ಸುದ್ದಿಒನ್, ಚಿತ್ರದುರ್ಗ, ನವೆಂಬರ್.09 :ದಿವಂಗತ ಮಾಜಿ ಸಚಿವರಾದ ಜಿ. ಹೆಚ್. ಅಶ್ವತ್ಥ ರೆಡ್ಡಿಯವರ ಧರ್ಮಪತ್ನಿ ಶ್ರೀಮತಿ ತಿಪ್ಪಮ್ಮನವರು(84) ಇಂದು (ನವಂಬರ್.09) ಸಂಜೆ 5 ಗಂಟೆ ವೇಳೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು (ಗುರುವಾರ) ಸಂಜೆ ಚಿಕಿತ್ಸೆ ಫಲಿಸದೆ ವಿಧಿವಶವಾಗಿದ್ದಾರೆ.
ಮಾಜಿ ಸಚಿವರಾದ ಜಿ. ಹೆಚ್. ಅಶ್ವತ್ಥ ರೆಡ್ಡಿಯವರು ಕಳೆದ ಒಂಬತ್ತು ವರ್ಷಗಳ ಹಿಂದೆ 2014 ರಲ್ಲಿ ವಿಧಿವಶರಾಗಿದ್ದರು.
ಇವರಿಗೆ ಇಬ್ಬರು ಪತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಜಿ.ಹೆಚ್. ಆರ್. ಕಾಂಪೌಂಡ್ ನಲ್ಲಿ (ನವೆಂಬರ್.10) ರಂದು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.