ವರದಿ ಮತ್ತು ಫೋಟೋ ಕೃಪೆ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 7899864552
ಸುದ್ದಿಒನ್, ಚಿತ್ರದುರ್ಗ, ನವೆಂಬರ್.07 : ನಾಗರೀಕರಿಗೆ ಬಂದೂಕು ತರಬೇತಿ ನೀಡಿ ಸರ್ಟಿಫಿಕೇಟ್ ಕೊಡುವುದು ಪೊಲೀಸ್ ಇಲಾಖೆ ಜವಾಬ್ದಾರಿ. ಇದರಿಂದ ನಾಗರೀಕರು ಹಾಗೂ ಇಲಾಖೆ ನಡುವೆ ಸ್ನೇಹ ಸಂಬಂಧ ಬೆಸೆಯುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಹೇಳಿದರು.
ದಾವಣಗೆರೆ ರಸ್ತೆ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರೈಫಲ್ ಕ್ಲಬ್‍ಗೆ ಸೋಮವಾರ ಭೇಟಿ ನೀಡಿ ಚರ್ಚಿಸಿ ನಂತರ ಮಾತನಾಡಿದ ಅವರು ಪೊಲೀಸ್ ಫ್ರೆಂಡ್ಲಿಗೆ ಸಿ.ಆರ್.ಟಿ.ಸಿ. ಅನುಕೂಲವಾಗುತ್ತದೆ. ಬಂದೂಕು ತರಬೇತಿ ಶಿಬಿರವನ್ನು ವ್ಯಸ್ಥಿತಗಾಗಿ ಮುನ್ನಡೆಸಿಕೊಂಡು ಹೋಗಬೇಕು. ಪೊಲೀಸ್ ರೇಂಜ್ ಕೂಡ ಮಾಡಬಹುದು. ನನ್ನಿಂದ ಏನು ಸಹಾಯ ಬೇಕೋ ಅದನ್ನು ಪಡೆದುಕೊಳ್ಳಿ. ಆದರೆ ಕಾನೂನಾತ್ಮಕವಾಗಿ ಎಲ್ಲವೂ ಸರಿಯಿರಬೇಕು ಎಂದು ರೈಫಲ್ ಕ್ಲಬ್‍ನವರಿಗೆ ತಿಳಿಸಿದರು.
ಹೋಂಗಾರ್ಡ್ ಕಮಾಂಡೆಂಟ್ ಸಂಧ್ಯಾ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಪೊಲೀಸ್ ಇಲಾಖೆ ಜೊತೆ ಸೇರಿಕೊಂಡು ಹೋಂಗಾರ್ಡ್‍ನಿಂದಲು ಸಾಕಷ್ಟು ತರಬೇತಿಗಳನ್ನು ಕೊಡುತ್ತೇವೆ. ಬಂದೂಕು ತರಬೇತಿಯಿಂದ ಸಿಗುವ ಸರ್ಟಿಫಿಕೇಟ್‍ನಿಂದ ಬಂದೂಕು ಪರವಾನಗಿ ಪಡೆಯಲು ಸುಲಭವಾಗುತ್ತದೆ. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಇಲಾಖೆಯೊಂದಿಗೆ ಕೈಜೋಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ನ್ಯಾಯವಾದಿ ಫಾತ್ಯರಾಜನ್ ಮಾತನಾಡಿ ಪ್ರತಿ ವರ್ಷವೂ ಸಿ.ಆರ್.ಟಿ.ಸಿ.ಯಿಂದ ನಾಗರೀಕರಿಗೆ ಬಂದೂಕು ತರಬೇತಿಯನ್ನು ನೀಡಲಾಗುತ್ತಿದೆ. ರಕ್ಷಣಾಧಿಕಾರಿಗಳಾಗಿ ತಾವುಗಳು ಕೊಡುವ ಎಲ್ಲಾ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾನೂನು ಅಡಿಯಲ್ಲಿ ರೈಫಲ್ ಕ್ಲಬ್ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.
ರೈಫಲ್ ಕ್ಲಬ್ ಅಧ್ಯಕ್ಷ ಎಂ.ಕೆ.ಅನಂತರೆಡ್ಡಿ, ಕಾರ್ಯದರ್ಶಿ ಫೈಜುಲ್ಲಾ, ಖಜಾಂಚಿ ವೈ.ಬಿ.ಮಹೇಂದ್ರನಾಥ್, ಅರುಣ್, ಎಂ.ಸಿ.ಶಂಕರ್, ಗಾಯತ್ರಿ ಶಿವರಾಂ, ಸುರೇಶ್, ಮಹಮದ್ ಆಲಿ ಈ ಸಂದರ್ಭದಲ್ಲಿದ್ದರು.
ಫೈಲ್ವಾನ್ ಸದ್ದಾಂಹುಸೇನ್, ಮೃತ್ಯುಂಜಯ, ಸ್ಪೂರ್ತಿ ಇವರುಗಳನ್ನು ಸನ್ಮಾನಿಸಲಾಯಿತು.