ರಾಜ್ಯದ ಜನರಿಗೆ ಕರೆಂಟ್ ಶಾಕ್: ವಿದ್ಯುತ್ ದರ ಹೆಚ್ಚಳ

1 Min Read

 

ರಾಜ್ಯದ ಜನರಿಗೆ ಸರ್ಕಾರ ಶಾಕ್​ ನೀಡಲು ಮುಂದಾಗಿದೆ‌.ಏಪ್ರಿಲ್‌ 1ರಿಂದ ವಿದ್ಯುತ್‌ ದರ ಹೆಚ್ಚಾಗಲಿದ್ದು, ಪ್ರತಿ ಯೂನಿಟ್‌ಗೆ 12ರಿಂದ 15 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲು ಕರ್ನಾಟಕ ವಿದ್ಯುತ್‌ ಸುಧಾರಣಾ ಆಯೋಗ( ಕೆಇಆರ್‌ಸಿ) ತೀರ್ಮಾನಿಸಿದೆ.

ರಾಜ್ಯದ ಐದು ಎಸ್ಕಾಂಗಳು ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ, 2026-27ಗೆ ಸರಾಸರಿ 64 ಪೈಸೆಯಷ್ಟು ದರ ಏರಿಕೆ ಕೇಳಲಾಗಿದೆ. ಆದರೆ ಕೆಲವು ವರ್ಗಗಳಲ್ಲಿ ಇದು 67ರಿಂದ 99 ಪೈಸೆಗಳವರೆಗೆ ಏರಿಕೆಯಾಗಬಹುದು ಎಂದು ಸೂಚನೆಗಳಿವೆ. ದಿನಬಳಕೆ (ಡೊಮೆಸ್ಟಿಕ್‌) ವಿದ್ಯುತ್‌ ಬಳಕೆಯಲ್ಲಿ ಸ್ವಲ್ಪ ಏರಿಕೆಯಾಗಬಹುದು. ಕೈಗಾರಿಕಾ ಮತ್ತು ವಾಣಿಜ್ಯ ವಲಯದಲ್ಲಿ ಬಳಸುವ ವಿದ್ಯುತ್‌ ದರದಲ್ಲೂ ಹೆಚ್ಚಳ ಸಾಧ್ಯತೆ ಇದೆ.ಕೆಲವು ವರ್ಗಗಳಲ್ಲಿ ಇದು ಹೆಚ್ಚು ಆಗಬಹುದು. ಫಿಕ್ಸೆಡ್‌ ಚಾರ್ಜ್‌ನಲ್ಲೂ 10 ರಿಂದ 20 ರೂ.ವರೆಗೆ ಏರಿಕೆ ಸಾಧ್ಯತೆ ಇದೆ.

 

ಈ ಕುರಿತಂತೆ ಮಾಹಿತಿ ನೀಡಿರುವ ಬೆಸ್ಕಾಂ MD ಡಾ.ಎನ್​​​​​​ ಶಿವಶಂಕರ್ ಅವರು, ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (Karnataka Electricity Regulatory Commission) ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಇಂದಿನ ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೇವೆ. 2025-26ರಲ್ಲಿ 2,800 ಕೋಟಿ ರೂಪಾಯಿ ಕೊರತೆ ಕಂಡುಬಂದಿದೆ. ಹೀಗಾಗಿ ಈ ಕೊರತೆ ಸರಿದೂಗಿಸಲು ಮನವಿ ಸಲ್ಲಿಸಿದ್ದೇವೆ. ಸಧ್ಯದಲ್ಲೇ ಅಂತಿಮ ನಿರ್ಧಾರವನ್ನು KERC ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ‌.

Share This Article
Enable Notifications OK No thanks