Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಹಕಾರ ಕ್ಷೇತ್ರದಿಂದ ಹೆಚ್ಚು ಸಹಕಾರ ಪಡೆದುಕೊಳ್ಳಿ : ಎಸ್.ಆರ್.ಗಿರೀಶ್ ಸಲಹೆ

Facebook
Twitter
Telegram
WhatsApp

ಚಿತ್ರದುರ್ಗ. ನ.15: ಚಿತ್ರದುರ್ಗ ಬರದ ನಾಡು. ಹಾಗಾಗಿ ಸಂಕಷ್ಟದಲ್ಲಿರುವ ನಮ್ಮ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದಿಂದ ಹೆಚ್ಚು ಸಹಕಾರ ಪಡೆದುಕೊಳ್ಳಬೇಕು ಎಂದು ಸಹಕಾರರತ್ನ ಪುರಸ್ಕøತರು ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಎಸ್.ಆರ್.ಗಿರೀಶ್ ಹೇಳಿದರು.

ಇಲ್ಲಿನ ಜಿಲ್ಲಾ ಸಹಕಾರ ಯೂನಿಯನ್‍ನ ಸಹಕಾರ ಭವನದಲ್ಲಿ ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್, ಚಿತ್ರದುರ್ಗ ತಾಲ್ಲೂಕಿನಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದ “ಸಹಕಾರ ಸಂಸ್ಥೆಗಳಲ್ಲಿ ಇತ್ತೀಚಿನ ಬೆಳವಣಿಗೆಗಳು”ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಖಿಲ ಭಾರತ ಸಹಕಾರ ಸಪ್ತಾಹವನ್ನು ಪ್ರತಿ ವರ್ಷದಂತೆ 7 ದಿನಗಳು ಹಬ್ಬದರೀತಿಯಲ್ಲಿ ಬಹಳ ಅರ್ಥಪೂರ್ಣವಾಗಿ ನವೆಂಬರ್ 14 ರಿಂದ 20 ರವರೆಗೆ  ಶ್ರೀಜವಾಹರಲಾಲ್ ನೆಹರು ಅವರ ಜನ್ಮ ದಿನದಂದು ಪ್ರಾರಂಭವಾಗಿ ದೇಶದಾದ್ಯಂತ 7 ದಿನಗಳು ಅರ್ಥಪೂರ್ಣವಾಗಿ ಯಶಸ್ವಿಯಾಗಿ ಆಚರಿಸಲಾಗುವುದು ಎಂದರು.

ವಾರ್ಷಿಕ ವರ್ಷದಲ್ಲಿ ಸಹಕಾರ ಸಂಘಗಳ ಪ್ರಗತಿಗಳು ಹಾಗೂ ಕಾನೂನಿನ ತಿದ್ದುಪಡಿಗಳ ಕುರಿತು ಚರ್ಚಿಸಲಾಗುವುದು ಹಾಗೂ ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರಕ್ಕೆ ಒಂದು ಸಚಿವಾಲಯವನ್ನು ಕೇಂದ್ರದಲ್ಲಿ ಆರಂಭಿಸಿರುತ್ತಾರೆ.ಇದರ ವತಿಯಿಂದ ಸಹಕಾರ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಕುರಿತು ಚರ್ಚಿಸಲಾಗುವುದು ಎಂದರು.

ಸಹಕಾರರತ್ನ ಪುರಸ್ಕøತರು ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿಂಕಲು ಬಸವರಾಜ್ ಮಾತನಾಡಿ, 1906ರಲ್ಲಿ ಪ್ರಪ್ರಥಮವಾಗಿ ಗದಗ ಜಿಲ್ಲೆಯ ಕಣಗಿನ ಹಾಳ್‍ನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭವಾಯಿತು. ಕಾನೂನಿನ ಚೌಕಟ್ಟಿನ ಮೂಲಕ ನಡೆದುಕೊಂಡು ಸಂಘವು ನಡೆಸುತ್ತಿದ್ದು, ಎಲ್ಲಾ ಕ್ಷೇತ್ರಗಳಿಗಿಂತ ಸಹಕಾರ ಕ್ಷೇತ್ರವು ಅತ್ಯಂತ ಮಹತ್ವವಾದ ಈ ಕ್ಷೇತ್ರದಲ್ಲಿ ಕೆಲಸ ಮಾಡುವುದು ನಮ್ಮ ಪುಣ್ಯ ಎಂದು ತಿಳಿಸಿದರು.

