Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಏಜೆಂಟಾಗಿ ಕೆಲಸ ಮಾಡುತ್ತಿದೆ : ತಾಜ್‍ಪೀರ್ ಆಕ್ರೋಶ

---Advertisement---

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮೇ. 29 :
ಸಂವಿಧಾನ ದೇಶದಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಸಹಾ ಮತದಾನದ ಹಕ್ಕನ್ನು ನೀಡಿದೆ ಆದರೆ ಈಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರ ಎಸ್.ಐ.ಆರ್. ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿದುಕೊಳ್ಳು ಪ್ರಯತ್ನ ನಡೆಸುತ್ತಿದೆ ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ.ತಾಜಪೀರ್ ದೂರಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಭಾರತ ದೇಶ ಸ್ವಾತಂತ್ರ್ಯ ಬಂದು ನಮಗೆ ಸಂವಿಧಾನ ರಚನೆಯಾದ ದಿನದಿಂದಲೂ ಸಹಾ ದೇಶದಲ್ಲಿನ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಎನ್ನುವುದು ಬಹು ಮುಖ್ಯವಾದ ಕಾರ್ಯವಾಗಿದೆ ನಮಗೆ ಯಾವ ರಾಜಕೀಯ ವ್ಯಕ್ತಿ ಇಷ್ಟವೂ ಅವರನ್ನು ಆರಿಸಿಕೊಳ್ಳುವ ಹಕ್ಕು ಇದಾಗಿದೆ, ಇದರಿಂದ ಗಟ್ಟಿಯಾದ ಪ್ರಜಾಪ್ರಭುತ್ವನ್ನು ನಿರ್ಮಾಣ ಮಾಡಲು ಸಹಕಾರಿಯಾಗಿದೆ, 10 ವರ್ಷಕ್ಕೊಮ್ಮೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವುದು ಉತ್ತಮವಾದ ಕಾರ್ಯವಾಗಿದೆ. ಇದರಲ್ಲಿ ಹೂಸದಾಗಿ ಸೇರ್ಪಡೆ, ಮರಣ ಹೊಂದಿದವರು ಹೆಸರು ತೆಗೆಯುವುದು ಬೇರೆ ಕಡೆಯಲ್ಲಿ ವರ್ಗವಾದರು ಹೆಸರನ್ನು ಕಳುಹಿಸುವುದು ಸೇರಿದಂತೆ ಇತರೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯವುದು ಸಾಮಾನ್ಯವಾಗಿದೆ ಎಂದರು.

ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಸರ್ಕಾರ ದುರುದ್ದೇಶದಿಂದ ಎಸ್.ಐ.ಆರ್,ನ್ನು ಜಾರಿ ಮಾಡುವುದರ ಮೂಲಕ ದೇಶದಲ್ಲಿ ನಿಜವಾದ ಮತದಾರರಿಗೆ ಕುತ್ತನ್ನು ತರುವಂತ ಕಾರ್ಯವನ್ನು ಮಾಡಲಾಗುತ್ತಿದೆ. ದೇಶದಲ್ಲಿನ ವಲಸಿಗರನ್ನು ಹೊಡೆದೊಡಿಸುವ ನೆಪದಲ್ಲಿ ನಿಜವಾದ ಮತದಾರರ ಹೆಸರನ್ನು ತೆಗೆಯುವಂತ ಕಾರ್ಯವನ್ನು ಮಾಡುತ್ತಿದೆ. ಮತದಾರರ ತಂದೆ, ಅಜ್ಜರವರ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ಕೇಳುವುದು ಸರಿಯಲ್ಲ. ಇದ್ದಲ್ಲದೆ ಮತದಾರರು ದಾಖಲೆಗಳನ್ನು ತೆಗೆದುಕೊಂಡು ಕೊಡಲು ಸಹಾ ಸಮಯವನ್ನು ನೀಡದೇ ಆತುರವಾಗಿ ಇದನ್ನು ಮಾಡಲು ಮುಂದಾಗಿದೆ ಇದಕ್ಕೆ ಚುನಾವಣಾ ಆಯೋಗವೂ ಸಹಾ ಸಾಥ್ ನೀಡುವುದರ ಮೂಲಕ ಒಂದು ರೀತಿಯಲ್ಲಿ ಆಯೋಗ ಕೇಂದ್ರ ಸರ್ಕಾರದ ಏಜೆಂಟಾಗಿ ಕೆಲಸ ಮಾಡುತ್ತಿದೆ ಎಂದು ತಾಜ್‍ಪೀರ್ ದೂರಿದ್ದಾರೆ.

ಎಸ್.ಐ.ಆರ್. ಕಾರ್ಯಚರಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವೂ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ನಮ್ಮ ಬೂತ್ ಎಲ್ಲಾ ಏಜೆಂಟರು ಸಹಾ ವಾರ್ಡನ ಪ್ರತಿ ಮನೆಗೆ ಹೋಗುವುದರ ಮೂಲಕ ಅಲ್ಲಿನ ಮತದಾರರ ಹೆಸರು ಸರಿಯಾಗಿ ಇದೇಯೇ ಇಲ್ಲವೆ ಎಂದು ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರುವಂತೆ ನೋಡಿಕೊಳ್ಳಲಾಗುವುದು. ಅದಕ್ಕೆ ಅಗತ್ಯವಾಗಿ ಬೇಕಾದ ದಾಖಲೆಗಳನ್ನು ಸಂಬಂಧಪಟ್ಟವರಿಗೆ ಸಲ್ಲಿಸುವ ಕಾರ್ಯವನ್ನು ನಮ್ಮವರು ಮಾಡಲಿದ್ದಾರೆ ಎಂದು ತಿಳಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now