ಬೆಂಗಳೂರು; ಅಡಿಕೆ ಬೆಳೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ಅಡಿಕೆ ಬೆಳೆದ ರೈತನಿಗೆ ಸಂತಸವನ್ನು ತಂದಿದೆ. ಯಾಕಂದ್ರೆ ಅಡಿಕೆ ಬೆಳೆಯನ್ನು ಕಾಪಾಡಿಕೊಳ್ಳುವುದೇ ಬಹಳ ಸಾಹಸದ ಕೆಲಸವಾಗಿದೆ. ಹೀಗಿರುವಾಗ ಬಂದ ಬೆಳೆಗೆ ಉತ್ತಮ ಲಾಭ ಸಿಕ್ಕರೆ ನೆಮ್ಮದಿ ಅಲ್ಲವಾ..? ಇದೀಗ ಅಡಿಕೆಯ ಬೆಲೆಯಲ್ಲೂ ಅಷ್ಟು ದಿನೇ ದಿನೇ ಏರಿಕೆಯಾಗುತ್ತಾ ಇದೆ. ಇಂದಿನ ದರವನ್ನು ನೋಡುವುದಾದರೆ, ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 56,100 ರೂಪಾಯಿ ಆಗಿದೆ.
ಇನ್ನು ಚನ್ನಗಿರಿಯ ರಾಶಿ ಅಡಿಕೆ ಧಾರಣೆ ನೋಡುವುದಾದರೆ ಗರಿಷ್ಠ ದರ 56,100 ರೂಪಾಯಿಗೆ ಹೋಗಿದೆ. ಕನಿಷ್ಠ ದರವನ್ನು ನೋಡುವುದಾದರೆ 52,512 ರೂಪಾಯಿ ಇದ್ದು, ಸರಾಸರಿ ಬೆಲೆ 55,333 ರೂಪಾಯಿ ಇದೆ. ಬೆಟ್ಟೆ ಅಡಿಕೆ ದರ 25,786 ರೂಪಾಯಿ ಇದ್ದು, ಕನಿಷ್ಠ ದರ 18,187 ರೂಪಾಯಿ ಇದೆ. ಸರಾದರಿ ದರ 22,722 ರೂಪಾಯಿ ಇದೆ. ಇದರಿಂದ ಅಡಿಕೆ ಬೆಳೆದ ರೈತ ಬಹಳ ಖುಷಿಯಾಗಿದ್ದಾನೆ.
ಅದರಲ್ಲೂ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಆಗಿತ್ತು. ಬಳಿಕ 53,000 ರೂಪಾಯಿ ಆಯ್ತು. ಅಂದಿನಿಂದಲೂ ಅಡಿಕೆ ತನ್ನ ಬೆಲೆಯನ್ನು ಏರಿಕೆ ಮಾಡಿಕೊಳ್ಳುತ್ತಲೆ ಬರುತ್ತಿದೆ. ಇದೀಗ 56,000 ಗಡಿ ದಾಟಿದೆ. ಇನ್ನು ಕೆಲವೇ ದಿನಗಳಲ್ಲಿ 60,000 ಮುಟ್ಟುವ ನಿರೀಕ್ಷೆಯೂ ಇದೆ. ಚನ್ನಗಿರಿಯನ್ನು ಅಡಿಕೆ ನಾಡು ಎಂದೇ ಕರೆಯುತ್ತಾರೆ. ಇಳಿಕೆಯಾಗಿದ್ದ ಅಡಿಕೆ ದರ ಇದೀಗ ಏರಿಕೆಯತ್ತ ಸಾಗುತ್ತಿರುವುದು ರೈತರಿಗೆ ಖುಷಿ ನೀಡಿದೆ. ಹೀಗೆ ಬೆಲೆ ಏರಿಕೆಯತ್ತಲೆ ಸಾಗಲಿ ಎಂದೇ ರೈತರು ಬೇಡಿಕೊಳ್ಳುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಅಡಿಕೆ ಮರಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿರುತ್ತದೆ. ಅಷ್ಟು ಕಷ್ಟಪಟ್ಟಿದ್ದಕ್ಕೂ ಕೊಂಚ ನೆಮ್ಮದಿಯೇ ಸರಿ.


