ಚಿತ್ರದುರ್ಗ, ಜೂನ್. 09 : ಮೊಣಕಾಲು ನೋವಿನಿಂದ ಬಳಲುತ್ತಿರುವ ರೋಗಿಗಳಿಗಾಗಿ ಡಾ|| ಕೆ. ಜಗದೀಶ್, ಎಂ.ಬಿ.ಬಿ.ಎಸ್, ಎಂ.ಎಸ್. (ಆರ್ಥೋ), ಹಾಗೂ ಹೆಸರಾಂತ ಮೊಣಕಾಲು ಜಂಟಿ (ಕೀಲು) ಬದಲಿ ಶಸ್ತ್ರಚಿಕಿತ್ಸಾ ತಜ್ಞರ ಉಪಸ್ಥಿತಿಯಲ್ಲಿ ದಿನಾಂಕ 15-06-2025 ರ ಭಾನುವಾರ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯ ವರೆಗೆ ಉಚಿತ ಮೊಣಕಾಲು ತಪಾಸಣೆ ಹಾಗೂ ಚಿಕಿತ್ಸಾ ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ.
ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡಲಾಗುವುದು.
ಶಿಬಿರದ ವಿಳಾಸ: ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ರಿ) ನಂ 29, ಬಸವ ಭವನ, ದವಳಗಿರಿ ಬಡಾವಣೆ 2ನೇ ಹಂತ, ಭೀಮಸಮುದ್ರ ರಸ್ತೆ, ಚಿತ್ರದುರ್ಗ. ಹೆಚ್ಚಿನ ಮಾಹಿತಿ ಹಾಗೂ ಮುಂಗಡವಾಗಿ ಹೆಸರನ್ನು ನೊಂದಾಯಿಸಲು ಮೊ.ನಂ:9483519988 ಗೆ ಸಂಪರ್ಕಿಸಿ











