ಮೂಳೆಗಳು ಮತ್ತು ಹಲ್ಲುಗಳು ಗಟ್ಟಿಯಾಗಬೇಕೆಂದ್ರೆ ಬ್ರೋಕಲಿ ತಿನ್ನಿ..!

1 Min Read

ಬ್ರೋಕಲಿ ಈಚೆಗೆ ಸಿಕ್ಕಾಪಟ್ಟೆ ಫೇಮಸ್ ಆದಂತ ಒಂದು ತರಕಾರಿ. ವಿಟಮಿನ್ ರಿಚ್ ಇರುವಂತ ಬ್ರೋಕಲಿಯನ್ನು ಪ್ರತಿದಿನದ ಆಹಾರ ಕ್ರಮದಲ್ಲಿ ಸೇವಿಸುವುದರಿಂದ ಸಾಕಷ್ಟು ಪೋಷಕಾಂಶ ದೇಹಕ್ಕೆ ಸಿಗುತ್ತದೆ. ಅಷ್ಟೇ ಅಲ್ಲ ಹಲವು ಕಾಯಿಲೆಗಳಿಗೂ ಇದು ದಿವ್ಯೌಷಧವಿದ್ದಂತೆ. ಹಾಗಾದ್ರೆ ಯಾವ ಕಾಯಿಲೆಗೆಲ್ಲ ಇದು ರಾಮಬಾಣ ಎಂಬುದನ್ನು ನೋಡುವುದಾದರೆ.

* ಬ್ರೋಕಲಿ ಸೇವನೆ ಕ್ಯಾನ್ಸರ್ ಕಾಯಿಲೆ ತಡೆಗಟ್ಟಲು ಸಹಾಯಕವಾಗಿದೆ. ಇದರಲ್ಲಿ Sulforaphane ಮತ್ತು Indole – 3 – carbinol ಎಂಬ ಅಂಶಗಳು ಇದಾವೆ. ಇದರಿಂದ ಸ್ತನ ಕ್ಯಾನ್ಸರ್ ಗೆ ತಡೆ ಹಾಗೂ ನಿವಾರಣೆಗೆ ಸಹಾಯ. ಹೀಗಾಗಿ ಹೆಣ್ಣು ಮಕ್ಕಳು ಇದನ್ನು ಹೆಚ್ಚಾಗಿ ಬಳಕೆ ಮಾಡುವುದು ಉತ್ತಮ.

* ಸಾಕಷ್ಟು ಜನರಲ್ಲು ಮೂಳೆಯ ಸಮಸ್ಯೆ ಇದೆ. ಮೂಳೆಗಳು ಗಟ್ಟಿಯಾಗಬೇಕು ಅಂದ್ರೆ ಬ್ರೋಕಲಿ ಸೇವಿಸಿ ನೋಡಿ. ಯಾಕಂದ್ರೆ ಇದರಲ್ಲಿರುವ Calcium ಮತ್ತು Collagen ಗಳು ನಮ್ಮ ದೇಹದ ಎಲ್ಲಾ ಮೂಳೆಗಳು ಮತ್ತು ಹಲ್ಲುಗಳು ಗಟ್ಟಿಯಾಗಿ ಇರಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇದರಲ್ಲಿ ವಿಟಮಿನ್ K ಇರುವುದರಿಂದ Joints pain, Osteoporosis ತೊಂದರೆಯನ್ನು ಕಡಿಮೆ ಮಾಡುತ್ತದೆ.

* ವಿಟಮಿನ್ C ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು. ಯುವಕರ ತ್ವಜೆಯಂತೆ ಹೊಳೆಯುವುದಕ್ಕೆ ಸಹಕಾರಿ.

* ಜೀರ್ಣವಾಗುವ ನಾರಿನಂಶ ನಮ್ಮ ಜೀರ್ಣಾಂಗ ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಸಕ್ಕರೆ ಕಾಯಿಲೆ ಇರುವವರು ಬ್ರೋಕಲಿ ಸೇವನೆಯಿಂದ ರಕ್ತದ ಸಕ್ಕರೆ ಅಂಶ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಹೀಗಾಗಿ ಪ್ರತಿ ದಿನದ ಆಹಾರ ಸೇವನೆಯಲ್ಲಿ ಬ್ರೋಕಲಿ ಬಳಸಿದರೆ ಅತ್ಯುತ್ತಮ ಆರೋಗ್ಯ ನಿಮ್ಮದಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *