Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕ್ರೀಡೆಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಗಳನ್ನು ಸದೃಢರಾಗಿಸುತ್ತದೆ : ದೀಪಕ್ ದೊರೆವರೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, (ಡಿ.01) : ಕ್ರೀಡೆಗಳು ಪ್ರತಿಯೊಬ್ಬರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತವೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಗಳನ್ನು ಸದೃಢರಾಗಿಸುತ್ತದೆ. ಕ್ರೀಡೆಯಿಂದ ಮನೋಲ್ಲಾಸ ಎದುರಾಗುವ ಜೊತೆಗೆ ಇಡೀ ದಿನವನ್ನು ಲವಲವಿಕೆಯಿಂದ ಇದ್ದು ಇತರೆ ದಿನನಿತ್ಯದ ಕೆಲಸಗಳಿಗೆ ಸದಾ ಸ್ಪೂರ್ತಿದಾಯಕ ವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕರಾದ ದೀಪಕ್ ದೊರೆವರೆ ಹೇಳಿದರು.

ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿ ಮತ್ತು ನೌಕರರ ಕ್ರೀಡಾಕೂಟ ಮತ್ತು ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎಲ್ಲ 20 ತಂಡಗಳಿಗೆ  ಕ್ರೀಡಾಕೂಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವಂತಾೆ ಸೂಚನೆನೀಡಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ, ಭಾರತ ತಂಡವನ್ನು  ಪ್ರತಿನಿಧಿಸಿರುವ, ಐಪಿಎಲ್ ಆಟಗಾರ, RCB ಪ್ರತಿನಿಧಿಯಾದ  ಅರವಿಂದ್ ಶ್ರೀನಾಥ್ ಹಾಗೂ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ರಾಜ್ಯಾಧ್ಯಕ್ಷ ಷಡಕ್ಷರಿ ಸಿ.ಎಸ್ ಕ್ರೀಡಾ ಬಲೂನ್ ಹಾರಿಸಿರುವ ಮೂಲಕ  ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು,
ನಾ ಕಂಡಂತೆ  ಕರ್ನಾಟಕದ  ಯಾವ ಇಲಾಖೆಗಳಲ್ಲೂ ಇಂತಹ ಕ್ರೀಡಾಕೂಟವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿರುವುದು ಇತಿಹಾಸದಲ್ಲೇ ಇಲ್ಲ. ಇದನ್ನು ನಾನು ಇಲಾಖೆಯ ನೌಕರನಾಗಿ ಹೇಳುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ. ಹೇಳಿಕೇಳಿ ನಮ್ಮ ಇಲಾಖೆಯ ನೌಕರರು ಇಡೀ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯನ್ನು ಹೊಂದಿರುವುದು ಇಲಾಖೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸುವುದು ನಿಜಕ್ಕೂ ಶ್ಲಾಘನೀಯ.

ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿರುವ ಚಿತ್ರದುರ್ಗದ  ಇಲಾಖೆಯ ನೌಕರ ಬಂಧುಗಳಿಗೆ ಅಭಿನಂದಿಸುತ್ತೇನೆ. ಇದೇ ರೀತಿ ಮುಂದೆಯೂ ಸಹ ನಮ್ಮ ಇಲಾಖೆಯ ಕ್ರೀಡಾಕೂಟಗಳು ಅತ್ಯಂತ ಮನೋಹರವಾಗಿ ಮೂಡಿಬರಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ. ಹಾಗೂ ಈ ಕಾರ್ಯಕ್ರಮಕ್ಕೆ ತಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮವನ್ನು  ಸನ್ನದುಗೊಳಿಸಲು ಸಹಕರಿಸಿದ ಇಲಾಖೆಯ ದೀಪಕ್ ದೊರೆವರೆ ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಎಲ್ಲಾ ಕ್ರೀಡಾಪಟುಗಳು ಸಂಯಮದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಇಲಾಖೆಯ ಗರಿಮೆಯನ್ನು ಹೆಚ್ಚಿಸಬೇಕೆಂದು ಹೇಳಿದರು.

