ಬೆಂಗಳೂರು: ಬಡವ ಶ್ರೀಮಂತನೆಂಬ ಬೇಧವಿರದೆ ಆರೋಗ್ಯ ಸಮಸ್ಯೆ ಎಲ್ಲರಿಗೂ ಬರುತ್ತದೆ. ಲಿವರ್ ಅಂಗ ಕಸಿ ಚಿಕಿತ್ಸೆ ಬಹಳ ದುಬಾರಿ ಚಿಕಿತ್ಸೆಯಾಗಿದ್ದು,ಎಸ್ ಸಿ/ ಎಸ್ ಟಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಬಡ ರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಉಚಿತ ಅಂಗಾಂಗ ಕಸಿ ಚಿಕಿತ್ಸೆ ನೀಡುತ್ತಿರುವುದು ಅಭಿನಂದನೀಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮಾತನಾಡಿದ ಅವರು, ಒಕೆಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯಕ್ಕೆ ಹೆಲ್ತ್ ವಿಷನ್ ನ್ನು ಸಿದ್ಧಪಡಿಸಿ ಆರೋಗ್ಯ ಸೇವೆ ಹಾಗೂ ಆರೋಗ್ಯ ಮೂಲಸೌಕರ್ಯದ ಅಭಿವೃದ್ಧಿಗೆ ದೀರ್ಘಕಾಲಿಕ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಇದು ಪ್ರಧಾನಿ ಮೋದಿಯವರ ಆರೋಗ್ಯ ಆಭಿವೃದ್ಧಿ ಹಾಗೂ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯ ಆಶಯಕ್ಕೆ ಪೂರಕವಾಗಿದೆ. ದೇಶದ ನಾಗರಿಕ ಸ್ವಸ್ಥರಾಗಿದ್ದರೆ ದೇಶ ಸ್ವಸ್ಥವಾಗಿರುತ್ತದೆ.
ಸ್ವಸ್ಥ ಸಮಾಜ ದೇಶದ ಅಭಿವೃದ್ಧಿಗೆಸಹಕಾರಿಯಾಗಿದೆ
ಬಡವರ ಆರೋಗ್ಯದ ಹಿತರಕ್ಷಣೆಯಿಂದ ಅಂತ್ಯೋದಯ ಆಧಾರದಲ್ಲಿ ಆಯುಷ್ಮಾನ್ ಭಾರತ ಯೋಜನೆ ಜಾರಿಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅಭಿವೃದ್ಧಿ ತಲುಪಬೇಕು . ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಶ್ರಮಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.