ದಿನೇ ದಿನೇ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ದಾಖಲೆಯ ಮಟ್ಟ ಮುಟ್ಟಿದ್ದ ಚಿನ್ನ ಹಾಗೂ ಬೆಳ್ಳಿ ದರಗಳು ಈಗ ಹಠಾತ್ತನೆ ಭಾರಿ ಕುಸಿತ ಕಂಡಿವೆ. ಕೆಲವು ದಿನಗಳ ಹಿಂದೆಯಷ್ಟೇ ಹತ್ತು ಗ್ರಾಂ ಚಿನ್ನ ಖರೀದಿಸಬೇಕಾದರೆ ಬರೋಬ್ಬರಿ 1,60,000 ರೂಪಾಯಿಗೂ ಅಧಿಕ ಹಣ ನೀಡಬೇಕಾಗಿತ್ತು. ಆದರೆ ಈಗ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.ಜೂನ್ 6ರ ಇವತ್ತಿನ ದರ ಪರಿಶೀಲಿಸಿದರೆ, ಕೇವಲ ಕೆಲವೇ ಗಂಟೆಗಳಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿದಿದೆ.
24 ಕ್ಯಾರೆಟ್ (ಅಪರಂಜಿ) ಚಿನ್ನ: 10 ಗ್ರಾಂಗೆ ಬರೋಬ್ಬರಿ 3,000 ರೂಪಾಯಿ ಇಳಿಕೆಯಾಗಿದೆ.
22 ಕ್ಯಾರೆಟ್ (ಆಭರಣ) ಚಿನ್ನ: 10 ಗ್ರಾಂಗೆ 2,750 ರೂಪಾಯಿ ಕಡಿಮೆಯಾಗಿದೆ.
18 ಕ್ಯಾರೆಟ್ ಚಿನ್ನ: 10 ಗ್ರಾಂಗೆ 2,250 ರೂಪಾಯಿ ಇಳಿಕೆ ಕಂಡಿದೆ.
ಬೆಳ್ಳಿ ಬೆಲೆಯೂ ಭಾರಿ ಪತನ!
ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಬೆಲೆಯೂ ಗ್ರಾಹಕರಿಗೆ ನಿರಾಳ ತಂದಿದೆ. ಬೆಳ್ಳಿಯ ದರದಲ್ಲಿ ಏಕಕಾಲಕ್ಕೆ ಬರೋಬ್ಬರಿ 10,000 ರೂಪಾಯಿಗಳಷ್ಟು ಭಾರಿ ಕುಸಿತ ಕಂಡುಬಂದಿದ್ದು, ಪ್ರಸ್ತುತ ಒಂದು ಕೆಜಿ ಬೆಳ್ಳಿ ಬೆಲೆ 2,65,000 ರೂಪಾಯಿಗೆ ಬಂದು ತಲುಪಿದೆ.
ಬೆಲೆ ಕುಸಿತಕ್ಕೆ ಜಾಗತಿಕ ಮಾರುಕಟ್ಟೆಯೇ ಕಾರಣ:
ಜೂನ್ 5 ರಂದು ಅಮೆರಿಕದ ಸ್ಪಾಟ್ ಮಾರ್ಕೆಟ್ನಲ್ಲಿ ಚಿನ್ನದ ಬೆಲೆ ಶೇ. 3.2 ರಷ್ಟು ಕುಸಿದು, ಪ್ರತಿ ಔನ್ಸ್ಗೆ $4,330.10 ಕ್ಕೆ ತಲುಪಿದೆ. ಹಾಗೆಯೇ ಬೆಳ್ಳಿ ಬೆಲೆ ಶೇ. 7.1 ರಷ್ಟು ಇಳಿಕೆಯಾಗಿ ಪ್ರತಿ ಔನ್ಸ್ಗೆ $68.63 ತಲುಪಿದೆ.
ಇದರ ನೇರ ಪರಿಣಾಮ ಭಾರತದ MCX (ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್) ಮೇಲೂ ಬೀರಿದೆ. MCX ನಲ್ಲಿ ಚಿನ್ನದ ಫ್ಯೂಚರ್ಸ್ ಶೇ. 2.05 ರಷ್ಟು (ರೂ. 3,189) ಇಳಿಕೆಯಾಗಿ 10 ಗ್ರಾಂಗೆ ರೂ. 1,52,551 ರೊಂದಿಗೆ ವಹಿವಾಟು ಮುಗಿಸಿದೆ. ಇತ್ತ ಬೆಳ್ಳಿ ಫ್ಯೂಚರ್ಸ್ ಶೇ. 6.27 ರಷ್ಟು (ರೂ. 16,595) ದಾಖಲೆ ಮಟ್ಟದಲ್ಲಿ ಕುಸಿದು, ಪ್ರತಿ ಕೆಜಿಗೆ ರೂ. 2,48,201 ಕ್ಕೆ ಸ್ಥಿರಗೊಂಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















