ಸುದ್ದಿಒನ್ : ಮೈಸೂರು ರಾಜಮಾತೆ ಪ್ರಮೋದಾ ದೇವಿ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ ಎರಡು ಬೃಹತ್ (100 ಕೆಜಿ ತೂಕದ) ಬೆಳ್ಳಿಯ ಅಖಂಡ ದೀಪಗಳನ್ನು ದಾನ ಮಾಡಿದರು.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ರಂಗನಾಯಕುಲ ಮಂಟಪದಲ್ಲಿ ದೇವಾಲಯದ ಅಧಿಕಾರಿಗಳಿಗೆ ಅವುಗಳನ್ನು ಅರ್ಪಿಸಿದರು.
ಪ್ರತಿಯೊಂದು ಬೆಳ್ಳಿಯ ದೀಪವು ಸುಮಾರು 50 ಕೆಜಿ ಇದೆ. ಈ ದೀಪಗಳು ಗರ್ಭಗುಡಿಯಲ್ಲಿ ಬೆಳಗುವ ಸಾಂಪ್ರದಾಯಿಕ ದೀಪಗಳಾಗಿವೆ. ಸುಮಾರು 300 ವರ್ಷಗಳ ಹಿಂದೆ, ಅಂದಿನ ಮೈಸೂರು ಮಹಾರಾಜರು ದೇವಾಲಯಕ್ಕೆ ಇಂತಹ ದೀಪಗಳನ್ನು ದಾನ ಮಾಡಿದ್ದರು ಎಂದು ಇತಿಹಾಸ ಹೇಳುತ್ತದೆ. ಇದೀಗ ಮೂರು ಶತಮಾನಗಳ ನಂತರ ಮೈಸೂರು ಮಹಾರಾಣಿ ಈಗ ಅವುಗಳನ್ನು ಮತ್ತೆ ಪ್ರಸ್ತುತಪಡಿಸಿರುವುದು ಗಮನಾರ್ಹ. ಈ ಕಾರ್ಯಕ್ರಮದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು, ಹೆಚ್ಚುವರಿ ಇಒ ಸಿ.ಎಚ್. ವೆಂಕಯ್ಯ ಚೌಧರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.















