ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಲ್ಲಿ ಮೊದಲೇ ಏನೇನೋ ಆಗ್ತಿದೆ. ಹೀಗಿರುವಾಗ ಬಿಜೆಪಿಯಲ್ಲಿದ್ದ ಶಾಸಕ ಯತ್ನಾಳ್ ಅವರು ಕಾಂಗ್ರೆಸ್ ಸಿಎಂ ಮತ್ತು ಡಿಸಿಎಂ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನ ನೀಡಿದ್ದಾರೆ. ಒಂದು ಸರ್ಕಾರ ಅಂದ್ರೆ ಸಾಮಾನ್ಯವಾಗಿ ಅಭಿವೃದ್ಧಿ ಆಗಬೇಕು, ಜನರಿಗೆ ಏನು ಸೌಲಭ್ಯ ಸಿಗಬೇಕೋ ಅದು ಸಿಗ್ತಾ ಇಲ್ಲ. ಎಲ್ಲಾ ನೇಮಕಾತಿಗಳು ಇವತ್ತು ಸ್ಥಗಿತವಾಗಿದೆ. ಸಾಧನೆ ಶೂನ್ಯ. ಆದರೆ ಭ್ರಷ್ಟಾಚಾರ ವ್ಯಾಪಕ ಎಂದು ಹೌಹಾರಿದ್ದಾರೆ.
ಡಿಕೆ ಶಿವಕುಮಾರ್ ಅವರು ಪಾಪ ಹತಾಶರಾಗಿದ್ದಾರೆ. ಸಾಕಷ್ಟು ತಯಾರಿಯನ್ನು ಅವರು ಮಾಡಿಕೊಂಡಿದ್ದರು. ಬಿಹಾರಕ್ಕೆ ಸಾಕಷ್ಟು ಹಣ ಕೊಟ್ಟು ಕಳುಹಿಸಿದ್ದರು. ಅದರಲ್ಲಿ ಸರ್ಕಾರದ ಅತಿರಥ ಮಹಾರಥರು ಸುಮಾರು ತಿಂಗಳುಗಟ್ಟಲೇ ಪ್ರಚಾರ ಮಾಡಿ ಬಂದ್ರು ಕೂಡ ಸೋತಿದ್ದಾರೆ. ಅಂದ್ರೆ ಡಿಕೆ ಶಿವಕುಮಾರ್ ಅವರಿಗೆ ಭ್ರಮನಿರಸವಾಗಿದೆ. ಬಿಹಾರ ಚುನಾವಣೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಮುಂದೆ ತಲೆಬಾಗಿ ನಿಂತಿದೆ.
ಯಾಕಂದ್ರೆ ಕರ್ನಾಟಕದಲ್ಲಿ ಈಗ ಗೊಂದಲ ಸೃಷ್ಟಿ ಮಾಡಿದ್ರೆ ಇಲ್ಲಿಯೂ ಅಧಿಕಾರ ಕಳೆದುಕೊಳ್ತೀವಿ ಅಂತ ಇವತ್ತು ಸಿದ್ದರಾಮಯ್ಯ ಅವರಿಗೆ ಕೈ ಹಚ್ಚುವಂತಹ ತಾಕತ್ತು ಕಾಂಗ್ರೆಸ್ ಹೈಕಮಾಂಡ್ ಗೆ ಇಲ್ಲ. ಡಿಕೆ ಶಿವಕುಮಾರ್ ಹಿಂದೆ ಇವತ್ತು ಶಾಸಕರೇ ಇಲ್ಲ. ಎಲ್ಲಾ ಗಯಾಬ್ ಆಗಿದ್ದಾರೆ. ಇತ್ತ ಅಭಿವೃದ್ಧಿ ಆಗ್ತಾ ಇಲ್ಲ. ನಿರುದ್ಯೋಗ ಜಾಸ್ತಿಯಾಗಿದೆ. ಸರ್ಕಾರಿ ಖಾಲಿ ಹುದ್ದೆಗಳು ಜಾಸ್ತಿ ಇದ್ರು ಕೂಡ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿಲ್ಲ. ನಾನು ರಾಜ್ಯಪಾಲರಿಗೆ ಈ ಸಂಬಂಧ ದೂರು ನೀಡುತ್ತೇನೆ ಎಂಬ ಮಾತನ್ನು ಯತ್ನಾಳ್ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











