ರಾಜಕಾರಣಿಗಳ ಹೆಸರಲ್ಲಿ ಬರುವವರಿಂದ ಎಚ್ಚರದಿಂದಿರಿ : ಗೃಹ ಸಚಿವರ ಹೆಸರಲ್ಲಿ ಮೋಸ ಮಾಡಿದ ಮತ್ತೊಬ್ಬ ಅರೆಸ್ಟ್..!

suddionenews
1 Min Read

ರಾಜಕಾರಣಿಗಳ ಹೆಸರಲ್ಲಿ ಬರುವವರಿಂದ ಎಚ್ಚರದಿಂದಿರಿ : ಗೃಹ ಸಚಿವರ ಹೆಸರಲ್ಲಿ ಮೋಸ ಮಾಡಿದ ಮತ್ತೊಬ್ಬ ಅರೆಸ್ಟ್..!

ಬೆಂಗಳೂರು: ದೊಡ್ಡ ದೊಡ್ಡ ರಾಜಕಾರಣಿಗಳ ಜೊತೆ ಆತ್ಮೀಯವಾಗಿ ಪೋಟೋ ಕ್ಲಿಕ್ಕಿಸಿಕೊಂಡು ನಮಗೆ ಅವರು ಗೊತ್ತು ಇವರು ಗೊತ್ತು. ಆ ಕೆಲಸ ಮಾಡಿಸಿಕೊಡ್ತೇನೆ, ನಿಮಗೆ ಪ್ರಾಜೆಕ್ಟ್ ಸಿಗುವ ಹಾಗೇ ಮಾಡ್ತೇನೆ ಅಂತ ಹೇಳಿಕೊಂಡು ಅದೆಷ್ಟೊ ಜನ ಮೋಸ ಮಾಡುವವರಿದ್ದಾರೆ. ಆದರೆ ಅಂಥವರನ್ನು ನಂಬುವ ಮುನ್ನ ಎಲ್ಲರೂ ಹುಷಾರಾಗಿರಬೇಕು. ಯಾಕಂದ್ರೆ ಅಂತ ಉದಾಹರಣೆಗಳು ಸಾಕಷ್ಟು ನಡೆದಿವೆ.

ಇದೀಗ ಆಸಾಮಿಯೊಬ್ಬ ಗೃಹಸಚಿವರ ಹೆಸರಲ್ಲೇ ವಂಚನೆ ಮಾಡೋದಕ್ಕೆ ಪ್ರಯತ್ನಿಸಿದ್ದಾನೆ. ಭವಾನಿ ರಾವ್ ಎಂಬಾತ ಹೀಗೆ ಮೋಸ‌ ಮಾಡಲು ಯತ್ನಿಸಿದಾತ. ಈತ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಜೊತೆ ಓಡಾಡಿಕೊಂಡು ಇದ್ದ ಎನ್ನಲಾಗಿದೆ.

ಸಾಕಷ್ಟು ಮಂದಿಗೆ ಡಾನ್ಸ್, ಬಾರ್ ಗಳಿಗೆ ಅನುಮತಿ ಕೊಡಿಸುತ್ತೇನೆಂದು ಹೇಳಿ ವಂಚನೆ ಮಾಡಿದ್ದಾನೆ. ಶಿವಮೊಗ್ಗ ಮೂಲದ ಉದ್ಯಮಿ ಸುರೇಶ್ ಎಂಬುವವರಿಂದಲೂ ಕೋಟ್ಯಾಂತರ ರೂಪಾಯಿ ಹಣ ತೆಗೆದುಕೊಂಡಿದ್ದಾನೆ. ಬಾರ್ ಡಾನ್ಸ್ ಗೆ ಅನುಮತಿ ಕೊಡಿಸುತ್ತೇನೆ. ಆರಗ ಜ್ಞಾನೇಂದ್ರ ಅವರ ಬಳಿ ಮಾತನಾಡುತ್ತೇನೆ ಎಂದಿದ್ದಾನೆ. ಗೃಹ ಸಚಿವರಿಗೆ ಹಣ ಕೊಟ್ರೆ ಅನುಮತಿ ಕೊಡ್ತಾರೆ ಎಂದು ಹೇಳಿ ನಂಬಿಸಿ, ಪರಾರಿಯಾಗಿದ್ದ ಎನ್ನಲಾಗಿದೆ. ಈತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಸದ್ಯ ಶಿವಮೊಗ್ಗದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *