ಶೈಕ್ಷಣಿಕವಾಗಿ ಯುವ ಪೀಳಿಗೆಯನ್ನು ಉತ್ತಮವಾಗಿ ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು : ಶಾಸಕ ಟಿ. ರಘುಮೂರ್ತಿ

ಚಳ್ಳಕೆರೆ, (ಏ.18) : ನೇಕಾರ ಸಮಾಜ ಏಳು ಉಪಜಾತಿಯ ಪರ್ಯಾಯ ಪದಗಳಿಂದ ಕೂಡಿದೆ. ಈ ಜನಾಂಗ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದು ಸಾಂಸ್ಕೃತಿಕವಾಗಿ ಮುಂದೆ ಬಂದಿದೆ. ಸಮಾಜದ ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ತಮ್ಮ ಮುಂದಿನ ಯುವ ಪೀಳಿಗೆಯನ್ನು ಉತ್ತಮವಾಗಿ ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ನಗರದಲ್ಲಿಂದು ದೇವರ ದಾಸಿಮಯ್ಯನವರ 1043 ನೇ ಜಯಂತಿಯ ಸಮಾರಂಭದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಇರುವಂತಹ ಚಿಕ್ಕಪುಟ್ಟ ಸಮುದಾಯಗಳನ್ನು ಗುರುತಿಸಿ ಸಮುದಾಯಗಳಿಗೆ ಅಗತ್ಯವಿರುವಂತಹ ಸಮುದಾಯಗಳನ್ನು ಸರ್ಕಾರದ ಅನುದಾನದಲ್ಲಿ ನಿರ್ಮಿಸಿ ಕೊಡಲಾಗಿದೆ. ಜನಾಂಗ ಏಕತೆಯನ್ನು ಪ್ರದರ್ಶಿಸಲು ತಮಗೆ ಅಗತ್ಯವಿರುವಂತಹ ಬೇಡಿಕೆಗಳನ್ನು ಪಡೆದುಕೊಳ್ಳಬಹುದೆಂದು ಹೇಳಿದರು.

ತಹಶೀಲ್ದಾರ್ ರಘುಮೂರ್ತಿ ಮಾತನಾಡಿ, ದೇವರ ದಾಸಿಮಯ್ಯನವರು 2ನೇ ಶತಮಾನಕ್ಕೂ ಪೂರ್ವದ ಕಾಲಮಾನದಲ್ಲಿ ವಚನಗಳನ್ನು ರಚಿಸಿ ಉಳಿದ ವಚನಕಾರರಿಗೆ ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಪರಶಿವನಿಗೆ ಬಟ್ಟೆಯನ್ನು ನೈದು ಕೊಟ್ಟಂತ ಕೊಟ್ಟಂತಹ ಉದಾಹರಣೆಗಳಿವೆ.

ಸಮಾಜದ ಮುಖಂಡರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಮಕ್ಕಳನ್ನು ತರಬೇಕೆಂದರು. ದೇವರ ದಾಸಿಮಯ್ಯನವರು ರಚಿಸಿದಂತಹ
ವಚನಗಳು ಹಿಂದಿನ ಕಾಲಮಾನಕ್ಕೂ ಪ್ರಸ್ತುತವಾಗಿದೆ.

ಸಾಹಿತಿ ಹಾಗೂ ಸಮಾಜದ ಮುಖಂಡ ಪಿತಾಂಬರ್ ಮಾತನಾಡಿ ಶಾಸಕರು ಮತ್ತು ತಹಶೀಲ್ದಾರ್ ಅವರು ನಮ್ಮ ಸಮಾಜದ ಕಾರ್ಯಕ್ಕೆ ತುಂಬು ಹೃದಯದ ಔದಾರ್ಯ ತೋರಿದ್ದಾರೆ ಮತ್ತು ದೇವರ ದಾಸಿಮಯ್ಯನವರ ಜನಗಳು ಯುವಜನಾಂಗದ ಕಣ್ ತೆರೆಸುತ್ತವೆ ಎಂದು ಹೇಳಿದರು.

ಸಮಾಜದ ರಾಜ್ಯಾಧ್ಯಕ್ಷ  ಸೋಮಶೇಖರ್, ತಿಪ್ಪೇಸ್ವಾಮಿ, ವೆಂಕಟೇಶ್, ಭಾಸ್ಕರ್ ನಾಯಕ್, ಶಿವಮೂರ್ತಪ್ಪ, ನಾಗಭೂಷಣ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!