Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೆಎಸ್‍ಎಫ್‍ಸಿಗೆ ರೂ. 66.61 ಕೋಟಿ ನಿವ್ವಳ ಲಾಭ : ಡಾ. ಏಕರೂಪ್ ಕೌರ್

Facebook
Twitter
Telegram
WhatsApp

 

ಚಿತ್ರದುರ್ಗ,( ಜುಲೈ 19) : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2021-22ನೇ ಸಾಲಿನಲ್ಲಿ ತೆರಿಗೆ ಪೂರ್ವ 107.33 ಕೋಟಿ ರೂ. ದಾಖಲೆಯ ಲಾಭಗಳಿಸಿದ್ದು, 66.61 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಏಕರೂಪ್ ಕೌರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಜ್ಯ ಹಣಕಾಸು ಸಂಸ್ಥೆಯ 63ನೇ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಕಳೆದ 63 ವರ್ಷಗಳಿಂದ ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿಗಾಗಿ ರಾಜ್ಯದ ಹಿಂದುಳಿದ ಪ್ರದೇಶಗಳ ಕೈಗಾರಿಕಾ ಅಭಿವೃದ್ಧಿಗಾಗಿ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರು ಉದ್ದಿಮೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುವಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಸ್ಥೆಯಾಗಿದೆ ಎಂದರು.

2021-22ರಲ್ಲಿನ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಾರ್ಯಚರಣೆಯ ಮುಖ್ಯ ಅಂಶಗಳು : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ 2021-22ನೇ ಸಾಲಿನ ಆರ್ಥಿಕ ಸ್ಥಿತಿಯನ್ನು ಕ್ರೂಢೀಕರಿಸಲಾಗಿದ್ದು ತೆರಿಗೆ ಪೂರ್ವ 107.33 ಕೋಟಿ ರೂಪಾಯಿ ದಾಖಲೆ ಲಾಭಗಳಿಸಿದೆ ಹಾಗೂ 66.61 ಕೋಟಿ ನಿವ್ವಳ ಲಾಭ ಗಳಿಸಿದೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2021-22ರ ಹಣಕಾಸು ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 493.25 ಕೋಟಿ ರೂಗಳ ಸಾಲ ಮಂಜೂರಾತಿ ಮಾಡಿದ್ದು, ಅದರಲ್ಲಿ 432.72 ಕೋಟಿ ರೂ ಮೊತ್ತದ ಮಂಜೂರಾತಿಯೂ ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಘಟಕಗಳಿಗೆ ಒಳಗೊಂಡಿರುತ್ತದೆ. 2022ರ ಮಾರ್ಚ್ ಅಂತ್ಯದವರೆಗೆ 1,75,123 ಉದ್ಯಮಿಗಳಿಗೆ 18,779,63 ಕೋಟಿ ಸಂಚಿತ ಸಾಲ ಮಂಜೂರಾತಿ ಮಾಡಲಾಗಿದೆ. ಈ  ವರ್ಷದಲ್ಲಿ 386.46 ಕೋಟಿ ರೂ.ಸಾಲ ವಿತರಿಸಿದ್ದು, 2022 ಮಾರ್ಚ್ ಅಂತ್ಯದವರೆಗೆ 14,776,29 ಕೋಟಿ ರೂ.ಗಳಷ್ಟು ಸಂಚಿತ ವಿತರಣೆ ಮಾಡಲಾಗಿದೆ. ಈ ವರ್ಷದಲ್ಲಿ ಒಟ್ಟು 741.89 ಕೋಟಿ ರೂಪಾಯಿ ವಸೂಲಾತಿ ಮಾಡಲಾಗಿದೆ.

ಸಂಸ್ಥೆಯು  ಸ್ಥಾಪಿತ ದಿನದಿಂದ ಇಲ್ಲಿಯವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 22.072 ಉದ್ದಿಮೆಗಳಿಗೆ 2.432.62 ಕೋಟಿ ರೂಗಳಿಗೆ ಅಧಿಕ ಸಾಲಗಳ ಮಂಜೂರಾತಿ ನೆರವನ್ನು ನೀಡಿದೆ. ಸಂಸ್ಥೆ ಆರಂಭದಿಂದ ಇಲ್ಲಿಯವರೆಗೂ 31.202 ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ 4.511.44 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದೆ.

