Kannada News | suddione
  • Home
  • ಆರೋಗ್ಯ
  • ಕ್ರೀಡಾ ಸುದ್ದಿ
  • ಪ್ರಮುಖ ಸುದ್ದಿ
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಲೋಕಲ್ ಸುದ್ದಿ
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬೆಂಗಳೂರು
    • ಮೈಸೂರು
  • ಸಿನಿ ಸುದ್ದಿ
Reading: ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಸಮಾನ ಪಾಲು ಸಿಗಬೇಕು : ಭೀಮನಕೆರೆ ಶಿವಮೂರ್ತಿ
Subcrible Now
Kannada News | suddioneKannada News | suddione
Font ResizerAa
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ರಾಜ್ಯ ಸುದ್ದಿ
  • ಆರೋಗ್ಯ
  • ಸಿನಿ ಸುದ್ದಿ
  • ಕ್ರೀಡಾ ಸುದ್ದಿ
  • ಚಿತ್ರದುರ್ಗ
  • ಬೆಂಗಳೂರು
  • ದಾವಣಗೆರೆ
Search
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ರಾಜ್ಯ ಸುದ್ದಿ
  • ಆರೋಗ್ಯ
  • ಸಿನಿ ಸುದ್ದಿ
  • ಕ್ರೀಡಾ ಸುದ್ದಿ
  • ಚಿತ್ರದುರ್ಗ
  • ಬೆಂಗಳೂರು
  • ದಾವಣಗೆರೆ
Have an existing account? Sign In
Follow US
  • Legal Stuff
  • Contact
  • Privacy Policy
  • Disclaimer
  • Manage Cookies
  • Terms & Conditions
  • Terms and Conditions
  • Partners
Copyright © 2025 Suddione.com. All Rights Reserved.

ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಸಮಾನ ಪಾಲು ಸಿಗಬೇಕು : ಭೀಮನಕೆರೆ ಶಿವಮೂರ್ತಿ

suddionenews
Last updated: October 9, 2025 6:18 PM
suddionenews
ಚಿತ್ರದುರ್ಗ ಪ್ರಮುಖ ಸುದ್ದಿ
Share
1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 09 : ಆಳುವ ಸರ್ಕಾರಗಳು ಶೋಷಿತರು, ಬಹುಸಂಖ್ಯಾತರ ವಿರುದ್ದ ಕಾನೂನುಗಳನ್ನು ಜಾರಿಗೆ ತರುತ್ತಿರುವುದರ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕಾನ್ಷಿರಾಂರವರ 19 ನೇ ಪರಿನಿಬ್ಬಾಣದ ದಿನವಾದ ಗುರುವಾರದಿಂದ ಡಿ. 6, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಪರಿನಿಬ್ಬಾಣದವರೆಗೂ ಜಾತಿ ಜನಾಂಗದ ಜನಸಂಖ್ಯೆಗನುಗುಣವಾಗಿ ತಕ್ಕ ಪಾಲು, ಎಲ್ಲರಿಗೂ ಬೇಕು ಗೌರವದ ಬಾಳು ಬಹುಜನ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಭೀಮನಕೆರೆ ಶಿವಮೂರ್ತಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ಅಸಂಘಟಿತರನ್ನು ಸಂಘಟಿಸಿ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಕಾನ್ಷಿರಾಂ ಮಾಡಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಸಮಾನವಾದ ಪಾಲು ಸಿಗಬೇಕೆನ್ನುವುದು ಆಂದೋಲನ ಉದ್ದೇಶ. ರಾಜ್ಯದ ಮೂಲೆ ಮೂಲೆಗಳಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಬಹುಜನರ ಹಾಗೂ ಶೋಷಿತರ ಸ್ಥಿತಿಗತಿಗಳ ಕುರಿತು ಅರಿವು ಮೂಡಿಸಲಾಗುವುದೆಂದರು.
ಆಳುವ ಸರ್ಕಾರಗಳು ಶೋಷಿತರನ್ನು ಹೇಗೆ ವಂಚಿಸುತ್ತ ಬರುತ್ತಿವೆ ಎನ್ನುವುದನ್ನು ದಲಿತರಿಗೆ ಮನವರಿಕೆ ಮಾಡಿಕೊಡಲು ಆಂದೋಲನ ಹಮ್ಮಿಕೊಂಡಿದ್ದು, ಕಾನ್ಷಿರಾಂರವರ ಕನಸಿನಂತೆ ಅಧಿಕಾರ ಹಿಡಿಯಬೇಕಾಗಿರುವುದರಿಂದ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುವುದೆಂದರು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ರಾಜ್ಯ ಕಾರ್ಯದರ್ಶಿ ಕೆ.ಎನ್.ದೊಡ್ಡೆಟ್ಟಪ್ಪ, ಲಕ್ಷ್ಮಮ್ಮ ಹನುಮಂತರಾಯ, ರಾಘವೇಂದ್ರ, ಮಲ್ಲಿಕಾರ್ಜುನ, ಚಂದ್ರಣ್ಣ, ಪರಮೇಶ್ವರಪ್ಪ, ಕೂನಬೇವು ಮಹಾಂತೇಶ್, ಜಗದೀಶ್, ರಾಜೇಶ್, ಜಯಣ್ಣ, ಸತೀಶ್, ರಾಮಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

TAGGED:bengaluruBhimanekere Shivamurthychitradurgaequal shareKannada newspopulationsuddionesuddione newsಕನ್ನಡ ನ್ಯೂಸ್ಚಿತ್ರದುರ್ಗಜನಸಂಖ್ಯೆಬೆಂಗಳೂರುಭೀಮನಕೆರೆ ಶಿವಮೂರ್ತಿಸುದ್ದಿಒನ್ಸುದ್ದಿಒನ್ ನ್ಯೂಸ್

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link
  • Home
  • ಆರೋಗ್ಯ
  • ಕ್ರೀಡಾ ಸುದ್ದಿ
  • ಪ್ರಮುಖ ಸುದ್ದಿ
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಲೋಕಲ್ ಸುದ್ದಿ
  • ಸಿನಿ ಸುದ್ದಿ

ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌

ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌. ಇಂದಿನ ಪ್ರಮುಖ ಬೆಳವಣಿಗೆಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ. 

Our website stores cookies on your computer. They allow us to remember you and help personalize your experience with our site..
Read our privacy policy for more information.

Copyright © 2014-2025 Suddione.com . All Rights Reserved.

Click here
Welcome Back!

Sign in to your account

Username or Email Address
Password

Lost your password?