Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಖ್ಯಮಂತ್ರಿಯನ್ನ ‘ಸಿದ್ರಾಮುಲ್ಲಾಖಾನ್’ ಎಂದ ಪಿಡಿಒ ವಿರುದ್ಧ ಎಫ್ಐಆರ್

---Advertisement---

ಕಲಬುರಗಿ: ಸಿದ್ದರಾಮಯ್ಯ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ. ಅವರ ಹುದ್ದೆಗೆ ದೊಡ್ಡ ಸ್ಥಾನಮಾನ ಇದೆ. ಆದರೆ ಅವರ ಬಗ್ಗೆ ಹಗುರವಾಗಿ‌ ಮಾತನಾಡುವುದು, ಅವಹೇಳನ ಹೇಳಿಕೆ ನೀಡುವುದಿ ಅಪರಾಧವಾಗಿರುತ್ತದೆ. ಅದರಲ್ಲೂ ಸರ್ಕಾರಿ ನೌಕರರೇ ಆ ರೀತಿ ಮಾತನಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವವಾಗುತ್ತದೆ. ಇದೀಗ ಅಂಥ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಈ ಘಟನೆ ನಡೆದಿರುವುದು ಕಲಬುರಗಿಯಲ್ಲಿ.

 

ಆಳಂದ ತಾಲೂಕಿನ ಸುಂಟನೂರು ಗ್ರಾಮ ಪಂಚಾಯ್ತಿ ಪಿಡಿಒ ಪ್ರವೀಣ್ ತಮ್ಮ ಸ್ಟೇಟಸ್ ನಲ್ಲಿ ಸಿದ್ರಾಮುಲ್ಲಾಖಾನ್ ಎಂಬುದನ್ನ ಹಾಕಿಕೊಂಡಿದ್ದರು. ಅದರಲ್ಲೂ ಸಿದ್ದರಾಮಯ್ಯ ಅವರು ಮುಸ್ಲಿಮರು ಧರಿಸುವ ಟೋಪಿ ಹಾಕಿರುವಂತ ಫೋಟೋ ಹಾಕಿದ್ದರು. ಆ ಫೋಟೋ ಎಡಿಟ್ ಮಾಡಿ, ತಮ್ಮ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಈ ಸ್ಟೇಟಸ್ ನೋಡಿದ ಸುಂಟನೂರು ಗ್ತಾಮದ ಮುಖಂಡ ಮಲ್ಲಿಕಾರ್ಜುನ ಡಣ್ಣೂರ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ಇದೀಗ ಪಿಡಿಒ ಮೇಲೆ ಎಫ್ಐಆರ್ ದಾಖಲಾಗಿದೆ. ನಿಂಬರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಡಿಒ ಪ್ರವೀಣ್ ಕುಮಾರ್ ವಿರುದ್ಧ ದಾಖಲಾದ ಎಫ್ಐಆರ್ ಹಾಗೂ ಗ್ರಾಮಸ್ಥರು ದೂರು ನೀಡಿರುವ ಕುರಿತು ಜಿಲ್ಲಾ ಪಂಚಾಯ್ತಿ ಸಿಇಒ ಭಂವರ್ ಸಿಂಗ್ ಮೀನಾ ಅವರ ಗಮನಕ್ಕೆ ತರಲಾಗಿದೆ. ಮುಂದಿನ ಕ್ರಮಕ್ಕೆ ವರದಿ ಸಲ್ಲಿಸಿದ್ದೇನೆ ಎಂದು ಆಳಂದ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿ ಅವರು ಮಾಹಿತಿ ನೀಡಿದ್ದಾರೆ.

ಅದೇನೆ ಇರಲಿ ರಾಜ್ಯದ ಮುಖ್ಯಮಂತ್ರಿಯನ್ನ ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಎಲ್ಲರ ಪ್ರಶ್ನೆ. ಆ ಹುದ್ದೆಗೆ ಗೌರವ ಕೊಡಬೇಕಾದ ಕರ್ತವ್ಯವನ್ನ ಸರ್ಕಾರಿ ಅಧಿಕಾರಿಯೇ ಮರೆತದ್ದು ದುರಂತ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...