ಬೆಂಗಳೂರು: ಬಿಗ್ ಬಾಸ್ ದಿನೇ ದಿನೇ ಇಂಟ್ರೆಸ್ಟಿಂಗ್ ಅಗಿ ಹೋಗ್ತಾ ಇದೆ. ಅದರಲ್ಲೂ ಒಳಗಿರುವ ಸ್ಪರ್ಧಿಗಳು ಪ್ರೋಮೋ ಕಂಟೆಂಟ್ ಕೊಡೋದು ಸುಲಭ ಅಲ್ಲ. ಪ್ರೋಮೋಗಳು ಸಖತ್ತಾಗಿದ್ದಾಗ ಎಪಿಸೋಡ್ ಸಖತ್ತಾಗಿರುತ್ತೆ ಅಂತ ಜನ ನೋಡ್ತಾರೆ. ಸದ್ಯ ಮನೆಯಲ್ಲಿ ಪ್ರೋಮೋ ಕೊಡ್ತಾ ಇರೋದು ಅಂದ್ರೆನೆ ಅಶ್ವಿನಿ ಅವರು. ಆದರೆ ನಿರ್ಮಾಣವಾಗುತ್ತಿರುವ ಸನ್ನಿವೇಶಗಳು ಅಶ್ವಿನಿ ಅವರಿಗೆ ಕಣ್ಣೀರು ತರಿಸುತ್ತಿರುವುದು ಬೇಸರದ ವಿಚಾರ.
ಇಂದು ಬೆಳ್ ಬೆಳಗ್ಗೆನೆ ಬಿಗ್ ಬಸ್ ಪ್ರೋಮೋ ಒಂದನ್ನ ಬಿಟ್ಟಿದ್ದು, ಎಪಿಸೋಡ್ ನೋಡುವ ಕುತೂಹಲವನ್ನ ಕೊಟ್ಟಿದೆ. ರಘು ಅವರು ಎರಡನೇ ಬಾರಿಗೆ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದವರಿಗೆ ಇಡೀ ಮನೆಯನ್ನು ಸಂಭಾಳಿಸುವ ಜವಬ್ದಾರಿ ಇರುತ್ತದೆ. ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಸಬೇಕಾಗುತ್ತದೆ. ಅದೇ ರೀತಿ ಅಶ್ವಿನಿ ಅವರಿಗೆ ಕೆಲಸ ವಹಿಸಿದ್ದರು ರಘು. ಆದರೆ ಅಶ್ವಿನಿ ಮಾಡಿಲ್ಲ.
ಬೀನ್ ಬ್ಯಾಗ್ ಮೇಲೆ ಮಲಗಿದ್ದ ಅಶ್ವಿನಿ ಅವರಿಗೆ ರಘು ಕೆಲಸ ಮಾಡಲು ಹೇಳಿದರು. ಆದರೆ ಅಶ್ವಿನಿ ಅವರು ನಂಗೆ ಬ್ಯಾಕ್ ಪೇನ್ ಇದೆ, ಹತ್ತು ನಿಮಿಷ ಸುಮ್ಮನೆ ಬಿಡಿ, ಆಮೇಲೆ ಮಾಡ್ತೀನಿ ಅಂದ್ರು. ರಘು ಹೇಳಿದ ತಾಳ್ಮೆ ಕಳೆದು ಏನಾದ್ರು ಮಾಡ್ಕೊ ಹೋಗು ಅಂದಿದ್ದೆ ತಡ, ಏಕವಚನದಲ್ಲಿ ಮಾತನಾಡಬೇಡ. ನೀನ್ಯಾರು ಅದು ಇದು ಅಂತ ರಘು ಮತ್ತು ಅಶ್ವಿನಿ ಇಬ್ಬರು ಜಗಳಕ್ಕೆ ನಿಂತಿದ್ದಾರೆ. ಅಶ್ವಿನಿ ಕಣ್ಣೀರು ಹಾಕುತ್ತಾ, ಬಿಗ್ ಬಾಸ್ ನಾನು ಮನೆಗೆ ಹೋಗ್ತೀನಿ ಡೋರ್ ಓಪನ್ ಮಾಡಿ ಅಂತಿದ್ದಾರೆ. ಬಿಗ್ ಬಾಸ್ ಡೋರ್ ಓಪನ್ ಮಾಡ್ತಾರಾ..? ಮೆನೆಯವರು ಅಶ್ವಿನಿ ಅವರನ್ನು ಸಮಾಧಾನ ಮಾಡ್ತಾರಾ ಎಪಿಸೋಡ್ ನಲ್ಲಿ ನೋಡ್ಬೇಕಿದೆ.