ರೈತರು ಸಹಕಾರ ಇಲಾಖೆ, ಸಹಕಾರ ಬ್ಯಾಂಕುಗಳಲ್ಲಿ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಆಡಳಿತ ಮಂಡಳಿಯಲ್ಲಿ ಸಹಕಾರ ಕಾನೂನು ಬಗ್ಗೆ ಮಾಹಿತಿ ಪಡೆಯಬೇಕು. ಕಾನೂನಿನ ಅರಿವು ತಿಳಿದುಕೊಂಡಾಗ ಮಾತ್ರ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ತಿಳಿಸಿದರು.

ಚಿತ್ರದುರ್ಗ ಟಿಎಪಿಸಿಎಂಎಸ್ ಅಧ್ಯಕ್ಷ ಹೆಚ್.ಎಂ.ಮಂಜುನಾಥಪ್ಪ ಮಾತನಾಡಿ, ಸಹಕಾರ ಸಂಘಗಳನ್ನು ಬಲಪಡಿಸಲು ಸಂಘಗಳ ಆಡಳಿತ ಮಂಡಳಿ ಉತ್ತಮವಾಗಿ ಕೆಲಸ ನಿರ್ವಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಬಡವ, ದುರ್ಬಲ ವರ್ಗದವರಿಗೆ ಹಾಗೂ ರೈತರಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲವಾಗುವಂತೆ ಜೆನಿರಿಕ್ ಔಷದಗಳನ್ನು ತಮ್ಮ ಸಂಘಗಳಿಂದ ಮಾರಾಟಮಾಡುತ್ತಿದ್ದೇವೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ  ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ಸಹಕಾರರಂಗಕ್ಕೆ ರೂ.900 ಕೋಟಿಯನ್ನು ಬಜೆಟ್‍ನಲ್ಲಿ ಮೀಸಲಿಟ್ಟಿರುವುದು ಒಂದು ಹೆಮ್ಮೆಯ ವಿಷಯವಾಗಿದೆ. ರೈತರಿಗೆ ಸಾಲ ಸೌಲಭ್ಯಗಳನ್ನು  ನೀಡಬೇಕು. ನಮ್ಮ ದೇಶದಲ್ಲಿ ಸಹಕಾರ ರಂಗದಲ್ಲಿ ಕ್ಷೀರಕ್ರಾಂತಿ ಮಾಡಿದೆ. ಹಾಲು ಅತಿ ಹೆಚ್ಚು ಉತ್ಪಾದನೆ ಮಾಡುತ್ತಿದ್ದು, ನಂದಿನಿ ಹಾಲಿಗೆ ಹೆಚ್ಚು ಬೇಡಿಕೆ ಬರುವಂತೆ ಉತ್ಪಾದನೆ ಮಾಡತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಉತ್ತರಕರ್ನಾಟಕದಲ್ಲಿ ಒಂದು ಡಿಸಿಸಿ ಬ್ಯಾಂಕ್ ಮಾಡುವ ಕೆಲಸ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಡುತ್ತಿದೆ. ನಮ್ಮಲ್ಲಿಯೂ ಸಹ ಸಹಕಾರ ಸಂಘಗಳು ಬಲಪ್ರದವಾಗಿಸಲು ಶ್ರಮಿಸಬೇಕು ಎಂದು ಆಶಿಸಿದರು. ಮಾನವೀಯ ದೃಷ್ಟಿಯಿಂದ ರೈತರಿಗೆ ಸಿಗುವ ಸೌಲಭ್ಯ ಒದಗಿಸಿ ಸಂಘಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ತಿಳಿಸಿದರು.

