ಪಾರದರ್ಶಕ ರೀತಿಯಲ್ಲಿ ನಾಗರೀಕ ಕಾನ್ಸ್ಟೇಬಲ್ಸ್ ಹಾಗೂ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿ:ಆರಗ ಜ್ಞಾನೇಂದ್ರ

suddionenews
1 Min Read

ಬೆಂಗಳೂರು; ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ನಡೆಯುತ್ತಿರುವ ನಾಗರೀಕ ಕಾನ್ಸ್ಟೇಬಲ್ಸ್ ಹಾಗೂ ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿಗಳನ್ನು ಅತ್ಯಂತ ಪಾರದರ್ಶಕ ಹಾಗೂ ನಿಯಮಾನುಗಳನುಸಾರ ನಡೆಸುತ್ತಿದ್ದು, ಅಭ್ಯರ್ಥಿಗಳು ಹಾಗೂ ಅವರುಗಳ ಪೋಷಕರು

ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ವಿನಂತಿಸಿದ್ದಾರೆ.

ನೇಮಕಾತಿಯಲ್ಲಿ ಕೆಲಸ ಕೊಡಿಸುತ್ತೇನೆಂದು ಕೆಲವರು ನಂಬಿಕೆ ಹುಟ್ಟಿಸಿ, ಅಭ್ಯರ್ಥಿಗಳನ್ನು ವಂಚಿಸುತ್ತಿರುವ ಕೆಲವು ಘಟನೆಗಳು
ವರದಿಯಾಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಪೋಷಕರು ಅಂತಹ ಯಾವುದೇ ಆಮಿಷಗಳಿಗೆ ಬೆಲೆ ಕೊಡಬಾರದು ಎಂದರು.

ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ 947 ಸಬ್ ಇನ್ಸ್ಪೆಕ್ಟರ್ಸ್ ಹಾಗೂ 4000 ನಾಗರೀಕ ಕಾನ್ಸ್ಟೇಬಲ್ಸ್ ಹುದ್ದೆಗಳ ನೇಮಕಾತಿ
ನಡೆಯುತ್ತಿದ್ದು, ನೇಮಕಾತಿ ಪ್ರಕ್ರಿಯೆಯಗಳ ಭಾಗವಾಗಿ ನಡೆಯುತ್ತಿರುವ ದೈಹಿಕ ಸಾಮರ್ಥ್ಯತೆ ಹಾಗೂ ಲಿಖಿತ ಪರೀಕ್ಷೆಗಳು, ಅತ್ಯಂತ ಪಾರದರ್ಶಕವಾಗಿದ್ದು
ಇದರಲ್ಲಿ ದಾಖಲಾಗುವ ಫಲಿತಾಂಶಗಳೇ ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಗಳಾಗಿರುತ್ತವೆ.

ಹುದ್ದೆ ಕೊಡಿಸುವುದಾಗಿ ಯಾರದರೂ ಆಮಿಷ ಒಡ್ಡಿದರೆ, ಅಭ್ಯರ್ಥಿಗಳು ಅಥವಾ ಅವರ ಪೋಷಕರು, ವಿಷಯವನ್ನು ಪೊಲೀಸರಿಗೆ ತಿಳಿಸಬೇಕು, ಮತ್ತು
ವಂಚನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬೇಕು, ಎಂದೂ ಸಚಿವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *