ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 03 : ನಗರದ
ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ. ಅಶ್ವಿನಿ ಕೆ.ಎಸ್ ಬಿ.ಡಿ.ಎಸ್.ಎಂ.ಡಿ.ಎಸ್ (ಎಂಡೋಡೆಂಟಿಸ್ಟ್) ಇವರ ನೇತೃತ್ವದಲ್ಲಿ ಉಚಿತ ದಂತ ತಪಾಸಣ ಶಿಬಿರವನ್ನು ಏರ್ಪಡಿಸಲಾಗಿದೆ.
ಚಾಂಪಿಯನ್ಸ್ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆ ಚಿತ್ರದುರ್ಗ, ಚಿತ್ರದುರ್ಗ ಜಿಲ್ಲಾ ದೇವಾಲಯ ಸಂವರ್ಧನಾ ಸಮಿತಿ ಮತ್ತು ಚಿತ್ರದುರ್ಗ ಜಿಲ್ಲಾ ಪತಂಜಲಿ ಯೋಗ ಟ್ರಸ್ಟ್(ರಿ) ಚಿತ್ರದುರ್ಗ ಇವರ ಸಹಭಾಗಿತ್ವದಲ್ಲಿ ಸೆಪ್ಟೆಂಬರ್ 07 ರ ಭಾನುವಾರ ಬೆಳಿಗ್ಗೆ 11:00 ಗಂಟೆಯಿಂದ ಮದ್ಯಾಹ್ನ 02:00 ಗಂಟೆ ಯವರೆಗೆ ಈ ಶಿಬಿರ ನಡೆಯಲಿದೆ.
ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿರುವವರು ಶಿಬಿರದ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರದ ವಿಳಾಸ: ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ) ನಂ 29,ಬಸವ ಭವನ, ದವಳಗಿರಿ ಬಡಾವಣೆ ಭೀಮಸಮುದ್ರ ರಸ್ತೆ, ಚಿತ್ರದುರ್ಗ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರನ್ನು ಮುಂಗಡವಾಗಿ ನೊಂದಾಯಿಸಲು ಮೊಬೈಲ್ ಸಂಖ್ಯೆ: 9483519988 ಗೆ ಸಂಪರ್ಕಿಸಿ.

















