ಬೆಂಗಳೂರು.ಜುಲೈ.25 : ಮಾಜಿ ಸಚಿವರು, ಮಾಜಿ ಉಪಸಭಾಪತಿಗಳೂ ಆಗಿದ್ದ ಸಿ. ವೀರಣ್ಣ ನಿಧನರಾಗಿದ್ದು, ಸಿಎಂ ಡಿ.ಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ಮಾಜಿ ಸಚಿವರು, ಮಾಜಿ ಉಪಸಭಾಪತಿಗಳೂ ಆಗಿದ್ದ ಸಿ. ವೀರಣ್ಣ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಸಚಿವರಾಗಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾಗಿ ನಾಡಿಗೆ ಅವರು ನೀಡಿದ ಸೇವೆ ಅಪಾರ.ರಾಜ್ಯದ ಹಿತ ಮತ್ತು ಶೋಷಿತ ಸಮುದಾಯಗಳ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದ ಅವರು, ತಮ್ಮ ಹೋರಾಟದ ಬದುಕು ಹಾಗೂ ತಳಸಮುದಾಯಗಳ ಬಗೆಗಿನ ಕಾಳಜಿಯ ಮೂಲಕ ಸದಾ ನಮ್ಮ ನೆನಪಿನಲ್ಲಿ ಉಳಿಯಲಿದ್ದಾರೆ.
ಮಾಜಿ ಸಚಿವರು, ಮಾಜಿ ಉಪಸಭಾಪತಿಗಳೂ ಆಗಿದ್ದ ಸಿ. ವೀರಣ್ಣ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಸಚಿವರಾಗಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾಗಿ ನಾಡಿಗೆ ಅವರು ನೀಡಿದ ಸೇವೆ ಅಪಾರ.
ರಾಜ್ಯದ ಹಿತ ಮತ್ತು ಶೋಷಿತ ಸಮುದಾಯಗಳ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದ ಅವರು, ತಮ್ಮ ಹೋರಾಟದ ಬದುಕು ಹಾಗೂ ತಳಸಮುದಾಯಗಳ ಬಗೆಗಿನ ಕಾಳಜಿಯ… pic.twitter.com/NAwWyzK4uC
— DK Shivakumar (@DKShivakumar) July 25, 2026
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.











