Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಾತಿ ಧರ್ಮ ಮೀರಿ ಎಲ್ಲರೂ ಸಾಹಿತ್ಯದ ಕೆಲಸ ಮಾಡಬೇಕು : ಬಿ.ಕೆ.ರಹಮತ್‍ವುಲ್ಲಾ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 29 : ಸಾಹಿತ್ಯಕ್ಕೂ ಜಾತಿ ಧರ್ಮಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಜಾತಿ ಧರ್ಮ ಮೀರಿ ಎಲ್ಲರೂ ಸಾಹಿತ್ಯದ ಕೆಲಸ ಮಾಡಬೇಕೆಂದು ಹಿರಿಯ ನ್ಯಾಯವಾದಿ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಹದಿನೆಂಟನೆ ವಾರ್ಷಿಕೋತ್ಸವದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯ ಹಾಗೂ ಸಾಂಸ್ಕøತಿಕ ಹಬ್ಬ ಉದ್ಗಾಟಿಸಿ ಮಾತನಾಡಿದರು.

ಹಳೆಗನ್ನಡದಲ್ಲಿ ಪಂಪ ರನ್ನ ಇವರುಗಳು ಜೈನ ಧರ್ಮದವರಾಗಿದ್ದರೂ ಬಾದಾಮಿ ಶಾಸನವನ್ನು ಉಲ್ಲೇಖಿಸಿದ್ದಾರೆ. ನಡುಗನ್ನಡದಲ್ಲಿ ಕುಮಾರವ್ಯಾಸ, ರಾಘವಾಂಕ, ಹರಿಹರ ಇವರುಗಳು ದೇವರು ಧರ್ಮ ಪುರಾಣವನ್ನು ರಚಿಸಿದ್ದಾರೆ. ಹೊಸಗನ್ನಡದಲ್ಲಿ ನಾಲ್ಕು ಭಾಗಗಳಾಗಿ ನವೋದಯ ಸಾಹಿತ್ಯದ ಮೂಲಕ ರಾಷ್ಟ್ರಭಕ್ತಿ, ದೇಶಪ್ರೇಮ, ದೇಶದ ಪ್ರಗತಿ ಕುರಿತು ಬಿಂಬಿಸಿದ್ದಾರೆ. ಪ್ರಗತಿಶೀಲ ಸಾಹಿತ್ಯದ ಚಿಂತನೆಯಿದೆ. ನವ್ಯ ಸಾಹಿತ್ಯದಲ್ಲಿ ಯಾವುದು ಬೇಕು, ಯಾವುದು ಬೇಡ ಎನ್ನುವ ಪರಿಕಲ್ಪನೆಯಿದೆ. ಈಗಿನ ದಲಿತ ಮತ್ತು ಬಂಡಾಯ ಸಾಹಿತ್ಯದ ಕಾಲದಲ್ಲಿ ಬಂಜಗೆರೆ ಜಯಪ್ರಕಾಶ್ ಹಾಗೂ ದೇವನೂರು ಮಹದೇವ ಇವರುಗಳ ಕೊಡುಗೆಯೂ ಅಪಾರ. ಗೋವಿಂದ ಪೈ ಮೊದಲನೆ ರಾಷ್ಟ್ರಕವಿ ಎಂದು ಗುರುತಿಸಿಕೊಂಡಿದ್ದು, ಹೆಗ್ಗಳಿಕೆ. ದ.ರಾ.ಬೇಂದ್ರೆರವರ ನಾಲ್ಕು ತಂತಿ ಬಗ್ಗೆ ವಿಶ್ಲೇಷಿಸಿದರು.

