ಸೋಷಿಯಲ್ ಮೀಡಿಯಾ ದೊಡ್ಡಮಟ್ಟಕ್ಕೆ ರೀಚ್ ಆಗುವುದಕ್ಕೆ ಶುರುವಾದ ಮೇಲಂತು ವೀವ್ಸ್ ಗಾಗಿ ಜನ ಏನೇನೋ ಮಾಡುವುದಕ್ಕೆ ಶುರು ಮಾಡಿದ್ದಾರೆ. ಜಸ್ಟ್ ಮನರಂಜನೆಗಾಗಿ ಕೆಲವೊಂದು ಸಲ ಕಾನೂನನ್ನು ಮೀರುತ್ತಾರೆ. ನೋಡುಗರಿಗೂ ತಪ್ಪು ಸಂದೇಶವನ್ನ ನೀಡುತ್ತಾರೆ. ಇದೀಗ ಅಂಥದ್ದೇ ಕಾರಣಕ್ಕೆ ವಿನಯ್ ಗೌಡ ಹಾಗೂ ರಜತ್ ಕಿಶನ್ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚೆಗೆ ವಿನಯ್ ಗೌಡ ಹಾಗೂ ರಜತ್ ಕಿಶನ್ ಸ್ಟೈಲ್ ಆಗಿ ವಿಡಿಯೋವೊಂದನ್ನ ಮಾಡಿದ್ದರು. ಇಬ್ಬರು ಒಳ್ಳೆ ಗತ್ತಿನಲ್ಲಿ ಬಂದು ವಿಡಿಯೋಗೆ ಪೋಸ್ ನೀಡಿದ್ದರು. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ, ಕೈಯಲ್ಲಿಂದು ಲಾಂಗ್ ಹಿಡಿದು ಬೀಸುತ್ತಾ ವಿಡಿಯೋ ಮಾಡಿದ್ದರು. ಇದರಲ್ಲಿ ನಟ ದರ್ಶನ್ ಅವರ ಮೆಜೆಸ್ಟಿಕ್ ಹಾಡಿಗೆ ಸ್ಲೋ ಮೋಷನ್ ನಲ್ಲಿ ವಿಡಿಯೋ ಮಾಡಿದ್ದರು. ಈ ವಿಡಿಯೋ ನೋಡಿದವರಿಗೆ ಭಯದ ವಾತಾವರಣವೇ ಮೂಡಿತ್ತು. ಹೀಗಾಗಿ ಒದರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಬಸವೇಶ್ವರ ನಗರ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಸದ್ಯದಲ್ಲಿಯೇ ತನಿಖೆಗೆ ಆರೋಪಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸಲಿದ್ದಾರೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಸೆಲೆಬ್ರೆಟಿಯಾಗಿ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಫಾಲೋವರ್ಸ್ ನ ಇಟ್ಟುಕೊಂಡು ಈ ರೀತಿಯಾದ ರೀಲ್ಸ್ ಮಾಡೋದು ಎಷ್ಟು ಸರಿ. ಪ್ರಚೋದನೆ ಕೊಟ್ಟಂತೆ ಆಗುವುದಿಲ್ಲವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಪೊಲೀಸರು ಅವರಿಬ್ಬರ ಮೇಲೂ ಕೇಸ್ ದಾಖಲಿಸಿದ್ದಾರೆ. ಕೇಸ್ ರಿಜಿಸ್ಟರ್ ಆಗುತ್ತಿದ್ದಂತೆ ರಜತ್ ವಿಡಿಯೋ ಡಿಲೀಟ್ ಮಾಡಿದ್ದಾರೆ.