ಅರವಿಂದ್ ಶ್ರೀನಾಥ್ ರವರು ಮಾತನಾಡಿ,
ಕ್ರೀಡೆಯಲ್ಲಿ ಸಮಯ ಪಾಲನೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡು ಸಮಯ ಪಾಲನೆಯಿಂದ ತಮ್ಮ ಜೀವನ ಶಿಸ್ತುಬದ್ಧವಾಗಿ ನಡೆಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ನಂದಿನಿ ದೇವಿ ಮಾತನಾಡಿ, ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡೆಗಳಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂದು ಇಲಾಖೆ ಮುಖ್ಯಸ್ಥರಾದ ದೀಪಕ್ ದೊರೆವರೆ  ಅವರಲ್ಲಿ ಮನವಿ ಮಾಡಿ, ಕ್ರೀಡಾಪಟುಗಳಿಗೆ ಶುಭ ಕೋರಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ  ಅತಿಥಿಗಳಿಗೆ, ಗಣ್ಯರಿಗೆ, ಅಧಿಕಾರಿ ನೌಕರರಿಗೆ, ಕ್ರೀಡಾಪಟುಗಳಿಗೆ  ಸ್ವಾಗತ ಕೋರಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ
ಅಪರ ನಿರ್ದೇಶಕ ಕಪೂರ್ ಲಿಂಗಯ್ಯ, ಶ್ರೀಮತಿ ಜ್ಯೋತಿ ಡಿ ಕುಂದರ್ CAO VJNL, ಡಿ.ಆರ್ ಮಧು CAO ZP,  ಸಿ.ಜಿ ಶ್ರೀನಿವಾಸ್ ಹಿರಿಯ ಉಪ ನಿರ್ದೇಶಕರು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಶಿವಮೊಗ್ಗ  ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ,  ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ರಾಜ್ಯ ಪರಿಷತ್ ಸದಸ್ಯ ಬಿ. ಗಂಗಾಧರ್, ಜಿಲ್ಲಾಧ್ಯಕ್ಷ  ಕೆ.ನಾಗರಾಜ್ ಮತ್ತು  ಪದಾಧಿಕಾರಿಗಳು ನಿವೃತ್ತ ಹಿರಿಯ ಅಧಿಕಾರಿಗಳಾದ ರಮೇಶ್ ರಾವ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

PM Modi: ಇವರು ನನ್ನನ್ನು ಜೀವಂತ ಸಮಾಧಿ ಮಾಡುತ್ತಾರೆ : ಪ್ರಧಾನಿ ನರೇಂದ್ರ ಮೋದಿ

ಸುದ್ದಿಒನ್ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. विकसित भारत के निर्माण के महायज्ञ में आहुति देने

ಹಿಂದೂಗಳ ಜನಸಂಖ್ಯೆ ಪ್ರಮಾಣ ಇಳಿಕೆ : ಸಮಾಜ ಮತ್ತು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು : ಪ್ರಹ್ಲಾದ್ ಜೋಶಿ

  ಹುಬ್ಬಳ್ಳಿ: ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಇಳಿಕೆಯಾಗಿದ್ದು ಮುಸ್ಲಿಂ ಸಮುದಾಯದ ಜನಸಂಖ್ಯೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವರದಿ ಆತಂಕಕಾರಿಯಾಗಿದೆ. ಇದನ್ನು ಸರ್ಕಾರ ಹಾಗೂ

Arvind Kejriwal : ದೆಹಲಿ ಸಿಎಂ ಕೇಜ್ರಿವಾಲ್‌ಗೆ ಬಿಗ್ ರಿಲೀಫ್.. ಮಧ್ಯಂತರ ಜಾಮೀನು ಮಂಜೂರು..!

ಸುದ್ದಿಒನ್ : ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಸುಪ್ರೀಂ ಕೋರ್ಟ್ ಶುಕ್ರವಾರ (ಮೇ 10) ಕೇಜ್ರಿವಾಲ್‌ಗೆ ಜೂನ್

error: Content is protected !!