ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಜುಲೈ. 29 : ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ಗಡುವು ವಿಸ್ತರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದವರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಮಳೆ ಬಾರದ ಕಾರಣ ರೈತರು ಬೆಳೆ ವಿಮೆ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಶೇ.15 ರಿಂದ 20 ರಷ್ಟು ಮಾತ್ರ ಬಿತ್ತನೆಯಾಗಿದ್ದು, ಮೊಳಕೆಯೊಡೆದು ಅರ್ಧ ಅಡಿಯಿಂದ ಒಂದು ಅಡಿ ಎತ್ತರವಾಗಿರುವ ಬೆಳೆಗಳಿಗೆ ಮಾತ್ರ ರೈತರು ವಿಮೆ ಕಟ್ಟಿದ್ದಾರೆ. ಕೆಲವು ಕಡೆ ಬೀಜ ಮೊಳಕೆಯೊಡೆದು ಮೇಲೆ ಬಾರದೆ ಭೂಮಿಯಲ್ಲಿಯೇ ಕಮರಿ ಹೋಗುತ್ತಿದೆ. ಹೀಗಿರುವಾಗ ರೈತರು ಬೆಳೆ ವಿಮೆ ಪಾವತಿಸಲು ಹೇಗೆ ಸಾಧ್ಯ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಮುಖಂಡರುಗಳ ಸಭೆ ನಡೆಸಿ ಬೆಳೆ ವಿಮೆ ಕಟ್ಟಿ ಬಿತ್ತನೆ ಮಾಡಿದ್ದರೂ ಅಥವಾ ಬಿತ್ತನೆ ಮಾಡದಿದ್ದರೂ ವಾಡಿಕೆಗಿಂತ ಜಾಸ್ತಿ ಮಳೆ ಬಾರದೆ ಇದ್ದರೆ ಬೆಳೆ ವಿಮೆ ಕಂಪನಿಯವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶೀಲಿಸಿ ಶೇ.25 ರಷ್ಟು ಹಣವನ್ನು ಖಾತೆಗೆ ಜಮಾ ಮಾಡುತ್ತಾರೆಂದು ತಿಳಿಸಿರುವ ಕಾರಣ ರೈತರು ಬೆಳೆ ವಿಮೆ ಪಾವತಿಸಲು ಮುಂದಾಗಿರುವುದರಿಂದ ಆ.20 ರವರೆಗೆ ಬೆಳೆ ವಿಮೆ ಪಾವತಿಗೆ ಗಡುವು ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ್ ಲಿಂಗಾವರಹಟ್ಟಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೋಲಾಕ್ಷಮ್ಮ, ಜಿಲ್ಲಾ ಕಾರ್ಯಾಧ್ಯಕ್ಷ ಓಂಕಾರಪ್ಪ ಎಸ್. ಕಾಂತರಾಜ್ ಎಸ್, ಪಿ.ನಾಗರಾಜ್, ಮಂಜುಳ ಕೊಳಹಾಳ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.









