ಬೆಳಗಾವಿ: ಕುಡಚಿಯ ಮಾಜಿ ಶಾಸಕ ಪಿ ರಾಜೀವ್ ಅವರ ಬೆಂಬಲಿಗರಿಂದ ಜಮೀನು ಕಬಳಿಕೆ ಆರೋಪ ಕೇಳಿ ಬಂದಿದೆ. ಕುಟುಂಬ ಒಂದಕ್ಕೆ ಗನ್ ತೋರಿಸಿ, ಎಂಟು ಎಕರೆ ಜಮೀನನ್ನು ಬರೆಸಿಕೊಂಡಿರುವ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ನೊಂದ ದಂಪತಿ ಕೋರ್ಟ್ ಮುಂದೆ, ದಯಾಮರಣ ನೀಡಿ, ಇಲ್ಲವೆ, ಜಮೀನು ಕೊಡಿಸಿ ಎಂದು ಕುಳಿತಿದ್ದಾರೆ.

ಮಾಜಿ ಶಾಸಕರ ಬೆಂಬಲಿಗರು ರಾಯಭಾಗ ಬಳಿಯ ಜಲಾಲಾಪುರ ಬಳಿಯ ಸರ್ವೆ ನಂಬರ್ 744ರಲ್ಲಿರುವ ಎಂಟು ಎಕರೆ ಜಮೀನನ್ನು ಬರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನ್ಯಾಯಾಲಯದಲ್ಲಿ ಸುಳ್ಳು ಹೇಳಿಸಿ, ಗನ್ ತೋರಿಸಿ, ನಮ್ಮಿಂದ ಆಸ್ತಿ ಕಬಳಿಕೆ ಮಾಡಿಕೊಂಡಿದ್ದಾರೆ. ಆಸ್ತಿ ವಾಪಾಸ್ ಕೊಡಿಸಿ, ಇಲ್ಲ ದಯಾ ಮರಣ ನೀಡಿ ಎಂದು ಕೋರ್ಟ್ ಮುಂದೆ ಬೇಡಿಕೊಂಡಿದ್ದಾರೆ.
ಎರಡು ಮಕ್ಕಳನ್ನು ಕರೆದುಕೊಂಡು ಬಂದಿರುವ ದಂಪತಿ, ಪ್ರಭಾವಿಗಳಿಗೆ ಹೆದರಿ ನಾವೂ ಬದುಕುತ್ತಿದ್ದೇವೆ. ನಮ್ಮ ಜಮೀನು ಕೊಡಿಸಿ, ಇಲ್ಲ ದಯಾ ಮರಣ ಕೊಡಿ ಎಂದು ಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ಬ್ಯಾನರ್ ಹಿಡಿದು ಪ್ರತಿಭಟಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











