫೈನ್ಗಳನ್ನು ಕಡಿಮೆ ಮೊತ್ತದಲ್ಲಿ ಪಾವತಿಸಲು ಇದು ಅಪರೂಪದ ಅವಕಾಶವಾಗಿದೆ. ಜುಲೈ 10ರೊಳಗೆ ದಂಡ ಪಾವತಿಸಿ ಹೆಚ್ಚುವರಿ ಹೊರೆ ತಪ್ಪಿಸಿಕೊಳ್ಳುವುದು ಉತ್ತಮ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















