ಬೆಂಗಳೂರು: ಐಫೋನ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಐಫೋನ್ ಕ್ರೇಜ್ ಇರುವವರು ಹೊಸ ಮಾಡೆಲ್ ಗಳಿಗಾಗಿನೇ ಕಾಯುತ್ತಿರುತ್ತಾರೆ. ಅದರಲ್ಲೂ ಐಫೋನ್ 16 ಗಾಗಿ ಕಾಯುತ್ತಿರುವ ಮಂದಿ ಕಡಿಮೆ ಏನು ಅಲ್ಲ. ಆ ಫೋನ್ ಮಾಡೆಲ್, ಡಿಸೈನ್, ಫೀಚರ್ ಗಳ ಬಗ್ಗೆ ಸಾಕಷ್ಟು ಕುತೂಹಲದಿಂದಾನೇ ಕಾಯುತ್ತಿದ್ದರು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಐಫೋನ್ 16 ರಿಲೀಸ್ ಆಗಿದೆ. ಹೀಗಾಗಿ ಹಳೆಯ ಮಾಡೆಲ್ ಗಳಲ್ಲಿ ಬೆಲೆ ಇಳಿಕೆ ಕಂಡಿದೆ.
ಐಫೋನ್ ಕಂಪನಿ ಪ್ರತಿ ವರ್ಷ ಕೂಡ ಹೊಸ ಹೊಸ ಮಾಡೆಲ್ ಅನ್ನು ಪರಿಚಯಿಸುತ್ತಲೆ ಇರುತ್ತದೆ. ಈಗ ಐಫೋನ್ 16 ಪರಿಚಯಿಸಿದ್ದು ಅದರ ಬೆಲೆ, ವೈಶಿಷ್ಟ್ಯತೆಗಳ ವಿಡಿಯೋ ಮಾಡಿ ಬಿಟ್ಟಿದೆ. ಸದ್ಯ ಈ ಫೋನ್ ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಸದ್ಯ ಭಾರತದಲ್ಲಿ ಐಫೋನ್ 16 ಬೆಲೆಯನ್ನು ಕಂಪನಿ ಅನೌನ್ಸ್ ಮಾಡಿದೆ. 128 ಜಿಬಿ ಮಾಡೆಲ್ ದರ 79,900 ರೂಪಾಯಿಂದ ಶುರುವಾಗುತ್ತೆ. 256 ಜಿಬಿ ಹಾಗೂ 512 ಜಿಬಿ ಮಾಡೆಲ್ ನಲ್ಲೂ ಐಫೋನ್ 16 ಲಭ್ಯವಿದ್ದು, ಅವುಗಳ ಬೆಲೆ 89,900 ಹಾಗೂ 1,09,900 ರೂಪಾಯಿ ಆಗಿದೆ.
ಇನ್ನು ಮಾರುಕಟ್ಟೆಯಲ್ಲಿ ಐಫೋನ್ 16 ಲಾಂಚ್ ಆಗುತ್ತಿದ್ದಂತೆ 14,15 ಬೆಲೆ ಇಳಿಕೆಯಾಗಿದೆ. ಒಳ್ಳೆ ಡಿಸ್ಕೌಂಟ್ ಕೊಟ್ಟಿದೆ. ಐಫೋನ್ 15 69,900 ರೂಪಾಯಿ ಆಗಿದೆ. 15 Plus 79,900 ಆಗಿದೆ. ಐಫೋನ್ 14 ದರ 59,900 ಆಗಿದೆ. 14 plus ದರ 69,900 ಆಗಿದೆ. ಎಲ್ಲಾ ಐಫೋನ್ ಗಳ ದರದ ಮೇಲೂ 10 ಸಾವಿರ ರಿಯಾಯಿತಿ ಘೋಷಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















