Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದುಬಾರಿ ವಾಚ್ ವಿಚಾರ : ಈಗ್ಲೆ ರಾಜೀನಾಮೆ ಕೊಡ್ತೀನಿ ಅಂದ್ರು ಡಿಕೆಶಿ

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಇತ್ತೀಚೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಒಂದೇ ಬ್ರಾಂಡ್ ವಾಚ್ ಅನ್ನು ಧರಿಸಿದ್ದರು. ಆ ವಾಚ್ 42 ಲಕ್ಷದ್ದು ಎಂಬ ಟಾಕ್ ಓಡಾಡಿತ್ತು. ಸಾಕಷ್ಟು ಚರ್ಚೆ ಕೂಡ ಆಯ್ತು. ಬಳಿಕ ಅದಕ್ಕೆ ಡಿಕೆ ಶಿವಕುಮಾರ್ ಅವರು ಉತ್ತರವನ್ನು ನೀಡಿದ್ದರು. ಹಾಗೇ ಅದರ ಬೆಲೆ 42 ಲಕ್ಷ ಅಲ್ಲ 25 ಲಕ್ಷ ಎಂಬುದನ್ನು ಹೇಳಿದ್ದರು. ಇದೀಗ ಛಲವಾದಿ ನಾರಾಯಣಸ್ವಾಮಿ ಆ ವಾಚ್ ಬಗ್ಗೆ ಸೆಷನ್ ನಲ್ಲಿಯೂ ಚರ್ಚೆ ಮಾಡ್ತೀವಿ ಎಂದಿದ್ದಾರೆ. ಅದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನಾರಾಯಣಸ್ವಾಮಿಗೆ ಇನ್ನು ಅನುಭವ ಇಲ್ಲ. ನಾನು ಲೋಕಾಯುಕ್ತಗೆ ಎಲ್ಲೆಲ್ಲಿ ಫೈಲ್ ಮಾಡಬೇಕು ಅಲ್ಲೆಲ್ಲಾ ಫೈಲ್ ಮಾಡಿದ್ದೀನಿ. ನನ್ನ ವಾಚ್ ಇಲ್ಲಿಯೇ ಇದೆ. ನಂಬರ್ ಕೂಡ ಇದೆ. ನಾನೇನು ಸುಳ್ಳು ಮಾಡಿದ್ರೆ ಇವತ್ತೆ ರಾಜೀನಾಮೆ ಕೊಡ್ತೀನಿ. ಅವರು ರಾಜೀನಾಮೆ ಕೊಡ್ತಾರಾ..? ಸಾಮಾನ್ಯ ಜ್ಞಾನ ಇರಬೇಕು ಮೊದಲು. ಮಾತನಾಡ್ತೀವಿ ಅಂತ ಸುಮ್ಮನೆ ಪಬ್ಲಿಸಿಟಿಗೆ ಮಾತನಾಡುವುದಲ್ಲ. ನಾನು ಅವರಿಗಿಂತ ಹೆಚ್ಚು ಜವಬ್ದಾರಿಯಿಂದ ನಡೆದುಕೊಳ್ಳುವವನು. ಜವಬ್ದಾರಿಯಿಂದ ನಡೆದುಕೊಳ್ಳುವುದನ್ನ ಮೊದಲು ಕಲಿಯಬೇಕು.

ಹೋಗಿ ಲೋಕಾಯುಕ್ತದಲ್ಲಿ ಚೆಕ್ ಮಾಡಿಕೊಳ್ಳಲಿ. ನಾನೇನು ತೋರಿಸಿದ್ದೀನಿ ಅದು ಬೇರೆ ವಿಚಾರ. ಆದರೆ ಲೋಕಾಯುಕ್ತ ಆಫೀಸ್ ದಾಖಲೆ ಎಲ್ಲವನ್ನು ಹೇಳುತ್ತೆ‌. ಇನ್ ಕಂ ಟ್ಯಾಕ್ಸ್ ಅಫಿಡವಿಟ್ ಕೂಡ ನಿಮಗೆ ಸತ್ಯ ತಿಳಿಸುತ್ತೆ‌. ಅವರಿಗೆ ಏನು ಗೊತ್ತು. ಈ ವರ್ಷವು ಸಹಿ ಹಾಕಿದ್ದೀನಿ. ಈ ವಿಚಾರ ಸೆಷನ್ ನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಚರ್ಚೆ ಮಾಡಲಿ. ಸಾಮಾನ್ಯ ಜ್ಞಾನ ಅವರಿಗೆ ಇರಬೇಕು. ನಾನೇನು ಅವರಿಗೆ ಇದೆಲ್ಲ ತೋರಿಸಬೇಕು ಅಂತಿಲ್ಲ. ಏನೋ ಕದ್ದಿದ್ದೀವಿ ಎಂಬಂತೆ ಮಾತನಾಡ್ತಾರಲ್ಲ ಅದಕ್ಕೆ ಉತ್ತರ ಕೊಡ್ತಾ ಇರುವುದು ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now