ಸುದ್ದಿಒನ್, ಚಿತ್ರದುರ್ಗ, ಜುಲೈ. 17 : ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ, ಎಸ್‌ಜೆಎಂ ಸ್ಕೂಲ್ ಆಫ್ ಡೆಂಟಿಸ್ಟ್ರಿಯ ಸಮುದಾಯ ದಂತ ಶಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಿನ್ನೆ (ಜುಲೈ. 16) ಉಚಿತ ದಂತ ಆರೋಗ್ಯ ಜಾಗೃತಿ, ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ವೈಜ್ಞಾನಿಕ ಸಂಶೋಧನೆಗಳು ಸೂಚಿಸುವಂತೆ ಕಾರಾಗೃಹದ ಬಂಧಿತ ಕೈದಿಗಳು ಬಾಯಿಯ ರೋಗಗಳಿಗೆ ಹೆಚ್ಚು ಒಳಗಾಗುವ ಅಪಾಯದಲ್ಲಿರುವ ಹಾಗೂ ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನಸಮೂಹವೆಂದು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ.
ಶಿಬಿರದಲ್ಲಿ ಒಟ್ಟು 43 ಮಂದಿ ಕಾರಾಗೃಹದ ಬಂಧಿತ ಕೈದಿಗಳ ದಂತ ಆರೋಗ್ಯ ತಪಾಸಣೆ ನಡೆಸಲಾಯಿತು. ತಪಾಸಣೆಯ ವೇಳೆ ಚಿಕಿತ್ಸೆಯ ಅಗತ್ಯವಿದ್ದ ಕೈದಿಗಳಿಗೆ ಸಂಸ್ಥೆಯ ಮೊಬೈಲ್ ದಂತ ಚಿಕಿತ್ಸಾ ವಾಹನದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೆಚ್ಚುವರಿ ಸಲಹೆ ಹಾಗೂ ಸಮಗ್ರ ಚಿಕಿತ್ಸೆಯ ಅಗತ್ಯವಿದ್ದ ಕೈದಿಗಳನ್ನು ಸಂಸ್ಥೆಗೆ ರೆಫರಲ್ ಮಾಡಲಾಯಿತು.

ಈ ಶಿಬಿರದ ಮೂಲಕ ಕೈದಿಗಳಲ್ಲಿ ಬಾಯಿಯ ಆರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ದಂತ ರೋಗಗಳ ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಅಗತ್ಯ ಚಿಕಿತ್ಸೆಯನ್ನು ಒದಗಿಸುವ ಉದ್ದೇಶವನ್ನು ಯಶಸ್ವಿಯಾಗಿ ಈಡೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾII ಜಯಚಂದ್ರ ಎಂ. ಜಿ, ವಿಭಾಗದ ಮುಖ್ಯಸ್ಥರು ಹಾಗೂ ಡಾII ಗಝಲಾ ಸುಲ್ತಾನ ಡಿ. ಎಸ್, ಸಹಾಯಕ ಪ್ರಾಧ್ಯಾಪಕರ ನೇತೃತ್ವದಲ್ಲಿ ಉಚಿತ ದಂತ ಆರೋಗ್ಯ ಜಾಗೃತಿ, ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಶಿಬಿರದಲ್ಲಿ ಸಹಾಯಕ ದಂತ ವೈದ್ಯರಾದ ಡಾII ಭಾಗ್ಯ, ಡಾII ಆಸ್ಟೀನಾ , ಡಾII ಶಿಲ್ಪಿ , ಡಾII ಅಶ್ವತಿ , ಡಾII ಸುರಭಿ ಮತ್ತು ಡಾII ಸೌಭಾಗ್ಯ. ಕಾರಾಗೃಹ ಅಧೀಕ್ಷಕರು ಸಿದ್ದರಾಮ ಪಾಟೀಲ, ಜೈಲರ್ ರಾಜೇಂದ್ರ ಕೊಪರ್ಡೆ, ಸಹಾಯಕ ಜೈಲರಗಳಾದ ಎಸ್ ಆರ್ ಮಣ್ಣೇರಿ, ಮಡಿವಾಳಪ್ಪ ಮತ್ತು ಇತರ ಸಿಬ್ಬಂದಿಯವರು ಹಾಜರಿದ್ದರು.










