Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಾಂಧೀಜಿ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಟಿ.ಜಿ. ನರೇಂದ್ರ

---Advertisement---

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 02 : ಗಾಂಧೀಜಿಯವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ಅವರ ಹೆಜ್ಜೆ ಗುರುತುಗಳಲ್ಲಿ ನಡೆಯುವುದೇ ನಾವು ಗಾಂಧೀಜಿಯವರಿಗೆ ಸಲ್ಲಿಸುವ ಗೌರವ ಎಂದು ವರ್ತಕರಾದ ಟಿ ಜಿ ನರೇಂದ್ರ ಅವರು ಹೇಳಿದರು.

ನಗರದ ಜೆ ಸಿ ಆರ್ ಬಡಾವಣೆ ಗಣಪತಿ ದೇವಸ್ಥಾನದ ಆವರಣದಲ್ಲಿ 22ನೇ ವಾರ್ಡ್ ಜೆಸಿಆರ್ ಮತ್ತು ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಯಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರು ಸ್ವತಂತ್ರಕ್ಕಾಗಿ ಜೀವನವನ್ನು ಸಮರ್ಪಿಸಿದ ಉದ್ದೇಶಕ್ಕಾಗಿ ಅವರು ರಾಷ್ಟ್ರಪಿತ ಎಂದು ಪೂಜೆಸಲ್ಪಟ್ಟರು ಎಂದು ಸ್ಮರಿಸಿದರು.

ಕ್ಷೇಮಭಿವೃದ್ಧಿ ಸಂಘದ ಕಾರ್ಯದರ್ಶಿ ಎಸ್. ಜಿ. ಸುರೇಶ್ ಬಾಬು ಅವರ ಮಾತನಾಡಿ, ಗಾಂಧೀಜಿಯವರ ಸ್ವದೇಶಿ ಚಳುವಳಿ ವಿದೇಶದಲ್ಲಿ ಉತ್ಪಾದಿಸುವ ವಸ್ತುಗಳನ್ನು ಧಿಕ್ಕರಿಸಿ ಭಾರತದಲ್ಲಿ ಉತ್ಪಾದಿಸುವ ವಸ್ತುಗಳನ್ನು ಮಾತ್ರ ಬಳಕೆಗೆ ದೇಶದ ಜನತೆಗೆ ಕರೆ ನೀಡಿದರು ಸ್ವದೇಶಿ ಖಾದಿ ಯನ್ನೇ ಬಳಕೆ ಮಾಡಲು ಕರೆ ನೀಡಿದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಖಾದಿ ಉಪಯೋಗಿಸುವ ಸಂಪ್ರದಾಯ ಯಶಸ್ವಿಯಾಯಿತು.

ರಮಾದೇವಿ ವೆಂಕಣಣ್ಣಾಚಾರ್ ಮಾತನಾಡಿ ಗಾಂಧೀಜಿ ಜೀವನ ನಮಗೆ ದಾರಿದೀಪವಾಗಿದೆ.ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದು ತಿಳಿಸಿದರು. ಅದೇ ರೀತಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶ ಕಂಡ ಅತ್ಯಂತ ಸರಳ ನಾಯಕ ಶಾಸ್ತ್ರಿಯವರು ಉನ್ನತ ಅಧಿಕಾರದಲ್ಲಿದ್ದಾಗಲೂ ಗಾಂಧೀಜಿಯವರ ವಿಚಾರವನ್ನು ಪಾಲಿಸಿದರು. ಶಾಸ್ತ್ರಿಯವರು ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿದರು ಇಂಥ ಇಬ್ಬರು ಮಹಾ ನಾಯಕರು ಅಕ್ಟೋಬರ್ 2ರಂದು ಜನಿಸಿರುವುದು ನಮ್ಮ ದೇಶದ ಸುದೈವ ಎಂದು ತಿಳಿಸಿದರು.

ಈ ವೇಳೆ ಗೀತಾ, ಶೈಲಾ, ಕಲಾ, ರಮಾದೇವಿ ತಂಡದವರು ದೇಶ ಭಕ್ತಿ ಗೀತ ಗಾಯನ ಮಾಡಿದರು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮುರುಗೇಶ್ ಗೌಡ್ರು, ಜಿ ಆರ್ ಕೃಷ್ಣಮೂರ್ತಿ, ಮಾಜಿ ತಾ. ಪಂ. ಸದಸ್ಯ ನವೀನ್, ಪ್ರಕಾಶ್, ಗೀತಾ ಈಶ್ವರಪ್ಪ, ಶೈಲಾ ವಿಶ್ವನಾಥ್, ಕಲಾ ಮತ್ತಿತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...