ಜೀವನ ಮಾಡಬೇಕು ಅಂದ್ರೆ ಹಣ ಬಹಳ ಮುಖ್ಯ. ಈಗಂತು ಎಲ್ಲವೂ ದುಬಾರಿ. ಬರುವ ಸಂಬಳದಲ್ಲಿ ದೊಡ್ಡಮಟ್ಟಕ್ಕೆ ಉಳಿಕೆ ಮಾಡಲು ಸಾಧ್ಯವಿಲ್ಲದೆ ಹೋದರು ಭವಿಷ್ಯಕ್ಕಾಗಿ ಸ್ವಲ್ಪ ಉಳಿತಾಯ ಮಾಡಲೇಬೇಕು. ಹೀಗಾಗಿ ಒಂದಷ್ಟು ಯೋಜನೆಗಳಲ್ಲಿ ಯಾವುದು ಸಾಧ್ಯವಾಗುತ್ತದೆಯೋ ಅದರಲ್ಲಿ ಉಳಿತಾಯ ಮಾಡುವುದು ಉತ್ತಮ. ಫ್ಯೂಚರ್ ನಲ್ಲಿ ಚೆನ್ನಾಗಿರಬೇಕು ಅಂದ್ರೆ ಪೋಸ್ಟ್ ಆಫೀಸಲ್ಲಿರುವ ಸ್ಕೀಮ್ ಗಳನ್ನ ಬಳಸಿಕೊಳ್ಳಿ.
ಅದರಲ್ಲಿ ಪೋಸ್ಟ್ ಆಫೀಸ್ ರೆಕರಿಂಗ್ ಡಿಪಾಸಿಟ್ ಬೆಸ್ಟ್ ಎನ್ನಲಾಗುತ್ತದೆ. ಇದು ಬ್ಯಾಂಕ್ ಗಳಲ್ಲಿ ಆರ್ಡಿ ರೀತಿ. ಹಾಗಾದ್ರೆ ಈ ಸ್ಕೀಮ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣಾ. ರೆಕರಿಂಗ್ ಡೆಪಾಸಿಟ್ ಅಕೌಂಟ್ ನಲ್ಲಿ ನೀವೂ ಪ್ರತಿ ತಿಂಗಳು ನಿಗದಿತ ಹಣವನ್ನು ಠೇವಣಿ ಇಡುತ್ತಾ ಹೋಗಬಹುದು. ಪೋಸ್ಟ್ ಆಫೀಸ್ ನ ಆರ್ಡಿ ಸ್ಕೀಮ್ 60 ತಿಂಗಳ ಅಂದ್ರೆ 5 ವರ್ಷ ಅವಧಿಯದ್ದಾಗಿರುತ್ತದೆ. ನೀವೂ 60 ತಿಂಗಳು ಹಣ ಪಾವತಿ ಮಾಡಿದರೆ ನಿಮಗೆ ಒಟ್ಟಿಗೆ ಹಣವನ್ನು ರಿಟರ್ನ್ ಪಡೆಯಬಹುದಾಗಿರುತ್ತದೆ.
ಅಂದ್ರೆ ಇದರಲ್ಲಿ ವರ್ಷಕ್ಕೆ ಶೇಜಡ 6.7ರ ಬಡ್ಡಿದರ ನಿಗದಿಯಾಗಿದೆ. ಪ್ರತೀ ಕ್ವಾರ್ಟರ್ ಗೆ ಸರ್ಕಾರವು ಬಡ್ಡಿದರ ಪರಿಷ್ಕರಿಸುತ್ತಿರುತ್ತದೆ. ಈ ಸ್ಕೀಮ್ ನಲ್ಲಿ ತಿಂಗಳಿಗೆ ಕನಿಷ್ಠ 100 ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಗರಿಷ್ಠ ಹೂಡಿಕೆಯ ಮಿತಿ ಇರುವುದಿಲ್ಲ. ನೀವೂ ಪೋಸ್ಟಗ ಆಫೀಸ್ ನಲ್ಲಿ ಆರ್ಡಿ ಅಕೌಂಟ್ ತೆರೆದು ತಿಂಗಳಿಗೆ 10,000 ರೂಪಾಯಿಯಂತೆ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ನಿಮಗೆ 7,13,659 ರೂಪಾಯಿ ರಿಟರ್ನ್ ಬರಲಿದೆ. 60 ತಿಂಗಳಿಗೆ ಆರ್ಡಿ ಅಕೌಂಟ್ ಗೆ 6 ಲಕ್ಷ ಹೂಡಿಕೆ ಮಾಡಿದರೆ 5 ವರ್ಷಕ್ಕೆ ನಿಮಗೆ ಸಿಗುವ ಬಡ್ಡಿ 1,13,659 ರೂಪಾಯಿ ಆಗಿರುತ್ತದೆ. ಹೀಗಾಗಿ ಮುಂದಿನ ಜೀವನಕ್ಕಾಗಿ ಈ ರೀತಿಯ ಸ್ಕೀಮ್ ಗಳಲ್ಲಿ ಹಣವನ್ನ ಹೂಡಿಕೆ ಮಾಡುವುದು ಉತ್ತಮ.





