ಕೇಂದ್ರ ಬಜೆಟ್ ನಿನ್ನೆಯಷ್ಟೇ ಮಂಡನೆಯಾಗಿದೆ. ನಿರೀಕ್ಷೆಯಂತೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಇಳಿಕೆಯಾಗಿದೆ. 22K ಚಿನ್ನದ ದರದಲ್ಲಿ ಇಂದು 830 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ ಒಂದು ಗ್ರಾಂ 22K ಚಿನ್ನದ ಬೆಲೆ 13,890 ರೂಪಾಯಿ ಆಗಿದೆ. ಹಾಗೇ 24K ಚಿನ್ನದ ಬೆಲೆಯಲ್ಲಿ 905 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 15,153 ರೂಪಾಯಿ ಒಂದು ಗ್ರಾಂಗೆ ಇದೆ.
ಬೆಳ್ಳಿ ಬೆಲೆಯಂತೂ ಚಿನ್ನಕ್ಕಿಂತ ವೇಗವಾಗಿ ಏರಿಕೆಯಾಗಿತ್ತು. ಇಂದು ಗ್ರಾಂಗೆ ಬೆಳ್ಳಿ ಬೆಲೆಯಲ್ಲಿ 50 ರೂಪಾಯಿ ಇಳಿಕೆಯಾಗಿದ್ದು, 300 ರೂಪಾಯಿ ಗ್ರಾಂ ಬೆಳ್ಳಿ ಇದೆ. ಹಾಗೇ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದು, ಒಂದೇ ದಿನ 50 ಸಾವಿರ ಇಳಿಕೆಯಾಗಿದೆ. ಈ ಮೂಲಕ ಇಂದಿನ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 3 ಲಕ್ಷ ರೂಪಾಯಿ ಆಗಿದೆ.

ಇದೇ ರೀತಿ ಬೇರೆ ಬೇರೆ ನಗರಗಳಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ 22 ಕ್ಯಾರಟ್ ಚಿನ್ನದ ಬೆಲೆ, ಚೆನ್ನೈನಲ್ಲಿ 13,950, ಮುಂಬೈ, ಕೋಲ್ಕತಾ, ಕೇರಳ 13,890 ರೂಪಾಯಿ ಇದೆ. ದೆಹಲಿಯಲ್ಲಿ 13,905 ರೂಪಾಯಿ ಇದ್ರೆ, ಅಹ್ಮದಾಬಾದ್ ನಲ್ಲಿ 13,895 ರೂಪಾಯಿ, ಜೈಪುರ, ಲಕ್ನೋದಲ್ಲಿ 13,905 ರೂಪಾಯಿ ಇದೆ. ಭುವನೇಶ್ವರದಲ್ಲಿ 13,895 ರೂಪಾಯಿ ಇದೆ. ದುಬೈನಲ್ಲಿ 13,624 ರೂಪಾಯಿ, ಅಮೆರಿಕಾದಲ್ಲಿ 13,938 ರೂಪಾಯಿ, ಸೌದಿಯಲ್ಲಿ 13,519 ರೂಪಾಯಿ ಇದೆ. ಹೀಗೆ ಹಲವು ನಗರಗಳಲ್ಲಿ ಒಂದೊಂದು ರೀತಿಯ ಬೆಲೆಯನ್ನು ಹೊಂದಿದೆ. ಬೆಳ್ಳಿ ಕೂಡ ಬೇರೆ ಬೇರೆ ನಗರದಲ್ಲಿ ವಿಭಿನ್ನ ಬೆಲೆಯನ್ನು ಹೊಂದಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















