ಶುಭ ಕಾರ್ಯಗಳಿಗಾಗಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಯೋಚಿಸುತ್ತಿದ್ದವರಿಗೆ ಸಣ್ಣ ಮಟ್ಟಿನ ಸಂತಸದ ಸುದ್ದಿ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಇಳಿಕೆಯಾಗುತ್ತಿರುವ ಚಿನ್ನದ ಬೆಲೆ ಇಂದು ಕೂಡ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಏರಿಳಿತಗಳ ಹಾವು-ಏಣಿ ಆಟ ಮುಂದುವರಿದಿದೆ.
ಎಂಸಿಎಕ್ಸ್ ಮಾರುಕಟ್ಟೆ ಆರಂಭದಲ್ಲೇ ಇಂದು ಚಿನ್ನದ ದರ ಇಳಿಕೆಯಾಗಿದ್ದು, 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ₹44 ಇಳಿಕೆ ಕಂಡಿದೆ. ಅದೇ ರೀತಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹40 ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ
Bengaluru ನಗರದಲ್ಲಿ ಇಂದಿನ ಚಿನ್ನದ ದರ ಹೀಗಿದೆ:
24 ಕ್ಯಾರೆಟ್ (1 ಗ್ರಾಂ): ₹14,918 (₹44 ಇಳಿಕೆ)
24 ಕ್ಯಾರೆಟ್ (10 ಗ್ರಾಂ): ₹1,49,180 (₹440 ಇಳಿಕೆ)
22 ಕ್ಯಾರೆಟ್ (1 ಗ್ರಾಂ): ₹13,675 (₹40 ಇಳಿಕೆ)
22 ಕ್ಯಾರೆಟ್ (10 ಗ್ರಾಂ): ₹1,36,750 (₹400 ಇಳಿಕೆ)
18 ಕ್ಯಾರೆಟ್ (1 ಗ್ರಾಂ): ₹11,189 (₹33 ಇಳಿಕೆ)
18 ಕ್ಯಾರೆಟ್ (10 ಗ್ರಾಂ): ₹1,11,890 (₹330 ಇಳಿಕೆ)
ಮೇ 4 ರಂದು ಕೂಡ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡಿದ್ದು, 24 ಕ್ಯಾರೆಟ್‌ಗೆ ₹131 ಮತ್ತು 22 ಕ್ಯಾರೆಟ್‌ಗೆ ₹120 ಇಳಿಕೆಯಾಗಿತ್ತು. ಆದರೆ ಮೇ 2 ರಂದು ಸ್ವಲ್ಪ ಮಟ್ಟಿನ ಏರಿಕೆ ಕಂಡಿತ್ತು.
ಬೆಳ್ಳಿ ಬೆಲೆಯಲ್ಲೂ ಇಳಿಕೆ
ಚಿನ್ನದಂತೆ ಬೆಳ್ಳಿಯ ದರವೂ ಇಂದು ಇಳಿಕೆಯಾಗಿದೆ.
ಪ್ರತಿ ಗ್ರಾಂ ಬೆಳ್ಳಿ: ₹255 (₹10 ಇಳಿಕೆ)
ಪ್ರತಿ ಕೆಜಿ ಬೆಳ್ಳಿ: ₹2,55,000 (₹10,000 ಇಳಿಕೆ)
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತ ಏರಿಳಿತಗಳು ಮುಂದುವರಿಯುತ್ತಿದ್ದು, ಖರೀದಿಗೆ ಮುನ್ನ ದರ ಪರಿಶೀಲನೆ ಮಾಡುವುದು ಅತ್ಯಗತ್ಯ. ಈಗಿನ ಇಳಿಕೆ ಆಭರಣ ಪ್ರಿಯರಿಗೆ ಸ್ವಲ್ಪ ನಿಟ್ಟುಸಿರು ತಂದಿದೆ.






