Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಸರಾ ನವರಾತ್ರಿ ಉತ್ಸವ : ಚಿತ್ರದುರ್ಗದಲ್ಲಿ ಗಮನ ಸೆಳೆದ ಗೊಂಬೆ ಪ್ರದರ್ಶನ

Facebook
Twitter
Telegram
WhatsApp

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, ಸುದ್ದಿಒನ್ , (ಸೆ.29): ದಸರಾ ನವರಾತ್ರಿ ಉತ್ಸವದ ನಿಮಿತ್ತ ಧವಳಗಿರಿ ಬಡಾವಣೆಯಲ್ಲಿರುವ ಶ್ರೀಮತಿ ಗೌರಿ(ಕೋಕಿಲ) ಸತ್ಯನಾರಾಯಣಚಾರ್ ದಂಪತಿಗಳು ತಮ್ಮ ನಿವಾಸದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಬಗೆಯ ಗೊಂಬೆಗಳನ್ನಿಟ್ಟು ಶ್ರದ್ದಾಭಕ್ತಿಯಿಂದ ದಿನವೂ ಪೂಜೆ ಸಲ್ಲಿಸುತ್ತಿದ್ದಾರೆ.

ಮರದಲ್ಲಿ ತಯಾರಿಸಿರುವ ಮೈಸೂರು ಅರಮನೆ, ಪಟ್ಟದ ಗೊಂಬೆ, ದಸರಾ ಆನೆಗಳು, ಶಿಕ್ಷಕರು, ಮಕ್ಕಳು, ಬೋರ್ಡ್ ಸ್ಕೂಲ್ ಸೆಟ್, ಮದುವೆ ಮಂಟಪ, ಪುರೋಹಿತರು, ವಧು-ವರರು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ, ವೆಂಕಟೇಶ್ವರ ಪದ್ಮಾವತಿ, ರುಕ್ಮಿಣಿ, ಪಾಂಡುರಂಗ, ಋಷಿಮುನಿಗಳು, ಶಂಕರಾಚಾರ್ಯರು, ಸುಬ್ರಮಣ್ಯ, ಗಣೇಶ, ಈಶ್ವರ, ಪಾರ್ವತಿ, ನಂದಿ, ನಾರದ, ಚಾಮುಂಡೇಶ್ವರಿದೇವಿ, ಚನ್ನಪಟ್ಟಣದ ಗೊಂಬೆಗಳು ಆಕರ್ಷಣೀಯವಾಗಿವೆ.

ದಸರಾ ಅಲಂಕೃತ ಆನೆಗಳು, ಗಂಡ-ಹೆಂಡತಿ, ಅಜ್ಜ-ಅಜ್ಜಿ, ಮೊಮ್ಮಕ್ಕಳು ಹೀಗೆ ಹತ್ತು ಹಲವಾರು ಬಗೆಯ ಗೊಂಬೆಗಳನ್ನಿಟ್ಟು ಒಂಬತ್ತು ದಿನಗಳ ಕಾಲ ಪೂಜೆ ಸಲ್ಲಿಸಿ ಬನ್ನಿಪೂಜೆ, ಕಥೆ, ದೇವಿ ಮಹಾತ್ಮೆ ಓದುವುದು, ಪ್ರಸಾದ, ನೈವೇದ್ಯದ ನಂತರ ಗೊಂಬೆಗಳಿಗೆ ಆರತಿ ಬೆಳಗಲಾಗುತ್ತದೆ.

ನಮ್ಮ ತಾತನ ಕಾಲದಿಂದ ಸುಮಾರು ಐವತ್ತು ವರ್ಷಗಳ ಹಿಂದಿನಿಂದಲೂ ದಸರಾ ನವರಾತ್ರಿಯಲ್ಲಿ ಗೊಂಬೆ ಪೂಜೆ ನಡೆಸಿಕೊಂಡು ಬರುತ್ತಿದ್ದು, ಪೂರ್ವಿಕರ ಪದ್ದತಿಯಂತೆ ನಾವುಗಳು ಪ್ರತಿ ವರ್ಷ ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಗೊಂಬೆಗಳನ್ನಿಟ್ಟು ಪೂಜಿಸುತ್ತಿರುವುದರಿಂದ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತದೆಂಬ  ನಂಬಿಕೆ ನಮ್ಮದು ಎಂದು ಶ್ರೀಮತಿ ಗೌರಿ(ಕೋಕಿಲ) ಸತ್ಯನಾರಾಯಣಚಾರ್ ದಂಪತಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ, ಈ ರಾಶಿಯವರಿಗೆ ವಂಶೋದ್ಧಾರ ಗಂಡು ಸಂತಾನದ ಚಿಂತೆ ಭಾನುವಾರ-ರಾಶಿ ಭವಿಷ್ಯ ಮೇ-12,2024 ಶಂಕರಾಚಾರ್ಯ ಜಯಂತಿ, ತಾಯಿ ದಿನ ಸೂರ್ಯೋದಯ: 05:49, ಸೂರ್ಯಾಸ್ತ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

error: Content is protected !!