ಬಿರು ಬೇಸಿಗೆಗೆ ಈ ಹಣ್ಣುಗಳನ್ನು ತಪ್ಪದೆ‌ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ

1 Min Read

ಹೊರಗೆ ಹೋದರೆ ತಣ್ಣನೆಯ ಗಾಳಿ ಎಲ್ಲಾದರೂ ಬೀಸುತ್ತಾ, ನೆರಳು ಸಿಗುತಚತಾ, ಎಷ್ಟೊತ್ತಿಗೆ ಮನೆ ಸೇರ್ತೀವಿ ಎಂಬ ಚಿಂತೆ ಶುರುವಾಗುತ್ತದೆ. ಅದಕ್ಕೆ ಕಾರಣವೇ ಈ ಬೇಸಿಗೆ. ಹೌದು ಈ ವರ್ಷವಂತೂ ಬೇಸಿಗೆ ಬೇಗನೆ ಬಂದಿರೋದು ಅಲ್ಲದೆ, ಹೆಚ್ಚಿನ ತಾಪಮಾನ ಆರಂಭವಾಗಿದೆ. ಪ್ರತಿವರ್ಷ ಕೂಡ ಬಿಸಿಲು ಹೆಚ್ಚಾಗುತ್ತಲೆ ಇರುತ್ತದೆ. ಅದರಂತೆ ಈ ವರ್ಷವೂ ಸಿಕ್ಕಾಪಟ್ಟೆ ಜಾಸ್ತಿ ಇದೆ. ಈ ಬೇಸಿಗೆ ಕಾಲಕ್ಕೆ ನಮ್ಮ ಆರೋಗ್ಯದ ವಿಚಾರ ಬಹಳ ಮುಖ್ಯವಾಗುತ್ತದೆ. ನೀರಿನಂಶ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸೇರಿಸಲೇಬೇಕು. ಇಲ್ಲವಾದಲ್ಲಿ ಡಿಹೈಡ್ರೇಷನ್ ಸಮಸ್ಯೆ ಶುರುವಾಗಿ ಬಿಡುತ್ತದೆ. ಹೀಗಾಗಿ ಈ ಹಣ್ಣುಗಳನ್ನು ಮಿಸ್ ಮಾಡದೆ ತಿನ್ಮಿ.

* ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಹಾಗೇ ಈ ಸಮಯದಲ್ಲಿ ಹೆಚ್ಚು ಜನ ಕಲ್ಲಂಗಡಿ ಹಣ್ಣನ್ನೇ ತಿನ್ನುವುದು. ಇದರಲ್ಲಿ 96% ನೀರಿನಂಶ ಇರುವ ಕಾರಣ ದೇಹಕ್ಕರ ತಂಪನ್ನು ನೀಡುತ್ತದೆ.

* ಹಾಗೇ ಸ್ಟ್ರಾಬೆರಿ ಕೂಡ ಈ ಬೇಸಿಗೆಗೆ ಬಹಳ ಒಳ್ಳೆಯದು. ಇದರಲ್ಲೂ 92% ನೀರಿನ ಅಂಶ ಇರುವ ಕಾರಣ, ಪ್ರತಿದಿನ ಸ್ಟ್ರಾಬೆರಿ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರಲಿದೆ. ನೀರಿನ ಅಂಶ ದೇಹದಲ್ಲಿ ಶೇಕರಣೆಯಾದಂತೆ ಆಗುತ್ತದೆ.

* ಟಮೋಟೋ, ಹೌದು ಅಡುಗೆಗೆ ಬಳಸುವ ಟಮೋಟೋವನ್ನು ಹಾಗೇ ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭವಿದೆ ಅನ್ನೋದು ಗೊತ್ತಾ. ಅದರಲ್ಲೂ ಈ ಬೇಸಿಗೆ ಬೇಗೆಯನ್ನು ಒಂದು ಟಮೋಟೋ ನೀಗಿಸುತ್ತದೆ. ಟಮೋಟೋದಲ್ಲಿ ಕೂಡ 94% ನೀರಿನ ಅಂಶ ಇರುವ ಕಾರಣ ಈ ಬೇಸಿಗೆಗೆ ದೇಹವನ್ನು ಆರೋಗ್ಯಯುತವಾಗಿ ಕಾಪಾಡಲು ಉಪಯೋಗಕಾರಿ.

* ಕಿತ್ತಳೆ ಹಣ್ಣಿನಲ್ಲೂ ನೀರಿನಂಶ 96% ಪರ್ಸೆಂಟ್ ಇದೆ. ಹೀಗಾಗಿ ಈ ಎಲ್ಲಾ ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹ ಡಿಹೈಡ್ರೇಷನ್ ಆಗುವುದು ತಪ್ಪುತ್ತದೆ.

Share This Article
Leave a Comment

Leave a Reply

Your email address will not be published. Required fields are marked *