Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನೆಗೊಬ್ಬರು ರಾಷ್ಟ್ರೀಯ ಸ್ವಯಂ ಸೇವಕರು ಬೇಕು : ಕಲ್ಲಡ್ಕ ಪ್ರಭಾಕರ್ ಭಟ್

---Advertisement---

ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 21 : ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುವ ಹಿನ್ನೆಲೆಯಲ್ಲಿ ಹಿರಿಯೂರು ಗ್ರಾಮಾಂತರ ಕಾರ್ಯಕರ್ತರ ಬೈಠಕ್ ಅನ್ನು ತಾಲೂಕಿನ ಮಸ್ಕಲ್ ಮಟ್ಟಿ ಗ್ರಾಮದಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ಹಿರಿಯ ಕಾರ್ಯಕರ್ತರ ಜೊತೆಗೆ ಇಂದಿನ ಯುವ ಸಮೂಹವನ್ನು ಸಹ ಜೋಡಿಸಿಕೊಂಡು ಸುಭದ್ರ, ಸಶಕ್ತ ರಾಷ್ಟ್ರದ ನಿರ್ಮಾಣ ಮಾಡಬೇಕಿದೆ. 1925 ರ ಸಂಘ ಸ್ಥಾಪನೆಯ ಉದ್ದೇಶವನ್ನು ಕಾರ್ಯಕರ್ತರು ಗಮನದಲ್ಲಿರಿಸಿಕೊಳ್ಳಬೇಕು.ಗ್ರಾಮದ ಪ್ರತಿ ಮನೆಯಲ್ಲಿಯೂ ಕೂಡ ಸಂಘದ ಸ್ವಯಂ ಸೇವಕರು ಇರಬೇಕು. ಹೊಸ ಸ್ವಯಂ ಸೇವಕರನ್ನ ಶಾಖೆಗೆ ಕರೆತರುವುದು ಹಿರಿಯ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೇವಲ ಶಾಖೆಗಳನ್ನು ನಡೆಸದೆ ವಿದ್ಯಾರ್ಥಿಗಳಿಗಾಗಿ ಎಬಿವಿಪಿ, ರೈತರಿಗಾಗಿ ಕಿಸಾನ್ ಸಂಘ, ಆದಿವಾಸಿಗಳಿಗಾಗಿ ವನವಾಸಿ ಕಲ್ಯಾಣ, ಕಾರ್ಮಿಕರಿಗಾಗಿ ಭಾರತೀಯ ಕಿಸಾನ್ ಸಂಘ, ರಾಜಕೀಯಕ್ಕಾಗಿ ಬಾಜಪ, ಹಿಂದೂಗಳ ಜಾಗೃತಿಗಾಗಿ ಹಿಂದೂ ಜಾಗರಣಾ ವೇದಿಕೆ ಹೀಗೆ ಸುಮಾರು 144 ಸಂಘಟನೆಗಳನ್ನು ರಾಷ್ಟ್ರೀಯತೆಗಾಗಿ ಸ್ಥಾಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಶ್ರೀನಿವಾಸ್, ವಿಶ್ವನಾಥ್, ಶಿವು, ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಅಭಿನಂದನ್‌, ಸಂಘದ ಕಾರ್ಯಕರ್ತರಾದ ಸುರೇಶ್, ಸನಸೇಖರ್, ಸುಕುಮಾರನ್, ರಾಮ್ ರಾಜ್, ನಾಮದೇವ್ ಮುಂತಾದವರು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...