ಹಿಂದುಳಿದ ಮತ್ತು ಅಲ್ಪಸಂಖ್ಯಾತ 41.199 ಉದ್ಯಮಿಗಳಿಗೂ ಇಲ್ಲಿಯವರೆಗೆ 1.834.60 ಕೋಟಿ ರೂ. ಸಾಲ ಮಂಜೂರಾತಿ ನೆರವನ್ನು ಒದಗಿಸಿದೆ.

2022-23ನೇ ಹಣಕಾಸು ವರ್ಷದ ಕಾರ್ಯಾಚರಣೆಯ ಗುರಿಗಳು : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಣಕಾಸು ವರ್ಷ 2022-23ರಲ್ಲಿ 1010.00 ಕೋಟಿ ರೂ.ಗಳ ಸಾಧಾರಣ ಮಂಜೂರಾತಿ ಗುರಿಯನ್ನು ಇಟ್ಟುಕೊಂಡು ಗುಣಮಟ್ಟದ ಉದ್ಯಮಿಗಳಿಗೆ ಹಣಕಾಸು ನೆರವು ನೀಡಿ ಆರ್ಥಿಕ ಅಭಿವೃದ್ಧಿಯ ಯೋಜನೆ ಹೊಂದಿದೆ. 2022-23ರಲ್ಲಿ  ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಮತ್ತು ಮಹಿಳಾ ಉದ್ಯಮಿಗಳಿಗೆ ಹಾಗೂ ಅತಿ ಸಣ್ಣ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಲಭ್ಯವಿರುವ ಬಡ್ಡಿ ಗುರಿ ಸಾಧಿಸಲು ನಿರೀಕ್ಷೆ ಇದೆ. ಇದರಲ್ಲಿ 317.64 ಕೋಟಿ ರೂ.ಗಳಷ್ಟು ಮೊತ್ತವು ಬಡ್ಡಿಯ ಪಾಲಾಗಿರುತ್ತದೆ. 2022ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಸೂಲತಿ ಮೊತ್ತವು 19,259.93 ಕೋಟಿ ರೂ.ಗಳಷ್ಟಾಗಿರುತ್ತದೆ. ಹಿಂದಿನ ಹಣಕಾಸು ವರ್ಷ ಶೇ.5.09ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ವರ್ಷದಲ್ಲಿ ಶೇ.4.74ಕ್ಕೆ ಇಳಿದಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಏಕರೂಪ್ ಕೌರ್ ತಿಳಿಸಿದ್ದಾರೆ.

ಘಟಕಗಳಿಗೆ ಲಭ್ಯವಿರುವ ಬಡ್ಡಿ ಸಹಾಯಧನ ಯೋಜನೆಯಿಂದ ಮುಂಬರುವ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಮಂಜೂರಾತಿ ಹಾಗೂ ವಿತರಣೆಯ ಗುರಿ ಸಾಧಿಸಲು ಅನುಕೂಲವಾಗುವ ನಿರೀಕ್ಷೆ ಇದೆ. ಅಲ್ಲದೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆ ಹೆಚ್ಚಿನ ಒತ್ತು ನೀಡಲಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಏಕರೂಪ್ ಕೌರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತ ವಿವಿಧ ಆಕರ್ಷಕ ಸಹಾಯಧನ  ಯೋಜನೆ ಅಡಿ ನೆರವಿನ ವಿವರ: 2021-22ನೇ ವರ್ಷದಲ್ಲಿ ಸಂಸ್ಥೆಯು ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಯೋಜನೆಗಳಲ್ಲಿ 37 ಮಹಿಳಾ ಉದ್ಯಮಿಗಳಿಗೆ 42. 76 ಕೋಟಿಗಳ ಮಂಜೂರಾತಿ ಮಾಡಲಾಗಿದೆ. 31ನೇ ಮಾರ್ಚ್ 2022ರ ಅಂತ್ಯದವರೆಗೆ 917.34 ಕೋಟಿ ರೂ.ಗಳ ಸಂಚಿತ ನೆರವನ್ನು 1.252 ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 177 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 164.61 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದವರೆಗೆ  ಸಂಸ್ಥೆಯ 1.942.19 ಕೋಟಿ ರೂ. ಸಂಚಿತ ನೆರವÀನ್ನು 3.456 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ನೀಡಲಾಗಿದೆ.

ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಬಡ್ಡಿ ಸಹಾಯಧನ ಯೋಜನೆ ಅಡಿಯಲ್ಲಿ 213 ಘಟಕಗಳಿಗೆ 243.02 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರಸಕ್ತ ಹಣಕಾಸು ಅಂತ್ಯದವರೆಗೆ 912 ಉದ್ಯಮಗಳಿಗೆ 995.20 ಕೋಟಿ ರೂ. ಸಂಚಿತ ನೆರವನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ರಾಜ್ಯ ಸರ್ಕಾರದ ನೆರವು: 2021-22ನೇ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರವು ಸಂಸ್ಥೆಗೆ 50.00 ಕೋಟಿ ರೂ.ಗಳ ಈಕ್ವಿಟಿ ಬಂಡವಾಳವನ್ನು ಹಾಗೂ 171.85 ಕೋಟಿ ರೂ.ಗಳ ಬಡ್ಡಿ ಸಹಾಯಧನ ಯೋಜನೆಗಳಿಗೆ ಪೂರಕ ನೆರವನ್ನು ಒದಗಿಸಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಹಣಕಾಸಿನ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರವು 25.51 ಕೋಟಿ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಿದೆ
ಕೋವಿಡ್-19 ಸಾಂಕ್ರಾಮಿಕ ಸೋಂಕು ಅವಧಿಯಲ್ಲಿ ಸಾಲಗಾರರಿಗೆ ಒದಗಿಸಿರುವ ಸೌಲಭ್ಯಗಳು:  ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆ ರೆಸಲ್ಯೂಷನ್ ಪ್ರೇಮ್ ವರ್ಕ್ 2.0ಗೆ ಅನುಗುಣವಾಗಿ ಅತಿ ಸಣ್ಣ, ಸಣ್ಣ  ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ಕೋವಿಡ್-19 ರ ಸಾಂಕ್ರಾಮಿಕ ರೋಗದ ಪರಿಣಾಮದ ಸಮಸ್ಯೆಗಳಿಗೆ ಸಾಲ ಮರುಪಾವತಿಯ ಪುನರ್‍ರಚನೆ ಸೌಲಭ್ಯ ನೀಡಲಾಯಿತು.

ಚಿತ್ರದುರ್ಗ ಶಾಖೆ: 2021-22ನೇ ಸಾಲಿನಲ್ಲಿ ಚಿತ್ರದುರ್ಗ ಶಾಖೆಯಿಂದ ರೂ. 788 ಲಕ್ಷಗಳ ಸಾಲ ಮಂಜೂರಾತಿ ನೀಡಲಾಗಿದ್ದು, 831 ಲಕ್ಷಗಳ ವಿತರಣೆ ಮಾಡಲಾಗಿದೆ. ರೂ. 2127 ಲಕ್ಷಗಳ ಸಾಲ ವಸೂಲಾತಿ ಹಾಗೂ ರೂ. 665 ಲಕ್ಷಗಳ ಬಡ್ಡಿ ವಸೂಲಾತಿ ಮಾಡಲಾಗಿದೆ ಎಂದು ಚಿತ್ರದುರ್ಗ ಶಾಖಾ ವ್ಯವಸ್ಥಾಪಕರಾದ ಎಸ್.ಮೋಹನ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ, ಈ ರಾಶಿಯವರಿಗೆ ವಂಶೋದ್ಧಾರ ಗಂಡು ಸಂತಾನದ ಚಿಂತೆ ಭಾನುವಾರ-ರಾಶಿ ಭವಿಷ್ಯ ಮೇ-12,2024 ಶಂಕರಾಚಾರ್ಯ ಜಯಂತಿ, ತಾಯಿ ದಿನ ಸೂರ್ಯೋದಯ: 05:49, ಸೂರ್ಯಾಸ್ತ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

error: Content is protected !!