Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಗರ್ಭಗುಡಿಗೆ ಚಿನ್ನದ ಹೊದಿಕೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜನವರಿ. 03 : ತಾಲೂಕಿನ ನಾಯಕನಹಟ್ಟಿ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಗರ್ಭಗುಡಿಗೆ ದಾನಿಗಳ ನೆರವಿನಿಂದ ಚಿನ್ನಲೇಪಿತ ಹೊದಿಕೆ ಅಳವಡಿಸಿದ್ದು ಭಕ್ತಾಧಿಗಳಿಗೆ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ.

ಚಿತ್ರದುರ್ಗದ ಮಾತಾ ಏಜೆನ್ಸಿ ಮಾಲೀಕರಾದ ಮಹಾಂತೇಶ್ ರವರು ಸುಮಾರು ₹ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬಾಗಿಲಿಗೆ ಚಿನ್ನದ ಲೇಪನವನ್ನು ಹಾಕಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಈ ಹಿಂದೆ ಕಲ್ಲಿನ ಗೋಡೆಗಳ ಮೇಲೆ ತಾಮ್ರದ ಹೊದಿಕೆ ಅಳವಡಿಸಲಾಗಿತ್ತು. ಇದೀಗ ತಾಮ್ರದ ಶೀಟ್ ಮತ್ತು ಚಿತ್ರಕಲಾ ಕೃತಿಗಳಿಗೆ ಚಿನ್ನದ ಲೇಪನ ಮಾಡಲಾಗಿದೆ. ಹೀಗಾಗಿ ದೇವಾಲಯ ಗರ್ಭಗುಡಿಯಲ್ಲಿ ಚಿನ್ನ ಲೇಪನದ ದೃಶ್ಯವನ್ನು ಭಕ್ತಾದಿಗಳು ಕಣ್ತುಂಬಿ ಕೊಳ್ಳುತ್ತಿದ್ದಾರೆ.

 

ಸುಮಾರು 11 ಅಡಿ ಎತ್ತರ ಮತ್ತು 21 ಅಡಿ ಅಗಲವಿರುವ ಈ ಲೇಪನದಲ್ಲಿ ಪ್ರಮುಖವಾಗಿ ತಾಮ್ರ ಬಳಸಲಾಗಿದೆ. ಇದರ ಮೇಲೆ ಬೆಳ್ಳಿ ಮತ್ತು ಬಂಗಾರದ ಲೇಪನ ಮಾಡಲಾಗಿದೆ. ಒಟ್ಟಾರೆ 157.2 ಕೆ.ಜಿ ತೂಕವಾಗಿರುವ ಇದರಲ್ಲಿ ಎಂಟು ವಿಗ್ರಹಗಳು ಮತ್ತು ತಾಮ್ರದ ಶೀಟ್ ಒಳಗೊಂಡಿದೆ. ಇವುಗಳಿಗೆ ನಿಕ್ಕಲ್ ಎಲಿಕ್ಟ್ರೊಪ್ಲೇಟಿಂಗ್ ಮಾಡಲಾಗಿದೆ.

ಗಂಧರ್ವ, ಆನೆ, ಸಿಂಹ, ಗಂಡುಬೇರುಂಡ, ದೀಪದ ಲಕ್ಷ್ಮೀ ಗಣಪತಿ ಮತ್ತು ಗಜಲಕ್ಷ್ಮಿಯರ ವಿಗ್ರಹಗಳು ಬಾಗಿಲವಾಡದಲ್ಲಿವೆ.
ಎರಡು ಬದಿಯಲ್ಲಿ ನವಿಲು ಮತ್ತು ದೀಪ ಅಳವಡಿಸಲಾಗಿದೆ. ವಿಶೇಷ ಬಾಗಿಲಿನ ಮೇಲ್ಭಾಗದಲ್ಲಿ ಹೂಮಾಲೆಯನ್ನು ಕೈಯಲ್ಲಿ ಹಿಡಿದಿರುವ ಗಂಧರ್ವರ ಚಿತ್ರಗಳಿವೆ. ಒಟ್ಟಾರೆ ಅತ್ಯಾಧಿನಿಕ ವಿಧಾನದಲ್ಲಿ ತಾಮ್ರದ ಮೇಲೆ ನಿಕ್ಕಲ್ ಮತ್ತು ಬಂಗಾರದ ಲೇಪನ ಮೂಡಲಾಗಿದೆ. ಇದಕ್ಕೂ ಮುಂಚೆ ಕ್ಲೀನಿಂಗ್ ಮತ್ತು ಬಫಿಂಗ್ ಮಾಡಲಾಗಿದೆ. ತಾಮ್ರದ ಸೀಟುಗಳ ಮೇಲೆ ಎಂಟರಿಂದ 10 ಮೈಕ್ರಾನ್ ದಪ್ಪದ ಚಿನ್ನದ ಲೇಪನ ಮಾಡಲಾಗಿದೆ. ಈಗ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಚಿನ್ನದ ಲೇಪನ ಮೆರುಗು ತಂದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now