ಮಾತೃಶ್ರೀ ಎನ್.ಮಂಜುನಾಥ್ ಮಾತನಾಡಿ ಈ ವರ್ಷ ಮಳೆ ಬರದೆ ತೀವ್ರವಾದ ಬರಗಾಲ ಅನುಭವಿಸುತ್ತಿದ್ದು, ಕುಡಿಯುವ ನೀರಿನ ಬವಣೆ ಜಾನುವಾರಗಳಿಗೆ ಮೇವು ಕೊರತೆ ಇದೆ ಇದನ್ನೆಲ್ಲ ನೀಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಭಾರತ ದೇಶದಲ್ಲಿ ಹೈನುಗಾರಿಕೆ ಉತ್ಪಾದನೆಯಲ್ಲಿ ನಮ್ಮ ಭಾರತ ದೇಶ ಮುಂಚೂಣಿಯಲ್ಲಿದೆ. ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದೇವೆ. 9 ಲಕ್ಷ ಲೀಟರ್ ಹಾಲು ಉತ್ಪಾದನೆಯನ್ನು ಶಿವಮೊಗ್ಗ ಹಾಲು ಒಕ್ಕೂಟಕ್ಕೆ ನೀಡುತಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜೆ.ಶಿವಪ್ರಕಾಶ್ ಮಾತನಾಡಿ, 1902 ರಲ್ಲಿ ಪ್ರಪ್ರಥಮವಾಗಿ ಸಹಕಾರ ಚಳುವಳಿ ಪ್ರಾರಂಭವಾಯಿತು. 1953ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಜವಹಾರಲಾಲ್ ನೆಹರು ಅವರು ಸಹಕಾರರಂಗವನ್ನು ಪಂಚವಾರ್ಷಿಕಯೋಜನೆಯಲ್ಲಿ ಸೇರಿಸಿಕೊಂಡು ಸಹಕಾರಕ್ಷೇತ್ರವನ್ನು ಬಲಪಡಿಸಲು ಮುಂದಾದರು,  ಅದೇ ರೀತಿ ಈಗಿನ ಪ್ರಧಾನ ಮಂತ್ರಿಗಳು ಸಹಕಾರ ಸಚಿವಾಲಯವನ್ನು ಮಾಡಿ ಇನ್ನು ಹೆಚ್ಚು ಬಲಪಡಿಸಲು ರೂ. 900 ಕೋಟಿ ಮೀಸಲಿಟ್ಟಿರುತ್ತಾರೆ. ಇದರಿಂದ ಸಹಕಾರಿರಂಗವನ್ನು ಬಲಪಡಿಸಿ ಸಾಮಾನ್ಯ ಜನರಿಗೆ ಆರ್ಥಿಕವಾಗಿ ಸಬಲರಾಗಿಸಲು  ಹಾಗೂ ಸಾಲ ಸೌಲಭ್ಯ ನೀಡಲು ಸಹಕಾರಿಯಾಗಿದೆ ಎಂದರು.

ಮೊದಲು ಉಳ್ಳವರಿಗೆ ಮಾತ್ರ ಸಾಲ ಇನ್ನಿತರೆ ಸೌಲಭ್ಯ ಸಿಗುತ್ತಿತ್ತು, ಆದರೆ ಈಗ ಸಹಕಾರ ಕ್ಷೇತ್ರದ ಮೂಲಕ  ಪ್ರತಿಯೊಬ್ಬ ರೈತರಿಗೂ ಇದರ ಸೌಲಭ್ಯ ಸಿಗುವಂತೆ ಮಾಡಿದೆ ಎಂದು ತಿಳಿಸಿದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್.ಎಂ.ದ್ಯಾಮಣ್ಣ, ಆಡಳಿತ ಮಂಡಳಿಯವರು ಬದ್ಧತೆ ಮತ್ತು ದಕ್ಷತೆಯಿಂದ ಕೆಲಸ ಮಾಡಬೇಕು. ಸಹಕಾರ ಸಂಘಗಳ ಸಾಲ ಪಡೆದು ಮತ್ತು ಮರು ಪಾವತಿ ಮಾಡಿದಾಗ ಮಾತ್ರ ಹೆಚ್ಚ ಸಾಲ ಬ್ಯಾಂಕ್ ನೀಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯೂನಿಯನ್ ನಿರ್ದೇಶಕರಾದ ಜಿ.ಈ.ಅಜ್ಜಪ್ಪ, ಟಿ.ಮಹಂತೇಶ್, ಹಾಪ್‍ಕಾಮ್ಸ್ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ, ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಹೆಚ್.ಹಿಮಂತ್‍ರಾಜ್, ಶಂಕರಮೂರ್ತಿ, ಹಾಲು ವಿಸ್ತರಣಾಧಿಕಾರಿ ವಿನೂತ್ ಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ್ ಪಾಟೀಲ್ ಇದ್ದರು. ಕಾರ್ಯಕ್ರಮದಲ್ಲಿ ಸುಮಾರು 200 ಜನ ಜಿಲ್ಲೆಯ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಆಡಳಿತ ಮಂಡಳಿಯವರು, ಸಿಬ್ಬಂದಿಗಳು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

error: Content is protected !!