ಬೆಂಗಳೂರು: ಇರಾನ್ – ಇಸ್ರೇಲ್ ಯುದ್ದದಿಂದಾಗಿ ದೇಶದಲ್ಲೂ ಸಮಸ್ಯೆಗಳು ಕಡಿಮೆ ಏನು ಅಲ್ಲ. ಗ್ಯಾಸ್ ಸಮಸ್ಯೆ ಆಗಿ ಆಟೋ ಚಾಲಕರು ಗೊಳೋ ಅಂತಿದ್ದಾರೆ. ಇದರ ನಡುವೆ ಖುಷಿ ಎಂಬಂತೆ ಚಿನ್ನದ ದರದಲ್ಲಿ ಇಳಿಕೆಯತ್ತ ಸಾಗಿತ್ತು. ಇದೀಗ ದಿಢೀರಂತ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ 365 ರೂಪಾಯಿ ಏರಿಕೆಯಾಗಿದ್ದು, ಈ ಮೂಲಕ 14,100 ರೂಪಾಯಿ ಇಂದಿನ ಮಾರುಕಟ್ಟೆ ದರವಿದೆ.
ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ 398 ರೂಪಾಯಿ ಏರಿಕೆಯಾಗಿದ್ದು, ಈ ಮೂಲಕ 15,382 ರೂಪಾಯಿ ಇದೆ. ನಿನ್ನೆಯ ದರಕ್ಕೆ ಹೋಲಿಕೆ ಮಾಡಿದರೆ ಇಂದು ದೊಡ್ಡಮಟ್ಟಕ್ಕೆ ಏರಿಕೆಯಾಗಿದೆ. ಹಾಗೇ 10 ಗ್ರಾಂಗೆ ಇಂದು ಖರೀದಿ ಮಾಡಲು ಹೋದರೆ 1,53,820 ರೂಪಾಯಿ ಆಗಿದೆ. 100 ಚಿನ್ನದ ಬೆಲೆ ಬರೋಬ್ಬರಿ 15,38,200 ಆಗಿದೆ. ಈ ರೀತಿ ಚಿನ್ನ ಬೆಳ್ಳಿ ಏರಿಕೆಯಾಗಿರೋದು ಹೂಡಿಕೆದಾರರ ಐಡಿಯಾಗಳನ್ನು ಬುಡಮೇಲು ಮಾಡಿದಂತೆ ಆಗಿದೆ. ಅದರಲ್ಲೂ ಚಿನ್ನ ಖರೀದಿ ಮಾಡುವವರಿಗೆ ಮತ್ತಷ್ಟು ಶಾಕ್ ನೀಡಿದೆ.

ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡಿದ್ದು, ಒಂದು ಗ್ರಾಂಗೆ 10 ರೂಪಾಯಿ ಹೆಚ್ಚಾಗಿ ಈ ಮೂಲಕ 260 ರೂಪಾಯಿ ಆಗಿದೆ. ಬೇರೆ ಬೇರೆ ನಗರಗಳಲ್ಲಿ ಚಿನ್ನದ ಬೆಲೆಯನ್ನು ಲೆಕ್ಕ ಹಾಕುವುದಾದರೆ ಬೆಂಗಳೂರು, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರದಲ್ಲಿ 14,100 ರೂಪಾಯಿ ಇದೆ. ಚೆನ್ನೈನಲ್ಲಿ 14,200 ಇದೆ. ಅಹ್ಮದಾಬಾದ್ ನಲ್ಲಿ 14,105 ರೂಪಾಯಿ ಇದೆ. ಜೈಪುರದಲ್ಲಿ 14,115 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲೂ ಒಂದೊಂದು ನಗರದಲ್ಲಿ ಒಂದೊಂದು ರೀತಿ ಬೆಲೆ ಏರಿಕೆಯನ್ನ ಕಾಣಬಹುದಾಗಿದೆ.












