Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಳೆ ಸೈಬರ್ ಅಪರಾಧದ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಮುಖಾ ಮುಖಿ : ಧನರಾಜ್

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಚಿತ್ರದುರ್ಗ ಜ. 31 : ಇದೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವಾಸವಿ ಯುವಜನ ಸಂಘದವತಿಯಿಂದ ಸೈಬರ್ ಅಪರಾಧದ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಮುಖಾ ಮುಖಿ ಕಾರ್ಯಕ್ರಮವನ್ನು ಫೆ. 1ರ ಶನಿವಾರ ಸಂಜೆ 5 ಗಂಟೆಗೆ ನಗರದ ವಾಸವಿ ಮಹಲ್‌ನಲ್ಲಿ ಆಯೋಜಿಸಲಾಗಿದೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಧನರಾಜ್ ತಿಳಿಸಿದರು.

 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅರ‍್ಯವೈಶ್ಯ ಸಂಘ ಹಾಗೂ ವಾಸವಿ ಯುವಜನ ಸಂಘ(ರಿ), ಚಿತ್ರದುರ್ಗ ಇವರ ಆಶ್ರಯದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್, ಇವರ ಸಹಕಾರದೊಂದಿಗೆ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಕಾಡುತ್ತಿರುವ ಸೈಬರ್ ವಂಚನೆಗಳನ್ನು ತಡೆಗಟ್ಟಲು ನಮ್ಮ ಒಂದು ಸಣ್ಣ ಪ್ರಯತ್ನ ಇದಾಗಿದೆ. ಸೈಬರ್ ವಂಚನೆಯನ್ನು ತಡೆಯಲು ಸಂಘದ ವತಿಯಿಂದ “ಮುಖಾ ಮುಖಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸೈಬರ್ ಕ್ರೈಂ ವಿಭಾಗದ ಪೊಲೀಸ್ ನಿರೀಕ್ಷಕರಾದ ಎನ್. ವೆಂಕಟೇಶ್‌ರವರು ಸಾರ್ವಜನಿಕ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಿದ್ದಾರೆ  ಸಂಜೆ 5 ಗಂಟೆಯಿಂದ 8.30ರವರೆಗೆ ನಡೆಯಲಿದೆ.

 

ವಾಸವಿ ಯುವಜನ ಸಂಘದ ಮಾಜಿ ಅಧ್ಯಕ್ಷರಾದ ಕಾರ್ತಿಕ ಮಾತನಾಡಿ, ಚಿತ್ರದುರ್ಗ ಇದೇ ಮೊಟ್ಟಮೊದಲ ಬಾರಿಗೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೇರವಾಗಿ ಪೊಲೀಸ್ ಇಲಾಖೆಯ ವರೊಂದಿಗೆ ಪ್ರಶ್ನೆ ಕೇಳುವ ಸದಾವಕಾಶ. ಈ ಕಾರ್ಯಕ್ರಮದಲ್ಲಿ ಮುಂದಾಗುವ ಸೈಬರ್ ಅಪರಾಧಗಳನ್ನು ಹೇಗೆ ತಡೆಗಟ್ಟಬಹುದು ಎನ್ನುವ ಪ್ರಶ್ನೆಗೆ ನೇರವಾಗಿ ಪೊಲೀಸ್ ಇಲಾಖೆಯವರಿಂದ ಸಲಹೆಗಳನ್ನು ಪಡೆಯಬಹುದು. ಹೂಡಿಕೆ ವಂಚನೆ, ವಿದ್ಯುಸ್ಥಾನ ದಸ್ತಗಿರಿ, ವಂಚಕ ಲೋನ್ ಆಪ್‌ಗಳು, ಉದ್ಯೋಗದ ಹೆಸರಿನಲ್ಲಿ ವಂಚನೆ, ಪ್ರತೀಕಾರದ ಅಶ್ಲೀಲತೆ, ಹೇಸರಗತ್ತೆ ಖಾತೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವಾಗ ಜಾಗ್ರತೆ ವಹಿಸುವುದು, ಸುರಕ್ಷಿತ ಅಂತರ್ಜಾಲ ಬಳಕೆ ಹಾಗೂ ಇತರೆ ಸೈಬರ್ ಅಪರಾಧಕ್ಕೆ ಸಂಬಂಧ ಪಟ್ಟ ಅಪರಾಧಗಳ ಬಗ್ಗೆ ಹಾಗೂ ಡಿಜಿಟಲ್ ಬಂಧನ, ಸಾಲದ ಅಪ್ಲಿಕೇಶನ್ ವಂಚನೆ, ಆನ್‌ಲೈನ್ ಅಶ್ಲೀಲತೆ, ಸಾಮಾಜಿಕ ಮಾಧ್ಯಮದಲ್ಲಿ ಹೇಗೆ ವರ್ತಿಸಬೇಕು, ಸುರಕ್ಷಿತ ಬ್ರೌಸಿಂಗ್ ಮತ್ತು ಇತರ ಸೈಬರ್ ಅಪರಾಧ ಸಂಬಂಧಿತ ವಿಷಯಗಳು ಬಗ್ಗೆಯೂ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.

 

ಪ್ರಶ್ನೆಗಳನ್ನು ಕೇಳಬಯಸುವವರು, ಒಂದು ಗಂಟೆ ಮುಂಚಿತವಾಗಿಯೇ ಪ್ರಶ್ನೆಗಳನ್ನು ನೀಡಿರಬೇಕು. ಪ್ರಶ್ನೆಯೊಂದಿಗೆ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿರಬೇಕು. ಹೆಚ್ಚಿನ ವಿವರಗಳಿಗೆ ಪಿ.ವಿ. ಧನರಾಜ್ 16, : 8217265395 ವಿನಯ್ ರಾಜ್ ಟೀಕಾ : 9986941189ರನ್ನು ಸಂಪರ್ಕಿಸಬಹುದಾಗಿದೆ.

 

ಸಾರ್ವಜನಿಕರ ಹಿತಾಸಕ್ತಿಗಾಗಿ ಆಯೋಜಿಸಿರುವ ಹಾಗೂ ಸೈಬರ್ ವಂಚೆಯನ್ನು ತಡೆಯಲು ನಾವು ಮಾಡುತ್ತಿರುವ ಈ ಪ್ರಯತ್ನಕ್ಕೆ ಸಾರ್ವಜನಿಕರು ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಗೋಷ್ಟಿಯಲ್ಲಿ ಕಾರ್ಯದರ್ಶಿ ವಿಜಯ್ ರಾಜ್, ಉಪಾಧ್ಯಕ್ಷರಾದ ಕಾರ್ತಿಕ್ ಸಿ.ಎ. ಶ್ರೀಕಾಂತ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...