ಎಸ್.ಎಚ್.ಶಫಿವುಲ್ಲಾರವರನ್ನು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಾದರೆ ಅನೇಕ ಅಪಸ್ವರಗಳು ಕೇಳಿ ಬಂದವು. ಜಾತಿ ಧರ್ಮ ಎನ್ನುವುದಕ್ಕಿಂತ ಮುಖ್ಯವಾಗಿ ಸಾಹಿತ್ಯದ ಸೇವೆ ಮಾಡುವ ಕೈಗಳು ಹೆಚ್ಚಾಗಬೇಕು. ದೇಶಭಕ್ತಿ, ಪರಿಸರ ಪ್ರಜ್ಞೆ ಎಲ್ಲರಲ್ಲಿಯೂ ಮೂಡಬೇಕು. ಪಂಪ, ರನ್ನ, ಕುವೆಂಪು ಇವರುಗಳು ಕನ್ನಡಕ್ಕೆ ಸಲ್ಲಿಸಿರುವ ಸೇವೆ ಅಮೋಘವಾದುದು. ಡಾ.ನಿಸಾರ್ ಅಹಮದ್ ಹುಟ್ಟಿನಿಂದ ಮುಸಲ್ಮಾನರಾದರೂ ಅವರೊಬ್ಬ ಹೆಸರಾಂತ ಕವಿಯಾಗಿ ಕನ್ನಡದ ಸೇವೆ ಮಾಡಿದ್ದರಿಂದ ಇಂದಿಗೂ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆಂದು ಸ್ಮರಿಸಿದರು.

ಸಾಹಿತ್ಯಕ್ಕೆ ಎಲ್ಲರನ್ನು ಒಂದೂಡಿಸಿ ಸೌಹಾರ್ಧತೆಯಿಂದ ಬದುಕಿಸುವಂತ ಶಕ್ತಿಯಿದೆ. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಆರಂಭದಲ್ಲಿ ಚಿಕ್ಕ ಗಿಡವಾಗಿ ಹುಟ್ಟಿಕೊಂಡಿದ್ದು, ಇಂದು ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಬಗ್ಗೆ ಎಲ್ಲರಲ್ಲೂ ಅಭಿಮಾನವಿರಬೇಕು.

ಅಶೋಕ್‍ಬಾದರದಿನ್ನಿ ಅತ್ಯುತ್ತಮ ರಂಗ ನಿರ್ದೇಶಕರಾಗಿ ರಂಗಭೂಮಿಗೆ ತನ್ನದೆ ಆದೆ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯ, ಶರಣ ಸಾಹಿತ್ಯ ಹನ್ನೆರಡನೆ ಶತಮಾನದ ಬಸವಾದಿ
ಶರಣರ ಪರಿಕಲ್ಪನೆ. ಯಾವುದೇ ಒಂದು ಸಂಸ್ಥೆ ವೇದಿಕೆಯನ್ನು ಕಟ್ಟುವಾಗ ಅನೇಕ ಹಿಂಸೆ ನೋವು ಸಂಕಟ ಅವಮಾನ ಅನುಭವಿಸಬೇಕಾಗುತ್ತದೆ. ನಂತರ ಸನ್ಮಾನ ಹುಡುಕಿಕೊಂಡು ಬರುತ್ತದೆ. ಮುರುಘಾಮಠದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನಂತರ ವಿಕಲಚೇತನರ ಶಾಲೆ ತೆರೆದು ಅವರ ಸೇವೆಯ ಮೂಲಕ ಬಾಪೂಜಿ ವಿದ್ಯಾಸಂಸ್ಥೆಯನ್ನು ಕಟ್ಟಿದ್ದೇನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ನನ್ನ ಸೇವೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದು ನುಡಿದರು.

ಗೌರವ ಡಾಕ್ಟರೇಟ್ ಪ್ರಶಸ್ತಿಯಿಂದ ನನ್ನ ಮೇಲೆ ಜವಾಬ್ದಾರಿ ಜಾಸ್ತಿಯಾಗಿದೆ. ಸಾಹಿತ್ಯದ ಸೇವೆ ಮಾಡುವ ಮನಸ್ಸುಗಳು ಹೆಚ್ಚಾಗಬೇಕು. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯನ್ನು ದಯಾ ಪುತ್ತೂರ್ಕರ್ ಕಳೆದ ಹದಿನೆಂಟು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವುದು ಸುಲಭದ ಕೆಲಸವಲ್ಲ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದಾಗ ಚಿತ್ರದುರ್ಗದಲ್ಲಿ ಎಪ್ಪತ್ತೈದನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ್ದೇನೆ. ಈಗ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಮ್ಮೇಳನ ಚಿತ್ರದುರ್ಗದಲ್ಲಿ ನಡೆಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಹದಿನೆಂಟು ವರ್ಷಗಳಿಂದಲೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯನ್ನು ಮುನ್ನಡೆಸಿಕೊಂಡು ಬರುತ್ತಿರುವುದಕ್ಕೆ ಅನೇಕರ ಸಹಕಾರವಿದೆ. ಎಸ್.ಎಚ್.ಶಫಿವುಲ್ಲಾರವನ್ನು ವೇದಿಕೆಗೆ ಅಧ್ಯಕ್ಷರನ್ನಾಗಿ ಮಾಡಬೇಕಾದರೆ ಅನೇಕರು ಅಸಮಾಧಾನ ಹೊರ ಹಾಕಿದರು. ಆದರೆ ಅವರು ವೇದಿಕೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ಒಳ್ಳೊಳ್ಳೆ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿರುವುದನ್ನು ಗಮನಿಸಿದರೆ ಎಲ್ಲಾ ಜಾತಿ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟೊಟ್ಟಿಗೆ ಕರೆದೊಯ್ಯುತ್ತಿದ್ದಾರೆನ್ನುವುದು ಗೊತ್ತಾಗುತ್ತಿದೆ. ಜಾತಿ ಧರ್ಮಕ್ಕಿಂತ ಮುಖ್ಯವಾಗಿ ಪ್ರತಿಭೆಯನ್ನು ಗುರುತಿಸುವುದು ನಮ್ಮ ವೇದಿಕೆಯ ಉದ್ದೇಶ. ಜಾತಿ, ಅಂತಸ್ತು, ಅಲಂಕಾರದಿಂದ ಯಾರನ್ನು ಅಳೆಯಬಾರದು. ನಿಜವಾದ ಪ್ರತಿಭೆ ಬಹುದಿನಗಳ ಕಾಲ ಉಳಿಯುತ್ತದೆ ಎಂದು ತಿಳಿಸಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಎಚ್.ಶಫಿವುಲ್ಲಾ ಹದಿನೆಂಟನೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತನುಶ್ರಿ ಪ್ರಕಾಶನದ ಸಂಸ್ಥಾಪಕ ರಾಜು ಸೂಲೇನಹಳ್ಳಿ ಉಪನ್ಯಾಸ ನೀಡಿದರು.
ಶೋಭ ಮಲ್ಲಿಕಾರ್ಜುನ್, ಸತ್ಯಪ್ರಭಾ ವಸಂತಕುಮಾರ್ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕುಮಾರಸ್ವಾಮಿ ವಿರುದ್ಧ ಮತ್ತೊಂದು ದೂರು ದಾಖಲು : ಬೆದರಿಕೆ ಹಾಕಿದ್ದಾರೆಂದು ಕಂಪ್ಲೈಂಟ್ ಕೊಟ್ಟ ಎಡಿಜಿಪಿ..!

    ಕಳೆದ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ನಡುವೆ ಮಾತಿನ ಯುದ್ಧ, ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದವು. ಇದೀಗ ಎಡಿಜಿಪಿ ಚಂದ್ರಶೇಖರ್, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

DCP ಆಗಿ ಅಧಿಕಾರ ವಹಿಸಿಕೊಂಡ RCB ಸ್ಟಾರ್ ಕ್ರಿಕೆಟರ್ : ಸಿರಾಜ್ ಸಂಬಳ ಎಷ್ಟು ಗೊತ್ತಾ..?

ಟೀಂ ಇಂಡಿಯಾದ ಸ್ಟಾರ್ ವೇಗಿ ಎಂದೇ ಗುರುತಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ ಇದೀಗ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ ಸಿರಾಜ್ ಗೆ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ. ಸದ್ಯ ಮೊಹಮ್ಮದ್ ಸಿರಾಜ್ ತೆಲಂಗಾಣದ ಡೆಪ್ಯೂಟಿ

ದರ್ಶನ್ ಹೊರ ಬರುವ ಸುಳಿವು ಕೊಟ್ರಾ ವಿಜಯಲಕ್ಷ್ಮೀ: ಅಭಿಮಾನಿಗಳಿಗೆ ಹೇಳಿದ್ದೇನು..?

  ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯವಾಗಿದೆ. ಫ್ಯಾಮಿಲಿ, ಫ್ರೆಂಡ್ಸ್, ಫ್ಯಾನ್ಸ್ ತುದಿಗಾಲಿನಲ್ಲಿ ನಿಂತು ನಮ್ಮ ಡಿ ಬಾಸ್ ಯಾವಾಗ ಬರ್ತಾರೆ ಅಂತ ಕಾಯ್ತಿದ್ದಾರೆ. ದಸರಾಗಾದರೂ

error: Content is protected !!